ಖಾಕಿ ಕೈಯಲ್ಲಿ ಕಾಲ್ಗೆಜ್ಜೆ.! ದಾಖಲೆ ಇಲ್ಲದ 102 ಕೆಜಿಯ 20 ಲಕ್ಷದ ಬೆಳ್ಳಿ ಕಾಲ್ ಚೈನ್ ವಶಕ್ಕೆ ಪಡೆದ ದಾವಣಗೆರೆ ಬಡಾವಣೆ ಪೊಲೀಸ್
ದಾವಣಗೆರೆ : ಮಕ್ಕಳ ಕಾಲಿನಲ್ಲಿ ಇರಬೇಕಾದ ಹೊಸದ ಗೆಜ್ಜೆಗಳು ಪೊಲೀಸ್ ಠಾಣೆಯಲ್ಲಿ ಮಿಂಚುತ್ತಿದ್ದವು…ಪೊಲೀಸರು ಒಂದಾದಾಗಿ ಜೋಡಿಸುತ್ತಿದ್ದರು.. ನೋಡುಗರು ಅವುಗಳನ್ನು ದಿಟ್ಟಿಸಿ ನೋಡುತ್ತಿದ್ದರು.
ಇದು ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕಂಡು ಬಂದ ದೃಶ್ಯ, ತಮಿಳುನಾಡಿನ ಸೇಲಂನಿಂದ ದಾವಣಗೆರೆಗೆ ಬರುವಾಗ ಖಾಕಿ ಖೆಡ್ಡಾಗಿ ಸಿಕ್ಕಿದೆ. ಈ ಹಿಂದೆ ಚಿನ್ನಘಿ, ಬೆಳ್ಳಿ ಅಂಗಡಿ ಮಾಲೀಕರ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸಾಮಾನ್ಯವಾಗಿ ಜಿಎಸ್ಪಿ ಕೊಟ್ಟು ತಂದರೆ ಹೆಚ್ಚಿನ ಹಣ ಕೊಡಬೇಕಾಗುತ್ತದೆ. ಆದರೆ ಕಳ್ಳ ಮಾರ್ಗವಾಗಿ ತಂದರೆ ಯಾವುದೇ ಜಿಎಸ್ಪಿ ಕಟ್ಟಬೇಕಾಗಿಲ್ಲ ಎಂಬ ಹಿನ್ನೆಲೆಯಲ್ಲಿ ಕಳ್ಳತನ ಮಾರ್ಗವಾಗಿ ಗೆಜ್ಜೆ ತರಲಾಗಿತ್ತೇ ಎಂಬ ಅನುಮಾನ ದಟ್ಟವಾಗಿದೆ.
ದಾಖಲೆ ಇಲ್ಲದ 102 ಕೆಜಿ ಬೆಳ್ಳಿಯ ಕಾಲು ಚೈನ್‌ಗಳು ದಾವಣಗೆರೆ ಬಡಾವಣೆ ಠಾಣೆ ಪೊಲೀಸರ ವಶವಾಗಿದ್ದು, ಇವುಗಳ ವೌಲ್ಯ 20 ಲಕ್ಷ ರೂ.ಆಗಿದೆ. ಈ ಸಂಬಂಧ ತಮಿಳುನಾಡಿನ ಸೇಲಂ ಮೂಲದ ಸೆಲ್ವಂ ಹಾಗು ಬಾಲಾಜಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾವಣಗೆರೆಯಲ್ಲಿ ಯಾರಿಗೆ ಮಾರಾಟ ಮಾಡುತ್ತಿದ್ದರು ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇಷ್ಟೊಂದು ಪ್ರಮಾಣದ ಬೆಳ್ಳಿ ಗೆಜ್ಜೆಗಳನ್ನು ತಂದಿದ್ದ ಆರೋಪಿಗಳ ಬಳಿ, ಅವುಗಳನ್ನು ಖರೀದಿಸಿದ ಬಗ್ಗೆ ಬಿಲ್ ಅಥವಾ ಬೇರಾವುದೇ ದಾಖಲೆ ಇರಲಿಲ್ಲ. ಆರೋಪಿಗಳು ಬೇರೆಡೆಯಿಂದ ಬೆಳ್ಳಿ ಖರೀದಿಸಿ, ಸಾಗಿಸುತ್ತಿದ್ದರು ಎಂಬ ಮಾಹಿತಿಯಿದೆ. ವಿಚಾರಣೆ ಬಳಿಕ ಪ್ರಕರಣ ಕುರಿತು ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಎಸ್ಪಿ ರಿಷ್ಯಂತ್ ಹೇಳಿದರು. ಇನ್ನು ಪ್ರಕರಣ ಪತ್ತೆ ತಂಡದಲ್ಲಿದ್ದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಂಸಾ ಪತ್ರ ನೀಡುವ ಜತೆಗೆ ಅವರ ಹೆಸರನ್ನು ಅತ್ಯುತ್ತಮ ಸೇವೆ ಪಟ್ಟಿಗೆ ಸೇರಿಸಲಾಗುವುದು ಎಂದು ಎಸ್ಪಿ ಹೇಳಿದರು. ಪ್ರಕರಣ ಸಂಬಂಧ ಹೆಚ್ಚುವರಿ ಎಸ್ಪಿ ರಾಮಗೊಂಡ ಬಿ. ಬಸರಗಿ, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ತನಿಖಾ ತಂಡದ ಸಿಪಿಐ ಧನಂಜಯ, ಪಿಎಸ್‌ಐ ಎನ್.ಎಸ್. ಅಶ್ವತ್ಥಕುಮಾರ್, ಸಿಬ್ಬಂದಿ ಸಿದ್ದೇಶ್, ಅರುಣ ಕುಮಾರ, ಸೈಯದ್ ಅಲಿ, ಹನುಮಂತಪ್ಪ ಇತರರಿದ್ದರು.
ಬಾರ್ಡ್‌ರ್‌ನಲ್ಲಿ ಸಿಕ್ಕಿ ಹಾಕಿಕೊಳ್ಳದ ಆರೋಪಿಗಳು :
ತಮಿಳುನಾಡಿನಿಂದ ದಾವಣಗೆರೆಯವರೆಗೂ ಸಾಕಷ್ಟು ಚೆಕ್‌ಪೋಸ್ಟ್‌ಗಳಿದ್ದು, ಬಾರ್ಡರ್‌ನಲ್ಲಿ ಯಾವುದೇ ತಪಾಸಣೆ ನಡೆದಿಲ್ಲ ಎಂಬುದು ಈ ಪ್ರಕರಣದಿಂದ ತಿಳಿದು ಬಂದಿದೆ. ಯಾವುದಾದರೂ ಅನುಮಾನ ಬಂದರೆ ಮಾತ್ರ ಪೊಲೀಸರು ಚೆಕ್‌ಪೋಸ್ಟ್‌ನಲ್ಲಿ ಅಡ್ಡಹಾಕುವುದು ಸರ್ವೇ ಸಾಮಾನ್ಯ. ಇನ್ನುಳಿದ ದಿನಗಳಲ್ಲಿ ವಾಹನಗಳ ತಪಾಸಣೆ ನಡೆಯೋದಿಲ್ಲ. ಒಂದು ವೇಳೆ ನಡೆದರೂ ಸಾಕಷ್ಟು ಸಮಯ ವ್ಯಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ತಮಿಳುನಾಡಿನಿಂದ ದಾವಣಗೆರೆಗೆ ಬಂದಿದ್ದಾರೆ.