Davanagere: ಲೋಕಿಕೆರೆ ನಾಗರಾಜ್ ರಾಜಕಾರಣದಲ್ಲಿ ನನ್ನಂತೆ ಇನ್ನೂ ಅಪ್ರಾಪ್ತ ಬಾಲಕ, ಸ್ವಂತ ಬುದ್ದಿಯೇ ಇಲ್ಲಾ..! ಸಾಗರ್ ಎಲ್ ಎಂ ಹೆಚ್

Lokikere nagaraj vs sagar lmh cold war

ದಾವಣಗೆರೆ : (Davanagere) ದಾವಣಗೆರೆ ಜಿಲ್ಲೆ ರಾಜಕಾರಣದಲ್ಲಿ ಶಾಮನೂರು ಕುಟುಂಬವನ್ನು ಟೀಕೆ ಮಾಡುವ ಮೊದಲು ತಮ್ಮನ್ನು ತಾವು ಪ್ರಶ್ನೆ ಮಾಡಿ ಮಾತನಾಡಬೇಕೆಂದು ಬಿಜೆಪಿ ರೈತ ಮೋರ್ಚಾ ಮುಖಂಡ ಲೋಕಿಕೆರೆ ನಾಗರಾಜ್ ತಿಳಿದು ಕೊಳ್ಳಬೇಕೆಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಕಾರ್ಯದರ್ಶಿಗಳು ಸಾಗರ್ ಎಲ್ ಎಂ ಹೆಚ್ ಕಿವಿ ಮಾತು ಹೇಳಿದ್ದಾರೆ.

ಯಾವುದೇ ವಿಷಯ ಹಾಗೂ ಆರೋಪ ಮಾಡುವ ಮೊದಲು ಸ್ವಂತ ಬುದ್ದಿಯಿಂದ ಮಾತಾಡಲಿ ಎಂದಿದ್ದಾರೆ. ಅಕ್ಕ ಪಕ್ಕದ ಧೈರ್ಯ ವಿಲ್ಲದವರ ಹೇಳಿಕೆ ಮಾತು ಕೇಳಿ ಮಾನ್ಯ ಸಚಿವರಾದ ಎಸ್ ಎಸ್ ಮಲ್ಲಣ್ಣ ಬಗ್ಗೆ ಹಗುರವಾಗಿ ಮಾತನಾಡಿದಾರೆ ಯಾವುದೇ ಪ್ರಯೋಜನವಿಲ್ಲ ಎಂದಿದ್ದಾರೆ. ನೀವು ಮಾಡಿರುವ ಆರೋಪಕ್ಕೆ ಸಕ್ಷ್ಯ ಒದಗಿಸಿ, ವಿನಹ ಕಾರಣ ಸುಳ್ಳು ಆರೋಪ ಮಾಡಿದರೆ ನಿಮಗೆ ಯಾವುದೇ ಲಾಭವಿಲ್ಲ ಎಂದಿದ್ದಾರೆ.

ಇತ್ತೀಚಿಗೆ ರೇಣುಕಾಚಾರ್ಯ ಹಾಗೂ ಮಾಜಿ ಸಂಸದರಾದ ಜಿ ಎಂ ಸಿದ್ದೇಶ್ವರ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದಾರೆ, ಇನ್ನೂ ಶಿವಮೊಗ್ಗ ಸಂಸದರಾದ ಬಿ ವೈ ರಾಘವೇಂದ್ರ ಅವರು ಪುತ್ರನ ಮದುವೆ ಕಾರ್ಯಕ್ರಮಕ್ಕೆ ಹಿರಿಯರಾದ ಶಾಮನೂರು ಶಿವಶಂಕರಪ್ಪಾ ಅವರನ್ನು, ಸಚಿವರಾದ ಮಲ್ಲಣ್ಣ ಅವರನ್ನು ಆಹ್ವಾನ ಮಾಡಿದ್ದಾರೆ. ರಾಜಕೀಯ ಹೊರತು ಪಡಿಸಿ ಉತ್ತಮ ಬಾಂಧವ್ಯ ಹೊಂದಿದ್ದು ಇದನ್ನು ಸಹಿಸಿಕೊಳ್ಳಲಾಗದೆ, ರಾಜಕೀಯದಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದ್ದೀರಾ, ಇದರಿಂದ ಯಾವುದೇ ಪ್ರಯೋಜನ ಇಲ್ಲಾ ಎಂದು ಲೋಕಿಕೆರೆ ನಾಗರಾಜ್ ಅವರಿಗೆ ಬುದ್ದಿ ಹೇಳಿದ್ದಾರೆ.

ಪ್ರಸ್ತುತ ರಾಜಕಾರಣದಲ್ಲಿ ಸರ್ಕಾರದ ಕಾರ್ಯಕ್ರಮ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಎಳ್ಳಷ್ಟು ನಿಮಗೆ ಜ್ಞಾನವಿಲ್ಲಾ, ಪಕ್ಷದ ಮುಖಂಡರು ದಾವಣಗೆರೆಗೆ ಬಂದಾಗ ಮನೆಯಲ್ಲಿ ಒಳ್ಳೆ ಅಡುಗೆ ಮಾಡಿಸಿ ಕಾರ್ಯಕರನ್ನು ಹೊರಗಡೆ ನಿಲ್ಲಿಸಿ ಬಂದ ನಾಯಕರೊಂದಿಗೆ ಅಪ್ಪಾ ಅಮ್ಮ ಕುಟುಂಬ ಸದಸ್ಯರೊಂದಿಗೆ ಫೋಟೋ ತೆಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದರೆ ನಾಯಕ ಎನಿಸಿಕೊಳ್ಳಲ್ಲಾ, 24 ಗಂಟೆ ಅಧಿಕಾರ ಇರಲಿ ಬಿಡಲಿ ಜನಸೇವೆ ಮಾಡುವ ನಮ್ಮ ಶಾಮನೂರು ಕುಟುಂಬ ನಿಜವಾದ ನಾಯಕರು ಎಂದು ಲೋಕಿಕೆರೆ ನಾಗರಾಜ್ ಅವರಿಗೆ ತೀಕ್ಷಣವಾಗಿ ಸಾಗರ್ ಎಲ್ ಎಂ ಹೆಚ್ ಕಿವಿಮಾತು ಹೇಳಿದ್ದಾರೆ.

ಇನ್ನೂ ಸಂಸದರಾದ ಶ್ರೀಮತಿ ಡಾ. ಪ್ರಭಾ ಮಲ್ಲಿಕಾರ್ಜುನ ರವರು ಜಿಲ್ಲಾಡಳಿತ ಭವನದಲ್ಲಿ ವಾರಕ್ಕೆ ಎರಡು ಬಾರಿ ಜನಸಂಪರ್ಕ ಸಭೆ ಮಾಡಿ ಸ್ಪಂದಿಸುತ್ತಿದ್ದಾರೆ, ಹಗಲು ಇರಳು ಜನ ಸೇವೆ ಮಾಡುತ್ತಿದ್ದಾರೆ, ಕಳೆದ 25 ವರ್ಷಗಳ ಕಾಲ ಸಂಸದರಾದ ಸಿದ್ದೇಶ್ವರ ಅವರು ಜನಸಂಪರ್ಕಕಚೇರಿಯಲ್ಲಿ ಏನು ಸಾಧನೆ ಮಾಡಿದ್ದಾರೆ ಹೇಳಿ, 25 ವರ್ಷ ಮಾಡದ ಸಾಧನೆ ಯನ್ನು ನಮ್ಮ ಸಂಸದರು ಕೇವಲ ಒಂದೇ ವರ್ಷ ದಲ್ಲಿ ಮಾಡಿ ತೋರಿಸಿದ್ದಾರೆ,.

ಸಂಸತ್ ನಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ ಅವರು ಸರ್ಕಾರಕ್ಕೆ ಜನರ ಪರವಾಗಿ ಪ್ರಶ್ನೆ ಕೇಳಿ ಜನಸಾಮಾನ್ಯರ ಪರವಾಗಿ ಮಾತನಾಡಿದ್ದಾರೆ. ನಿಮ್ಮ ಸಾಧನೆ ಏನು ಜಿಲ್ಲೆಗೆ ಬಿಜೆಪಿ ಕೊಡುಗೆ ಏನು ಎಂದು ಸಾಗರ್ ಎಲ್ ಎಂ ಹೆಚ್ ಲೋಕಿಕರೆ ನಾಗರಾಜ್ ವರಿಗೆ ಪ್ರಶ್ನೆ ಮಾಡುವ ಮೂಲಕ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!