Lokayukta: ದಾವಣಗೆರೆಯ ಆಹಾರ ಸುರಕ್ಷತಾ ಇಲಾಖೆ ಜಿಲ್ಲಾ ಅಂಕಿತ ಅಧಿಕಾರಿ ಡಾ. ನಾಗರಾಜ್ ಮನೆ ಮೇಲೆ ಲೋಕಾಯುಕ್ತ ದಾಳಿ

ದಾವಣಗೆರೆ: (Lokayukta) ಕರ್ನಾಟಕ ಲೋಕಾಯುಕ್ತ ಪೋಲಿಸ್ ವತಿಯಿಂದ ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ದ ಸಮರ ಸಾರಿದ್ದು 8 ಜಿಲ್ಕೆಯ ಎಂಟು ಅಧಿಕಾರಿಗಳ ಮನೆ, ಕಛೇರಿ ಸೇರಿದಂತೆ ಅನೇಕ ಕಡೆ ಏಕ ಕಾಲಕ್ಕೆ ದಾಳಿ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ಪುಡ್ ಸೇಫ್ಟಿ ಅಂಡ್ ಕ್ವಾಲಿಟಿ ಯುನಿಟ್ ಹೆಲ್ತ್ ಡಿಪಾರ್ಟ್ಮೆಂಟ್ ವಿಭಾಗದ ಜಿಲ್ಲಾ ಅಧಿಕಾರಿ ಡಾ, ನಾಗರಾಜ್ ಮನೆ, ಕಛೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಬೃಹತ್ ನಿವಾಸ, ಪಿಬಿ ರಸ್ತೆಯ ಸೊಸೈಟಿ, ಪೆಟ್ರೊಲ್ ಬಂಕ್, ಕಛೇರಿ, ಹಾಗೂ ರಾಣೆಬೆನ್ನೂರು ತಾಲ್ಲೂಕಿನ ಐರಣಿ ಗ್ರಾಮದಲ್ಲಿನ ಫಾರ್ಮ್ ಹೌಸ್ ನಲ್ಲಿ ತಪಾಸಣೆ ನಡೆಸುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯ ಹಿರಿಯ ಸಹಕಾರಿ ದುರೀಣ ಜಿ.ಆರ್.ಷಣ್ಮುಖಪ್ಪ ಪುತ್ರ ಡಾ, ನಾಗರಾಜ್ ಮನೆಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳಿಂದ ತಪಾಸಣೆ ಕೈಗೊಳ್ಳಲಾಗಿದ್ದು ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದ್ದು, ಸಂಜೆ ವೇಳೆಗೆ ನಿಖರ ಮಾಹಿತಿ ದೊರೆಯಲಿದೆ ಎನ್ನಲಾಗಿದೆ.
ದಾವಣಗೆರೆ ಲೋಕಾಯುಕ್ತ ಎಸ್ ಪಿ ಕೌಲಾಪುರೆ ಹಾಗೂ ಡಿವೈಎಸ್ಪಿ ಕಲಾವತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.