ವಿದ್ಯಾರ್ಥಿಗಳು ಜಗತ್ತನ್ನಾಳುವ ವ್ಯಕ್ತಿಗಳಾಗಲಿ. ಕೆ ಶಿವಶಂಕರ್

Let the students become world leaders. K Shivashankar

ದಾವಣಗೆರೆ: ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಣವು ಗುಣಾತ್ಮಕವಾಗಿರುತ್ತದೆ ಇಲ್ಲಿ ಕಲಿತ ವಿದ್ಯಾರ್ಥಿಗಳು ಜಗತ್ತನಾಳುವ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲ ಸಚಿವರಾದ ಡಾ. ಶಿವಶಂಕರ್ ಕೆ ರವರು ಹೇಳಿದರು.
ಅವರಿಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೊತ್ತರ ವಾಣಿ ಶಾಸ್ತ್ರ ವಿಭಾಗದ ಪ್ರಥಮ ವರ್ಷದ ಎಂಕಾಂ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಕಲಿಯುವ ವಯಸ್ಸಿನಲ್ಲಿ ತಂತ್ರಜ್ಞಾನ ಮತ್ತು ತಂತ್ರಗಾರಿಕೆ ಎರಡನ್ನು ಕಲಿತುಕೊಳ್ಳಬೇಕು. ಜಗತ್ತಿನಲ್ಲಿ ಪ್ರತಿದಿನವೂ ಬದಲಾಗುವ ತಂತ್ರಜ್ಞಾನವನ್ನು ಕಲಿಯುವ ತಂತ್ರಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾಲೇಜುಗಳಲ್ಲಿ ಶಿಕ್ಷಣವುಗುಣಾತ್ಮಕ ದಿಂದ ಕುಡಿರುತ್ತದೆ ಗುಣಾತ್ಮಕ ಶಿಕ್ಷಣದ ಕಡೆಗೆ ಒಲವು ಮೂಡಿಸಿಕೊಳ್ಳಬೇಕು ಆಗ ನೀವು ಪ್ರಪಂಚದಲ್ಲಿ ಎಲ್ಲಿ ಆದರೂ ಬದುಕಬಹುದು ಎಂದು ಹೇಳಿದರು. ಜೀವನದಲ್ಲಿ ಯಶಸ್ಸಿನ್ನು ಪಡೆಯಬೇಕಾದರೆ ಚಾಯ್ಸ್ ಚಾನ್ಸ್ ಮತ್ತು ಚೇಂಜ್ ಎಂಬ ಮೂರು ಪದಗಳನ್ನು ಅಳವಡಿಸಿಕೊಂಡು ಅದಕ್ಕೆ ತಕ್ಕಂತೆ ಪ್ರಯತ್ನಪಟ್ಟಾಗ ಯಶಸ್ಸು ನಿಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.
ವಾಣಿಜ್ಯಶಾಸ್ತ್ರ ಸಂಚಾಲಕರದ ಮಂಜುನಾಥ್ ಕೆ ಎಂ ರವರು ಸ್ನಾತಕೊತ್ತರ ವಾಣಿಜ್ಯಶಾಸ್ತ್ರ ವಿಭಾಗ ಆರಂಭವಾದಾಗಿನಿಂದ ವಿಶ್ವವಿದ್ಯಾಲಯದ ರ್ಯಾಂಕ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಇದು ವಿಭಾಗದ ಹೆಮ್ಮೆಯ ವಿಷಯ. ವಿದ್ಯಾರ್ಥಿಗಳನ್ನು ಸಾಧಕರನ್ನಾಗಿ ಮಾಡುವ ಉದ್ದೇಶದಿಂದ ಈ ತರಹದ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿರುತ್ತೇವೆ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸರ್ವತೂಮುಖ ಅಭಿವೃದ್ಧಿಗೆ ಬೇಕಾಗುವ ವಿಚಾರಗಳನ್ನು ವಿನಿಮಯ ಮಾಡಿಕೊಂಡು ಹುಮ್ಮಸ್ಸು ತುಂಬಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ವಿಭಾಗದ ಮುಖ್ಯಸ್ಥರಾದ ಬಿಸಿ ತಸಿಲ್ದಾರ್ ರವರು ಮಾತಾಡುತ್ತಾ ವಿದ್ಯಾರ್ಥಿಗಳು ಈತರಹದ ಕಾರ್ಯಕ್ರಮಗಳಿಂದ ಹೊಸ ಕಲಿಕೆಯನ್ನು ಆರಂಭಿಸಿ ಉನ್ನತ ಮಟ್ಟಕ್ಕೆ ಏರಲಿ ಎಂದು ಹಾರೈಸಿದರು.


ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಮಂಜಣ್ಣ ಟಿ ರವರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿರುವ ಕೌಶಲ್ಯಗಳನ್ನು ಹೊರತೆಗೆಯಲ್ಲಿ ಇತರ ವೇದಿಕೆಗಳು ಉತ್ತಮ ಕೆಲಸ ಮಾಡುತ್ತವೆ ಅದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕಿವಿ ಮಾತನ್ನು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲಾರಾದ ಡಾ ಅಂಜ್ಜನಪ್ಪನವರು ಮಾತನಾಡುತ್ತಾ ಕಸದಲ್ಲಿ ರಸವನ್ನು ಮಾಡುವ ಕಲೆಯು ವಾಣಿಜ್ಯ ವಿದ್ಯಾರ್ಥಿಗಳಿಗೆ ಕರಗತವಾಗಿದೆ ಮತ್ತು ಹೀಗೆ ಕೌಶಲ್ಯಗಳನ್ನು ಬೆಳೆಸಿಕೊಂಡು ಸಂಪನ್ಮೂಲ ವ್ಯಕ್ತಿಗಳು ನೀಡಿದ ಸಲಹೆಗಳನ್ನು ತೆಗೆದುಕೊಂಡು ಕಾಲೇಜಿಗೆ ಮತ್ತು ಸಮಾಜಕ್ಕೆ ಉತ್ತಮ ಕೀರ್ತಿ ತರುವ ಪ್ರಯತ್ನ ಮಾಡಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಸ್ವಪ್ನ ನಿರೂಪಿಸಿದರು ಮೇಘನ ಸ್ವಾಗತಿಸಿದರು ಅಕ್ಷತಾ ರವರು ವಂದಿಸಿದರು. ಕಾರ್ಯಕ್ರಮದಲ್ಲಿ 2021-22 ನೇ ಸಾಲಿನ ರಾಂಕ್ ವಿಜೇತರಾದ ಪೂಜಾ ಮತ್ತು ಹರ್ಷಿತಾರನ್ನು ಸನ್ಮಾನಿಸಲಾಯಿತು. ರಾಂಕ್ ವಿಜೇತರು ಅನುಭವಗಳನ್ನು ಹಂಚಿಕೊಂಡರು. ವಿಭಾಗದ ಎಲ್ಲಾ ಬೋಧಕರು ಹಾಜರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!