ಲೋಕಸಭಾ ಚುನಾವಣೆ, ನಮ್ಮ ನಡೆ ಮತಗಟ್ಟೆ ಕಡೆ, ತಪ್ಪದೇ ಮೇ 7 ರಂದು ಮತದಾನ ಮಾಡಲು ಕರೆ

ದಾವಣಗೆರೆ: ಲೋಕಸಭಾ ಚುನಾವಣೆ ನಡೆಯುತ್ತಿದ್ದು ಮೇ 7 ರಂದು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಮತದಾರರು ತಪ್ಪದೇ ಮತಗಟ್ಟೆ ಕಡೆ ಬಂದು ಮತದಾನ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.

ಅವರು ಭಾನುವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಶಾಲಾ, ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ನಮ್ಮ ನಡೆ, ಮತಗಟ್ಟೆ ಕಡೆ ಜಾಥಾವನ್ನು ಗುಂಡಿ ಸರ್ಕಲ್ ನಿಂದ ಸ್ಟೇಡಿಯಂವರೆಗೆ ನಡೆದ ಮತದಾನ ಜಾಗೃತಿ ಮೆರವಣಿಗೆ ಸ್ಟೇಡಿಯಂನಲ್ಲಿ ಸಮಾರೋಪವಾಗಿ ನಂತರ ಇಲ್ಲಿ ಸ್ವೀಪ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಜಿಲ್ಲೆಯಲ್ಲಿನ ಎಲ್ಲಾ 1693 ಮತಗಟ್ಟೆಗಳಲ್ಲಿ ಕುಡಿಯುವ ನೀರು, ನೆರಳು, ಶೌಚಾಲಯದ ವ್ಯವಸ್ಥೆ, ರ್ಯಾಂಪ್‍ಗಳು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮತದಾರರು ಮತಗಟ್ಟೆ ಕಡೆ ಬಂದು ಪರಿಶೀಲಿಸಿಕೊಳ್ಳಬಹುದಾಗಿದೆ. ಏ.28 ರಂದು ಜಿಲ್ಲೆಯ ಎಲ್ಲಾ ಮತಗಟ್ಟೆಗಳ ಮೇಲೆ ಸ್ವೀಪ್ ಧ್ವಜವನ್ನು ಹಾರಿಸಲಾಗಿದೆ.

ಇದುವರೆಗೆ ನಡೆದ ಸ್ವೀಪ್ ಕಾರ್ಯಕ್ರಮದಲ್ಲಿ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳು ಬಹಳ ಉತ್ಸುಕತೆಯಿಂದ ಭಾಗವಹಿಸಿದ್ದಾರೆ. ಇದೇ ರೀತಿ ಮತದಾನದ ದಿನವು ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಯಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಹಾಕಬೇಕು. ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಹೆಚ್ಚು ಶೇ 81.64 ರಷ್ಟು ಮತದಾನವಾಗಿದ್ದು ಇದಕ್ಕೂ ಮೀರಿಸಿ ದಾವಣಗೆರೆ ಕ್ಷೇತ್ರದಲ್ಲಿ ಮತದಾನ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಬಹಳ ಉತ್ಸುಕತೆಯಿಂದ ಮೇ 7 ರಂದು ನಡೆಯುವ ಮತದಾನದಲ್ಲಿ ಭಾಗಿಯಾಗಬೇಕಾಗಿದೆ ಎಂದರು.

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 1709244 ಮತದಾರರಿದ್ದು ಇದರಲ್ಲಿ ದಾವಣಗೆರೆ ಜಿಲ್ಲೆಯ 14,85,271 ಮತದಾರರಿದ್ದಾರೆ. ಲಿಂಗಾನುಪಾತದನ್ವಯ ಪುರುಷರಿಗಿಂತ ಮಹಿಳಾ ಮತದಾರರು ಜಿಲ್ಲೆಯಲ್ಲಿ ಹೆಚ್ಚಿದ್ದು 1000 ಪುರುಷರಿಗೆ 1006 ಮಹಿಳೆಯರಿದ್ದಾರೆ, ಮಹಿಳೆಯರು ಮತದಾನದಲ್ಲಿ ಭಾಗಿಯಾಗವುದರಿಂದ ಹೆಚ್ಚು ಮತದಾನವಾಗುವ ವಿಶ್ವಾಸವಿದೆ ಎಂದರು.
ಸ್ವೀಪ್ ರಾಯಭಾರಿ ಹಾಗೂ ಚಲನಚಿತ್ರ ನಟ ಪ್ರøಥ್ವಿ ಶಾಮನೂರು ಮಾತನಾಡಿ ಮತದಾನ ದಿನ ಎಲ್ಲರಿಗೂ ಮತದಾನ ಮಾಡಲೆಂದು ರಜಾ ನೀಡಲಾಗುತ್ತದೆ. ಆದರೆ ಬೇರೆಲ್ಲೂ ಹೋಗದೇ ಮತದಾನದಲ್ಲಿ ಭಾಗಿಯಾಗಬೇಕೆಂದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ, ಶಾಲಾ ಶಿಕ್ಷಣ ಪದವಿ ಪೂರ್ವ ವಿಭಾಗದ ಉಪನಿರ್ದೇಶಕ ಕರಿಸಿದ್ದಪ್ಪ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿಬಾಯಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳನಾಯ್ಕ್ ಹಾಗೂ ವಿವಿಧ ಶಾಲೆಗಳ ಶಿಕ್ಷಕರು ಹಾಗೂ ಇನ್ನಿತರೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮ ನಡೆ ಮತಗಟ್ಟೆ ಕಡೆ ಅಂಗವಾಗಿ 20 ಕೆ.ಜಿ.ಕೇಕ್ ತಯಾರಿಸಿದ್ದು ಕೇಕ್ ಕತ್ತರಿಸುವ ಮೂಲಕ ಸಿಹಿ ಹಂಚಿಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!