ಸ್ಥಳೀಯ ಸಂಸ್ಥೆ ಚುನಾವಣೆ! ಸಾರ್ವಜನಿಕ ಪ್ರಚಾರ ಅಂತ್ಯ! ಪ್ರಚಾರಕ್ಕಾಗಿ ಮೊಬೈಲ್‌ನಿಂದ ಸಂದೇಶ ರವಾನಿಸುವಂತಿಲ್ಲ

dc mahantesh bilagi

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ-37ರ ಮತ್ತು ಚನ್ನಗಿರಿ ಪುರಸಭೆ ವಾರ್ಡ್ ಸಂಖ್ಯೆ-16ರ ಉಪ ಚುನಾವಣೆಗೆ ವೇಳಾ ಪಟ್ಟಿಯನ್ನು ಹೊರಡಿ ಸಲಾಗಿದೆ.  ಸಾರ್ವಜನಿಕ ಸಭೆ ಹಾಗೂ ಇತರೆ ಪ್ರಚಾರಗಳನ್ನು ಮುಕ್ತಾಯಗೊಳಿಸುವ ಕುರಿತು ರಾಜ್ಯ ಚುನಾವಣಾ ಆಯೋಗದ ಆದೇಶ ದಿನಾಂಕ: 16-05-2022 ರಲ್ಲಿ ಮತಪ್ರಚಾರದ ಬಗ್ಗೆ ಈ ಕೆಳಕಂಡ ಕೃತ್ಯಗಳನ್ನು ಮತದಾನ ಪ್ರಾರಂಭಕ್ಕೆ ನಿಗದಿಪಡಿಸಿದ ಸಮಯದ ಹಿಂದಿನ 48 ಗಂಟೆಗಳ (ಅಂದರೆ ದಿನಾಂಕ:18-05-2022 ಬೆಳಗ್ಗೆ 07:00 ಗಂಟೆ ನಂತರ) ಅವಧಿಯಲ್ಲಿ ಯಾವುದೇ ರಾಜಕೀಯ ಪಕ್ಷವಾಗಲೀ ಅಥವಾ ಅಭ್ಯರ್ಥಿಗಳಾಗಲೀ ಅಥವಾ ಅವರ ಪರವಾಗಿ ಅವರ ಬೆಂಬಲಿಗರಾಗಲಿ ಈ ಕೆಳಕಂಡವುಗಳನ್ನು ಮಾಡತಕ್ಕದ್ದಲ್ಲವೆಂದು ಆದೇಶಿಸಿದೆ.

ಈ ಕ್ರಮಗಳನ್ನು ಉಲ್ಲಂಘಿಸಿದವರು ಕಾಯ್ದೆ ಮತ್ತು ಕಾನೂನಿನ ಪ್ರಕಾರ ಶಿಕ್ಷಾರ್ಹರಾಗುತ್ತಾರೆ. ಸಾರ್ವಜನಿಕ ಸಭೆ ಮತ್ತು ಸಮಾರಂಭ- ಚುನಾವಣಾ ಪ್ರಚಾರಕ್ಕೆ ಸಂಬ0ಧಿಸಿದ0ತಹವುಗಳನ್ನು ಏರ್ಪಡಿಸಲಾಗಿದೆ. ಮತದಾರರಿಗೆ ಮೊಬೈಲ್ ಮೂಲಕ ಎಸ್.ಎಂ.ಎಸ್ ಮೂಲಕ ಪ್ರಚಾರ ಮಾಡಬಾರದು. ಎಫ್.ಎಂ, ರೆಡಿಯೋ, ಟಿವಿ ಚಾನಲ್ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬಾರದು. ಮತದಾರರಿಗೆ ವಿಡಿಯೋ ಕ್ಲಿಪ್ಪಿಂಗ್ಸ್ ಪ್ರದರ್ಶಿಸಬಾರದು. ದಿನಪತ್ರಿಕೆಗಳಲ್ಲಿ ಜಾಹಿರಾತು ಹೊರಡಿಸಬಾರದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!