lokayukta trap; ಪೋಡಿ ನಂಬರ್ ಸರಿಮಾಡಲು ಲಂಚ: ದಾವಣಗೆರೆ ಸರ್ವೇ ಸುಪರ್ ವೈಸರ್ ಲೋಕಾಯುಕ್ತ ಬಲೆಗೆ
ದಾವಣಗೆರೆ; lokayukta trap ರೈತನ ಜಮೀನಿನಲ್ಲಿ ತಪ್ಪಾಗಿದ್ದ ಚೆಕ್ ಬಂದಿ ಹಾಗೂ ಪೋಡಿ ನಂಬರ್ ಸರಿಮಾಡಲು ಅಡ್ವಾನ್ಸ್ 5 ಸಾವಿರ ಹಣ ಲಂಚ ಪಡೆಯುವಾಗ ದಾವಣಗೆರೆ ಡಿ ಡಿ ಎಲ್ ಆರ್ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿ ಸರ್ವೇ ಸುಪರ್ ವೈಸರ್ ಕೇಶವಮೂರ್ತಿ ಅವರನ್ನು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಹೋಬಳಿಯ ಪಲ್ಲಾಗಟ್ಟೆ ಗ್ರಾಮದ ಮೀನಾಕ್ಷಮ್ಮ ಎಂಬುವರಿಗೆ ಸೇರಿದ ಸರ್ವೆ 65/ 7 ರ ಜಮೀನಿನ 12 ಗುಂಟೆ ಪ್ರದೇಶದ ಚೆಕ್ ಬಂಧಿ ಹಾಗೂ ಪೋಡಿ ನಂಬರ್ ಬೇರೆ ಬೇರೆಯಾಗಿತ್ತು, ಅದನ್ನು ಸರಿಪಡಿಸುವಂತೆ ಮೀನಾಕ್ಷಮ್ಮ ಅವರ ಪರವಾಗಿ ಸಂಬಂಧಿ ಪಿ.ಜಿ. ಮುನಿಯಪ್ಪ ಎಂಬುವವರು ಡಿ ಡಿ ಎಲ್ ಆರ್ ಇಲಾಖೆಯ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಸರಿಪಡಿಸಲು ಸರ್ವೇ ಸುಪರ್ ವೈಸರ್ ಕೇಶವಮೂರ್ತಿ 40 ಸಾವಿರದ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ 30 ಸಾವಿರಕ್ಕೆ ಕೆಲಸ ಮಾಡಿಸಿಕೊಡುವುದಾಗಿ ಒಪ್ಪಿಕೊಂಡಿದ್ದರು.
murugha shivamurthy sharanaru; ಮುರುಘಾ ಶ್ರೀಗೆ ಷರತ್ತು ಬದ್ಧ ಜಾಮೀನು
ಇದಕ್ಕೂ ಮುಂಚೆ ಮುನಿಯಪ್ಪ ಅವರು ಲಂಚದ ಬಗ್ಗೆ ದಾವಣಗೆರೆಯ ಸಾಮಾಜಿಕ ಕಾರ್ಯಕರ್ತ ಹಾಗೂ ಗರುಡಚರಿತೆ ವಾರಪತ್ರಿಕೆಯ ವರದಿಗಾರರಾದ ಶ್ರೇಯಸ್ ಅವರಿಗೆ ಲಂಚದ ವಿಚಾರ ತಿಳಿಸಿದ್ದರು, ಈ ಬಗ್ಗೆ ಶ್ರೇಯಸ್ ಹಾಗೂ ಮುನಿಸ್ವಾಮಿ ದಾವಣಗೆರೆಯ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಗುರುವಾರ ನವೆಂಬರ್ 9 ರ ಸಂಜೆ ಕೇಶವಮೂರ್ತಿ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲೇ ಅಡ್ವಾನ್ಸ್ ರೂಪದಲ್ಲಿ 5 ಸಾವಿರ ರೂಪಾಯಿ ಲಂಚ ಪಡೆಯುವಾಗ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಎಸ್ ಪಿ ಎಂ.ಎಸ್. ಕೌಲಪೂರೆ, ಇನ್ಸಪೆಕ್ಟರ್ ರಾಷ್ಟ್ರಪತಿ, ಮಧುಸೂದನ್, ಪ್ರಭು ಬಿ. ಸೂರಿನ, ಸಿಬ್ಬಂದಿಗಳಾದ ವೀರೇಶಯ್ಯ, ಧನರಾಜ್, ಗಣೇಶ್, ಕೋಟಿನಾಯ್ಕ, ಕೃಷ್ಣ ನಾಯ್ಕ, ಬಸವರಾಜ್ ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ