ಲೋಕ ಶಕ್ತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಯಾಗಿ ಎಸ್ ಕೆ.ಒಡೆಯರ್ ನೇಮಕ.

ಬೆಂಗಳೂರು :ದಿವಂಗತ ಶ್ರೀ ರಾಮಕೃಷ್ಣ ಹೆಗಡೆಯವರು ಸ್ಥಾಪಿಸಿರುವ “ಲೋಕ ಶಕ್ತಿ”ರಾಷ್ಟ್ರೀಯ ಪಕ್ಷದ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ವಿ ಸ್ಥಾವರಮಠ ರವರು ಇಂದು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಶ್ರೀ ಎಸ್ ಕೆ ಒಡೆಯರ್ ವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿ ಯನ್ನಾಗಿ ನೇಮಕ ಮಾಡಿ ಆದೇಶ ಪತ್ರ ನೀಡಿದರು.ಈ ಸಂದರ್ಭದಲ್ಲಿ ,ಶ್ರೀ ಮತಿ ಮಮತಾ ಪಾಟೀಲ್ ಮಹಿಳಾ ವಿಭಾಗದ ರಾಜ್ಯ ಅಧ್ಯಕ್ಷರು ಹಾಗೂ ಶ್ರಿ ಶತೀಸ್ ಹೆಚ್.ಬಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತ ,ಶ್ರೀಬಸವರಾಜಪ್ಪ ನೀರ್ಥಡಿ ಜಿಲ್ಲಾ ಅಧ್ಯಕ್ಷರು ದಾವಣಗೆರೆ ಮುಂತಾದವರು ಉಪಸ್ಥಿತರಿದ್ದು ಶುಭಹಾರೈಸಿದರು.