ಮಠಾಧೀಶರು ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸಲಿ- ಸುರೇಶ್. ಎಂ.ಜಾಧವ್
ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಜನರು ತಮ್ಮ ದೈನಂದಿನ ಆಹಾರಕ್ಕಾಗಿ ಇನ್ನೊಬ್ಬರ ಆದೇಶಕ್ಕಾಗಿ ಕಾಯುವ ಪರಿಸ್ಥಿತಿ ಬಂದರು ಬರಬಹುದು ಎಂದು ಕಿಸಾನ್ ಕಾಂಗ್ರೆಸ್ ಮುಖಂಡರಾದ ಸುರೇಶ್.ಎಂ.ಜಾಧವ್ ಆತಂಕ ವ್ಯಕ್ತ ಪಡಿಸಿದ್ದಾರೆ.
ದೇಶದಲ್ಲಿ ಮಕ್ಕಳ ಅಪೌಷ್ಠಿಕತೆ ಹೆಚ್ಚಾಗಿದ್ದು ಶಾಲೆಗೆ ಹೋಗುವ ಪ್ರತಿಯೊಬ್ಬ ಮಕ್ಕಳಿಗೂ ಪೌಷ್ಟಿಕ ಆಹಾರದ ಅವಶ್ಯಕತೆಯಿದ್ದು ಇದೇ ನಿಟ್ಟಿನಲ್ಲಿ ಹಿಂದಿನ ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳಿಗೆ ಮಧ್ಯಾನ್ಹದ ಬಿಸಿಯೂಟದೊಂದಿಗೆ ಮೊಟ್ಟೆ ನೀಡುವ ಯೋಜನೆ ಹಮ್ಮಿಕೊಂಡಿದ್ದರು. ಆದರೆ ಇದೀಗ ಕೆಲವು ಮಠಾಧೀಶರ ಆಜ್ಞೆಯಂತೆ ಮೊಟ್ಟೆ ನೀಡುವ ಯೋಜನೆ ಸರ್ಕಾರ ಕೈಬಿಟ್ಟಿರುವುದು ಖಂಡನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಠಾಧೀಶರು ಸಮಾಜದಲ್ಲಿ ಸಾಮರಸ್ಯವನ್ನುಂಟು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು,ರಾಜ್ಯದ ರೈತರ ಬಗ್ಗೆಯಾಗಲಿ,ಸಾಮಾನ್ಯ ಜನರ ಕಷ್ಟ ಸುಖಗಳ ಬಗ್ಗೆಯಾಗಲಿ, ಬೆಲೆಯೇರಿಕೆ ಬಗ್ಗೆಯಾಗಲಿ, ಸಾರಾಯಿ ನಿಷೇಧ ದಂಥ ಹಾಗೂ ಅನೇಕ ಜ್ವಲಂತ ಸಮಸ್ಯೆಗಳ ಬಗ್ಗೆ ಹಾಗೂ ಸಾರಾಯಿ ದುರಂತದಿಂದ ಅನೇಕ ಸಂಸಾರಗಳು ಬೀದಿಪಾಲಾಗಿದ್ದು ಅಂತಹವರ ಪರವಾಗಿ ಹೋರಾಟ ನಡೆಸಲಿ ಆ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡುತ್ತೇವೆ ಆದರೆ ಕೆಲವು ಮಠಾಧೀಶರುಗಳು ಮಕ್ಕಳ ಊಟದಲ್ಲೂ ರಾಜಕೀಯ ಮಾಡುತ್ತಿರುವುದು ಸಮಾಜದ ಅತ್ಯಂತ ದುಃಖಕರವಾದ ಸಂಗತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ವಸಂಸ್ಥೆಯ ಒಂದು ತನಿಖೆ ಯ ಪ್ರಕಾರ ಭಾರತದಲ್ಲಿ ಮಕ್ಕಳ ಅಪೌಷ್ಠಿಕತೆ ಹೆಚ್ಚಾಗಿದ್ದು ಅದಕ್ಕಾಗಿ ಮಕ್ಕಳಿಗೆ ಪೌಷ್ಠಿಕ ಆಹಾರದ ಅಗತ್ಯವಿದೆ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವೇ ಕೆಲವು ಮಠಾಧೀಶರು ರಾಜ್ಯದ ರಾಜಕೀಯದಲ್ಲಿ ತಮ್ಮ ಹಿಡಿತ ಸಾಧಿಸಲು ಅಸಂಭದ್ದ ಹೇಳಿಕೆಯನ್ನು ನೀಡುತ್ತಿದ್ದು ಇದು ಮುಂದಿನ ದಿನಗಳಲ್ಲಿ ಮಾರಕವಾಗಿ ಪರಿನಮಿಸಲಿದೆ .ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡದೆ ,ಯಾವುದೇ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡದೇ ಕೆಲವು ಮಠಾಧಿಪತಿಗಳು ಮುಖ್ಯಮಂತ್ರಿಗಳನ್ನ ಬದಲಾವಣೆ ಮಾಡುವ ಕಾಯಕದಲ್ಲಿ ಹೋರಾಟ ನಡೆಸುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಈ ವಿಷಯದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಡೆದಾಡುವ ದೇವರು ಎಂದೆನಿಸಕೊಂಡಿದ್ದ ಸಿದ್ದಗಂಗಾ ಮಠದ ದಿವಂಗತ ಶಿವಕುಮಾರ ಸ್ವಾಮೀಜಿಗಳು ಎಲ್ಲರಿಗೂ ಆದರ್ಶವಾಗಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ
ಶೈಕ್ಷಣಿಕ ಕ್ಷೇತ್ರದ ನೈಜ ಸಮಸ್ಯೆಗಳನ್ನು ಮರೆಮಾಚಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಉದ್ದೇಶದಿಂದ ತಿನ್ನುವ ಆಹಾರದ ವಿಷಯದಲ್ಲಿ ರಾಜಕೀಯ ಬೆರೆಸಲಾಗುತ್ತಿದ್ದು ಮತೀಯವಾದಿ ರಾಜಕಾರಣದ ಮೂಲಕ ಕ್ಷುಲ್ಲಕ ವಿವಾದಗಳನ್ನ ಸೃಷ್ಟಿ ಮಾಡಲಾಗುತ್ತಿದೆ ಈ ಮೂಲಕ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ, ವ್ಯಾಪಾರೀಕರಣ ಮಾಡಲು ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.
ಪ್ರತಿ ಮಗುವಿಗೂ ಮೊಟ್ಟೆ ಹಾಗೂ ಪೌಷ್ಠಿಕ ಆಹಾರ ನೀಡುವುದನ್ನು ಸರ್ಕಾರ ಖಾತ್ರಿಪಡಿಸಬೇಕು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ವಿಷಯವಾಗಿ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಇದೇ ಸಂಧರ್ಭದಲ್ಲಿ ಎಚ್ಚರಿಸಿದರು.