ಸಿದ್ದರಾಮಯ್ಯ ಅಮೃತಮಹೋತ್ಸವಕ್ಕೆ ಮಳೆ ಬಾರದಂತೆ ನಾಯಕರ ಪ್ರಾರ್ಥನೆ.! ಮೊದಲು ಬಂದವರಿಗೆ ಪೆಂಡಾಲ್ ರಕ್ಷಣೆ.!

ದಾವಣಗೆರೆ: ಇಂದು ದಾವಣಗೆರೆ ನಗರದ ಹೊರವಲಯದಲ್ಲಿ ನಡೆಯುವ ಸಿದ್ದರಾಮಯ್ಯ ನವರ 75 ನೇ ಅಮೃತಮಹೊತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಹಾಗೂ ಮುಜುಗರ ತಪ್ಪಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಮಳೆ ಬಾರದಂತೆ ಪ್ರಾರ್ಥಿಸುವಂತಾಗಿದೆ.
ಶಾಮನೂರು ಶಿವಶಂಕರಪ್ಪ ಒಡೆತನದ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಸೋಮವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯ ಕಾರಣಕ್ಕೆ ಇಡೀ ಮೈದಾನ ಕೆಸರುಗದ್ದೆಯಂತಾಗಿತ್ತು, ಮಂಗಳವಾರ ವರುಣನ ಕೃಪೆಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟದ್ದ ಕಾರ್ಯಕ್ರಮ ಆಯೋಜಕರಿಗೆ ಇಂದು ಟೆನ್ಷನ್ ಶುರುವಾಗಿದೆ. ಬೆಳಗ್ಗೆ ಇಂದು ಮೋಡ ಮುಸುಕಿದ ವಾತಾವರಣದಲ್ಲಿ ಮಳೆಯ ತುಂತುರು ಜೋರಾಗಿದೆ.
ಮಳೆಗಾಲವಾಗಿರುವುದರಿಂದ ಮುಂಜಾಗ್ರತೆಯಾಗಿ
ವಿಶಾಲ ಮೈದಾನದಲ್ಲಿ ಮಳೆಯ ರಕ್ಷಣೆಗಾಗಿ ಜರ್ಮನ್ ಪೆಂಡಾಲ್ ಹಾಕಿಸಲಾಗಿದೆ. ಆದರೆ ಸುಮಾರು 50 ಸಾವಿರ ಆಸನಗಳಿಗಷ್ಟೇ ಪೆಂಡಾಲ್ ರಕ್ಷಣೆ ಲಭ್ಯವಿದೆ. ಕಾರ್ಯಕ್ರಮದ ಆಯೋಜಕರು ಹೇಳುವಂತೆ 5-6 ಲಕ್ಷ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಇನ್ನುಳಿದ ಲಕ್ಷಗಟ್ಟಲೆ ಜನರಿಗೆ ಮಳೆಯಿಂದ ರಕ್ಷಣೆ ಕೊಡುವುದು ಅಸಾಧ್ಯವಾದ ಮಾತಾಗಿದೆ, ಮಂಗಳವಾರ ರಾತ್ರಿಯಿಂದಲೇ ದೂರದ ಊರುಗಳಿಂದ ಆಗಮಿಸುತ್ತಿರುವ ಜನರಿಗೆ ಮಳೆಯಿಂದ ತುಂಬಾ ತೊಂದರೆಯಾಗಲಿದೆ. ಅನಿರೀಕ್ಷಿತವಾಗಿ ಮಳೆಯಾದರೆ ಇಡೀ ಕಾರ್ಯಕ್ರಮ ವೈಫಲ್ಯವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಎಐಸಿಸಿ ನಾಯಕ ರಾಹುಲ್ ಗಾಂಧಿ ಕೂಡ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದರಿಂದ ಕಾಂಗ್ರೆಸ್ ನಾಯಕರು ಮುಜುಗರಕ್ಕಿಡಾಗಿದ್ದಾರೆ.
ದಾವಣಗೆರೆಯಲ್ಲಿ ಆಗಸ್ಟ್ 3 ಬುಧವಾರ ನಡೆಯುತ್ತಿರುವ ಸಿದ್ದರಾಮಯ್ಯ ಜನ್ಮದಿನ ಸಮಾರಂಭ “ಸಿದ್ದರಾಮೋತ್ಸವ” ಎಂದು ಬಿಂಬಿತವಾಗಿರೂವ ಕಾರ್ಯಕ್ರಮಕ್ಕೂ ಮಳೆರಾಯನ ವಿಘ್ನ ತಂದೊಡ್ಡುವ ಆತಂಕ ಶುರುವಾಗಿದೆ. ಕಾರ್ಯಕ್ರಮದ ಹಿಂದಿನ ದಿನಕ್ಕೂಮುಂಚೆ ಭಾರಿ ಮಳೆ ಬಂದಿದ್ದರಿಂದಾಗಿ ಸಿದ್ಧತಾ ಕಾರ್ಯಗಳಿಗೆ ಭಾರೀ ಹಿನ್ನಡೆಯಾಗಿತ್ತು. ಹೊರವಲಯದಲ್ಲಿರುವ ನಗರದ ಶಾಮನೂರು ಶಿವಶಂಕರಪ್ಪ ಒಡೆತನದ ಜಮೀನಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಸೋಮವಾರ ರಾತ್ರಿಯಿಡೀ ಸುರಿದ ಭಾರೀ ಮಳೆಯ ಕಾರಣಕ್ಕೆ ಇಡೀ ಮೈದಾನ ಕೆಸರುಗದ್ದೆಯಂತಾಗಿತ್ತು. ಬಿರುಗಾಳಿ, ಗುಡುಗು-ಮಿಂಚು ಸಹಿತ ಮಳೆ ಬಂದಿದ್ದರಿಂದ ವೇದಿಕೆ ನಿರ್ಮಾಣ ಕೆಲಸಕ್ಕೆ ಅಡ್ಡಿಯಾಗಿತ್ತು. ಕಾರ್ಯಕ್ರಮಕ್ಕೆ ಹಾಕಿದ್ದ ಕುರ್ಚಿಗಳೆಲ್ಲವೂ ಕೆಸರಿನಲ್ಲಿ ಮಿಂದೆದ್ದು ಹೋಗಿದ್ದವು. ಮಂಗಳವಾರ ಬೆಳಗ್ಗೆಯಿಂದ ಮಳೆ ಬಿಡುವು ಕೊಟ್ಟ ನಂತರ ಮತ್ತೆ ಕೆಲಸಗಳು ಮುಂದುವರೆದಿದ್ದರೂ, ಕೆಸರಿನಿಂದ ತುಂಬಿಹೋಗಿರುವ ಮೈದಾನವನ್ನು ಹದಗೊಳಿಸುವುದು ಸವಾಲಿನ ಕೆಲಸವಾಗಿತ್ತು. ಸಿದ್ಧತೆ ಪರಿಶೀಲನೆಗೆ ಆಗಮಿಸಿದ್ದ ಕಾಂಗ್ರೆಸ್ ನಾಯಕರು ಕೂಡ ಎಚ್ಚರಿಕೆಯಿಂದ ಓಡಾಡುವಂತಾಗಿತ್ತು.
ಇಂದಿನ ಕಾರ್ಯಕ್ರಮದ ತುಣುಕುಗಳು.
ಬೆಳಗ್ಗೆ 11 ಕ್ಕೆ ಸಿದ್ದರಾಮಯ್ಯ ಶಾಮನೂರು ಪ್ಯಾಲೇಸ್ ಮೈದಾನಕ್ಕೆ ಆಗಮನ
11.45 ಕ್ಕೆ ರಾಹುಲ್ ಗಾಂಧಿ ವೇದಿಕೆಗೆ ಆಗಮನ
(ರಾಹುಲ್ ಗಾಂಧಿ ಜೊತೆ ಡಿಕೆಶಿ ಆಗಮನ)
ರಾಹುಲ್ ಗಾಂಧಿ ಬರೋದಕ್ಕೆ ಹೆಲಿಪ್ಯಾಡ್ ವೇದಿಕೆ ಬಳಿ ವ್ಯವಸ್ಥೆ.
ಎರಡು ಬದಿ ಊಟದ ಕೌಂಟರ್ ಬಲಬಾಗ (ವಿವಿಐಪಿ) ಎಡ ಭಾಗ ಕಾರ್ಯಕರ್ತರಿಗಾಗಿ.
ವೇದಿಕೆಯಲ್ಲಿ 2-3 ಗಂಟೆ ಕಾರ್ಯಕ್ರಮ ನಡೆಯಬಹುದು
ಸಿದ್ದರಾಮಯ್ಯ 4.30 ಕ್ಕೆ ವೇದಿಕೆ ಕಾರ್ಯಕ್ರಮದಿಂದ ನಿರ್ಗಮಿಸಿ ಸಂಜೆ 5 ಕ್ಕೆ ಕಾಗಿನೆಲೆ ಮಹಾಸಂಸ್ಥಾನ ಶಾಖಾ ಮಠ (ಬೆಳ್ಳೂಡಿ ಹರಿಹರ ) ಕ್ಕೆ ಭೇಟಿ
6.30 ಕ್ಕೆ ಸಿರಿಗೆರೆ ತರಳಬಾಳು ಬೃಹನ್ಮಠಕ್ಕೆ ಸಿದ್ದರಾಮಯ್ಯ ಭೇಟಿ
7.30 ಕ್ಕೆ ಚಿತ್ರದುರ್ಗದ ಮುರುಘಾ ಮಠ
8 ಗಂಟೆಗೆ ರಸ್ತೆ ಮೂಲಕ ಬೆಂಗಳೂರು ಕಡೆ ಪ್ರಯಾಣ