ಲಕ್ಕಮುತ್ತೇನಹಳ್ಳಿಯಲ್ಲಿ ಡಿ.ಕೆ. ಶಿವಕುಮಾರ್‌ಗೆ ಸ್ವಾಗತ ಕೋರಿದ ಜಿ.ಪಂ. ಸದಸ್ಯ ಕೆ.ಎಸ್. ಬಸವಂತಪ್ಪ

ದಾವಣಗೆರೆ.ಜು.16: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸೂರಗೊಂಡನಕೊಪ್ಪ ಗ್ರಾಮದ ಕಾರ್ಯಕ್ರಮಕ್ಕೆ ಆಗಮಿಸಿದ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಮಾಯಕೊಂಡ ಕ್ಷೇತ್ರದ ಗಡಿ ಗ್ರಾಮ ಲಕ್ಕಮುತ್ತೇನಹಳ್ಳಿಯಲ್ಲಿ ಜಿ.ಪಂ. ಸದಸ್ಯ ಕೆ.ಎಸ್. ಬಸವಂತಪ್ಪ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷರಾದ ಎಸ್.ಕೆ. ಚಂದ್ರಶೇಖರ್, ನೀರ್ಥಡಿ ಕಾಂಗ್ರೆಸ್ ಮುಖಂಡರಾದ ಶಿವಣ್ಣ, ಶ್ರೀಸ್ವಾಮಿ, ಸುರೇಶ್, ಲಕ್ಕಮುತ್ತೇನಹಳ್ಳಿಯ ನಾರಪ್ಪ, ತಾ.ಪಂ. ಮಾಜಿ ಸದಸ್ಯರಾದ ಶಂಭುಲಿಂಗಪ್ಪ, ಆನಗೋಡು ಕಾಂಗ್ರೆಸ್ ಮುಖಂಡರಾದ ಬಸವರಾಜ್, ರವಿ, ಗ್ರಾ.ಪಂ. ಸದಸ್ಯರಾದ ಲೋಕೇಶ್, ಮುಖಂಡರುಗಳಾದ ಕಂದನಕೋವಿ ದೇವೇಂದ್ರಪ್ಪ, ದ್ಯಾಮಣ್ಣ, ಹುಣಸಿಕಟ್ಟೆ ಮಲ್ಲಣ್ಣ, ಹುಲಿಕಟ್ಟೆ ಕೊಟ್ರೇಶ್‌ನಾಯ್ಕ, ಚಂದ್ರಪ್ಪ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.