ಎಲ್.ಐ.ಸಿ. ಖಾಸಗೀಕರಣವನ್ನು ವಿರೋಧಿಸಿ ಪ್ರತಿಭಟನೆ

IMG-20210723-WA0005

 

ದಾವಣಗೆರೆ: ಕೋವಿಡ್‌ ಸಮಯದಲ್ಲಿ ಜನರ ರಕ್ಷಣೆಗಿಂತಲೂ ಹೆಚ್ಚಾಗಿ ಕಾರ್ಪೋರೇಟ್‌ ಕಂಪನಿಯ ಜೇಬು ತುಂಬಿಸಲು ಸಾರ್ವಜನಿಕ ಸಂಸ್ಥೆಗಳನ್ನ ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರವು ನಿಂತಿರುವುದು ದೇಶದ ಜನರನ್ನ ಸಂಕಷ್ಟಕ್ಕೆ ಸಿಲುಕಿಸುತ್ತಿರುವುದನ್ನು ಎಲ್.ಐ.ಸಿ. ನೌಕರರ ಸಂಘ ಮತ್ತು ಎಲ್.ಐ.ಸಿ. ಏಜೆಂಟ್ಸ್‌ ಯುನಿಯನ್‌ ನ ಸದಸ್ಯರು ವಿರೋಧಿಸಿ ಇಂದು ಎಲ್.ಐ.ಸಿ.ಕಛೇರಿಯ ಮುಂದೆ ಪ್ರತಿಭಟನೆ ನೆಡೆಸಿದರು. ಸಿ.ಐ.ಟಿ.ಯು. ವಿನ ಜಿಲ್ಲಾ ಸಂಚಾಲಕರಾದ ಆನಂದರಾಜು ಕೆ.ಹೆಚ್.‌ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ದೇಶಭಕ್ತಿ ಹೆಸರೇಳುವ ಕೇಂದ್ರ ಸರ್ಕಾರವು, ರಕ್ಷಣಾ ಇಲಾಖೆಯ ಅಡಿಯಲ್ಲಿ ದೇಶದ ರಕ್ಷಣೆಗೆ ರಕ್ಷಣಾ ಸಾಮಗ್ರಿ ಮತ್ತು ಶಸ್ತಾಸ್ತ್ರ ಗಳನ್ನ ಉತ್ಪಾದನೆ ಮಾಡುತ್ತಿರುವ 44 ಡಿ.ಆರ್.ಡಿ.ಒ. ಕಂಪನಿಗಳನ್ನಖಾಸಗಿಯವರಿಗೆ ಮಾರಾಟ ಮಾಡಲು ʼಅಗತ್ಯ ಸೇವೆಗಳ ಸುಗ್ರಿವಾಜ್ಞೆʼ ಹೊರಡಿಸಿದೆ, ಎಲ್ಲಾ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿದೆ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿದಿದ್ದರೂ ಪೆಟ್ರೋಲ್‌-ಡಿಜೆಲ್‌ ಬೆಲೆಗಳು ಏರುತ್ತಿವೆ, ಎಲ್.ಪಿ.ಜಿ. ಮೇಲಿನ ಸಬ್ಸೀಡಿ ತೆಗೆದು ಜನ ಸಾಮಾನ್ಯರ ಗಾಯದ ಮೇಲೆ ಬರೆ ಎಳೆಯಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಎಲ್.ಐ.ಸಿ. ನೌಕರರು ಮತ್ತು ಏಜೆಂಟರು ಆಕ್ರೋಷ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಎಲ್.ಐ.ಸಿ. ನೌಕರರ ಸಂಘದ ಪುಟ್ಟರಾಜು, ಅನಿತಾ, ತಿಪ್ಪೇಸ್ವಾಮಿ, ದತ್ತರಾಜ್‌ ಹಾಗೂ ಎಲ್.ಐ.ಸಿ. ಏಜೆಂಟರ ಸಂಘದ ಶಿವಮೂರ್ತಿ ಬಿ.ಟಿ., ಎಂ.ಎಂ. ಮಹದೇವಪ್ಪ, ಎಸ್‌,ಎ. ಕಲ್ಲನಗೌಡರ್‌ ಮತ್ತು ಇತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!