Lokayukta: ಲೋಕಾಯುಕ್ತ ದಾಳಿ: ಆರೋಗ್ಯ ಅಧಿಕಾರಿ ಡಾ ನಾಗರಾಜ್ ಬಳಿ 4 ಕೋಟಿ ಆಸ್ತಿ ಪತ್ತೆ

ದಾವಣಗೆರೆ : (Lokayukta) ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿ ಜಿಲ್ಲಾ ಆಹಾರ ಹಾಗೂ ಗುಣಮಟ್ಟ ಘಟಕದ ಜಿಲ್ಲಾ ಸಾಂಖ್ಯಿಕ ಅಧಿಕಾರಿ ಡಾ.ನಾಗರಾಜ್ ಅವರಿಗೆ ಸೇರಿದ 5 ಸ್ಥಳಗಳ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಸುಮಾರು 4 ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿದೆ.
ಡಾ.ನಾಗರಾಜ್ ಕೂಡು ಕುಟುಂಬದೊಂದಿಗೆ ನಗರದ ನಿಜಲಿಂಗಪ್ಪ ಬಡಾವಣೆಯಲ್ಲಿ ವಾಸವಾಗಿದ್ದು, ಫಾರಂ ಹೌಸ್, ಸಹಕಾರ ಸಂಘದ ಕಚೇರಿ ಸೇರಿದಂತೆ 5 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ದಾಳಿಯ ವೇಳೆ ಲಕ್ಷಾಂತರ ರೂ ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
68 ಲಕ್ಷ ಮೌಲ್ಯದ ಕೃಷಿಭೂಮಿ, 36 ಲಕ್ಷ ಮೌಲ್ಯದ 1 ನಿವೇಶನ, 1.17 ಲಕ್ಷ ನಗದು, 94 ಲಕ್ಷ ಮೌಲ್ಯದ ಬಂಗಾರ, 2.43 ಲಕ್ಷದ ಬೆಳ್ಳಿ, 38 ಲಕ್ಷ ಮೌಲ್ಯದ ವಾಹನಗಳು ಪರಿಶೀಲನೆ ವೇಳೆ ಪತ್ತೆಯಾಗಿವೆ