Lokayukta: ನಗರ ನೀರು ಸರಬರಾಜು ಇಲಾಖೆಯ ಎಇಇ ಬಿ.ರವಿ ಕಚೇರಿ ಮನೆಯಲ್ಲಿ ಲೋಕಾಯುಕ್ತ ದಾಳಿ

ದಾವಣಗೆರೆ: (Lokayukta) ದಾವಣಗೆರೆ, ಚಿತ್ರದುರ್ಗದಲ್ಲಿ ಏಕಕಾಲದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ದಾವಣಗೆರೆ ನಗರ ನೀರು ಸರಬರಾಜು ಇಲಾಖೆಯ ಎಇಇ ಬಿ.ರವಿ ಕಚೇರಿ ಹಾಗೂ ಅವರ ತಾಯಿ ಮನೆಯ ಮೇಲೆ ದಾಳಿ ಆಗಿದ್ದು, ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ಮಾಡಿದ್ದಾರೆ.
ಕಳೆದ ಎರಡು ವರ್ಷದಿಂದ ದಾವಣಗೆರೆಯಲ್ಲಿ ಎಇಇ ಕೆಲಸ ಮಾಡುತ್ತಿದ್ದ ರವಿ ಅವರು, ಚಿತ್ರದುರ್ಗದ ಚಳ್ಳಕೆರೆ ರಸ್ತೆಯ ಸಾಯಿ ಲೇಔಟ್ ನಲ್ಲಿರುವ ಎಇಇ ರವಿ ಮನೆ ಮೇಲೆ ದಾಳಿ ಕೂಡ ಅಧಿಕಾರಿಗಳಿಂದ ತಪಾಸಣೆ ನಡೆಸಲಾಗಿದೆ. ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆ ಬಳಿ ಇರುವ ಕಚೇರಿ, ಶಿವಕುಮಾರ ಸ್ವಾಮಿ ಬಡಾವಣೆ ಯ ಅತ್ತೆ ಮನೆಯ ಮೇಲೆ ದಾಳಿ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ಡಿವೈಎಸ್ಪಿ ಕಲಾವತಿ, ಇನ್ಸಪೆಕ್ಟರ್ ಗುರುಬಸವರಾಜ್ ನೇತೃತ್ವದ ತಂಡದಿಂದ ದಾಳಿ ನಡೆದಿದೆ.