ಪ್ರೀತಿಯಿಂದ ಪ್ರೀತಿಸಿ, ಪ್ರೀತಿಗೆ ಬೆಲೆ ತರೋಣ
ಚಿತ್ರದುರ್ಗ: ಪ್ರೀತಿ ಪ್ರೀತಿ ಈ ಎರಡಕ್ಷರ ಎಂಥವರ ಮನಸ್ಸನ್ನು ವಿಚಲ ಗೊಳಿಸುವ ಭಾವನೆಯಾಗಿ ಹೊರಹೊಮ್ಮಿದೆ ಪ್ರತಿಯೊಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತ ಅರ್ಥಮಾಡಿಕೊಂಡು ಬದುಕುವುದೇ ಪ್ರೀತಿಯ ನಿಜವಾದ ರೂಪ…
ಈ ಭೂಮಿಯ ಮೇಲೆ ಪ್ರೀತಿನೇ ಇಲ್ಲದಿದ್ರೆ ಏನಾಗುತ್ತೆ ಎಂಬುದು ಊಹೆ ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ, ಎಲ್ಲರೂ ಪ್ರೀತಿ ಎಂಬ ಮಾಯದ ಬಲೆಗೆ ಬೀಳ್ತಾರೆ ಅದು ಕ್ರಿಮಿ-ಕೀಟಗಳು ಆಗಿರಬಹುದು ಅಥವಾ ಪಕ್ಷಿ ಪ್ರಾಣಿಗಳೆ ಆಗಿರಬಹುದು ಇವ್ರುಗಳ ಮದ್ಯೆನು ಒಂದು ಪ್ರೀತಿ ನೋಡಬಹುದು. ಈ ಭೂಮಿಯ ಮೇಲೆ ಪ್ರೀತಿಗೆ ಇರುವಷ್ಟು ಬೆಲೆ ಮತ್ತೊಂದುಕ್ಕಿಲ್ಲ ಪ್ರೀತಿಯಲ್ಲಿ ಇದ್ದರೆ ಸಾಕು ಆಮೇಲೆ ಹಣ,ಅಂತಸ್ತು, ಐಶ್ವರ್ಯ ಅವುಗಳು ತಾನಾಗಿಯೇ ಒಲಿದು ಬರುತ್ತವೆ.ಅಂದರೆ ಆ ಪ್ರೀತಿ ಸತ್ಯತೆ ಮತ್ತು ಪ್ರಾಮಾಣಿಕತೆಯಿಂದ ಕೂಡಿರಬೇಕು, ಅಗಾ ಪ್ರೀತಿಗೆ ಪವಿತ್ರದೆ ಹೆಚ್ಚುತದೆ. ಆದನ್ನ ಬಿಟ್ಟು ಇದೆ ಪ್ರೀತಿಯಿಂದ ಮತ್ತೊಬ್ಬರಿಗೆ ಗಾಸಿಯಾಗಿರಬಾರದು ಆಗ ಮಾತ್ರ ಆ ಪ್ರೀತಿಗೆ ಒಂದು ಬೆಲೆ ಸಿಕ್ಕಂತಾಗುತ್ತದೆ
ಪ್ರೀತಿಗೆ ವಯಸ್ಸಿನ ಅಂತರವಿಲ್ಲ:
ಪ್ರಸ್ತುತ ದಿನಮಾನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಗಮನಿಸಿರಬಹುದು ಶಾಲೆಯ ಶಿಕ್ಷಕಿ ವಿದ್ಯಾರ್ಥಿಯನ್ನು ಮದುವೆ ಹಾಗಿರುವುದು, 60ರ ಮುದುಕ 18ರ ಯುವತಿಯನ್ನು ಪ್ರೇಮಿಸಿ ಮದುವೆಯಾಗಿರುವುದು ಹೀಗೆ ಸಾಕಷ್ಟು ಪ್ರೀತಿಯ ಆಯಾಮಗಳನ್ನು ನಾವು ನೋಡಬಹುದು. ಇದರ ಅರ್ಥ ಇಷ್ಟೇ ಅವರಿಬ್ಬರ ನಡುವಿನ ಸಂಬಂಧ ಪ್ರೀತಿಯಾಗಿ ಮಾರ್ಪಟ್ಟು ಗಟ್ಟಿಯ ನಿರ್ಧಾರದ ಮೇಲೆ ಪ್ರೀತಿಯ ಬಲೆಯಲ್ಲಿ ಬಿದ್ದು ಪ್ರೀತಿಯ ಪದಕ್ಕೆ ಮಾಂಗಲ್ಯ ಧಾರಣೆಯ ಮೂಲಕ ಪವಿತ್ರ ಸಂಬಂಧಕ್ಕೆ ಸಾಕ್ಷಿ ಆಗ್ತಾರೆ ಇದಕ್ಕೆ ಹೇಳೋದು ಪ್ರೀತಿಗೆ ಅಂತರವಿಲ್ಲ ಅನ್ನೋದು,
ಮನುಷ್ಯ ಹುಟ್ಟಿನಿಂದ ಸಾಯುವ ತನಕ ಪ್ರೀತಿಯ ನಡುವೆ ಬದುಕಬೇಕು ಒಬ್ಬರಿಗೊಬ್ಬರು ಆಸರೆಯಾಗಿ ಪರಸ್ಪರ ಸಂಬಂಧವನ್ನ ಗಟ್ಟಿಯ ಸ್ವರೂಪದಲ್ಲಿ ಬಿಗಿಮಾಡಿಕೊಂಡು ಬದುಕಬೇಕು.
ಪ್ರೀತಿಯ ಹುಡುಕಾಟ:
ತನ್ನನ್ನು ತಾನು ಪ್ರೀತಿಸದೆ ಇರುವವನು ಬೇರೆ ಯಾರನ್ನು ಕೂಡ ಪ್ರೀತಿಸಲಾರ ಎನ್ನುವ ಲೈನ್ಗಳು ಆಗಾಗ ಮೊಬೈಲ್ ವಾಟ್ಸಪ್ ಗಳಲ್ಲಿ ನಮ್ಮ ಕಣ್ಣಿಗೆ ಬೀಳುತ್ತಿರುತ್ತವೆ.ಈ ಲೈನ್ ಅಷ್ಟೇ ಸತ್ಯತೆಯಿಂದ ಕೂಡಿದೆ ಮೊದಲು ತನ್ನನ್ನು ನಾನು ಪ್ರೀತಿಸಬೇಕು ನನ್ನ ಮನಸ್ಸಿನೊಳಗಿನ ಅಂತರವನ್ನು ಅರಿತುಕೊಳ್ಳಬೇಕು ತನ್ನ ಹಿಡಿತವನ್ನು ತಾನೆ ಹಿಡಿದುಕೊಳ್ಳಬೇಕು ಆನಂತರ ಇನ್ನೊಬ್ಬರ ಪ್ರೀತಿ ಪಡೆಯಲು ಮುಂದಾಗಬೇಕು.
ಬರಿ ಮಾತಿನಲ್ಲಿ ಹೇಳುತ್ತಾರೆ ತಂದೆ ತಾಯಿಗಳ ಪ್ರೀತಿ ಈ ಜಗತ್ತಿನಲ್ಲಿ ಮತ್ತೊಂದಿಲ್ಲ ಒಪ್ಪಿಕೊಳ್ಳೋಣ ಆದರೆ ಯುವಕ-ಯುವತಿಯರು ಪ್ರೀತಿ ಮಾಡುವ ಸಂದರ್ಭದಲ್ಲಿ ತಂದೆ ತಾಯಿಗಳ ಪ್ರೀತಿಯು ನೆನಪಿಗೆ ಬರುವುದಿಲ್ಲ, ಅಷ್ಟು ಗಾಢವಾಗಿ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಪ್ರೀತಿಯ ಬಲೆಯಲ್ಲಿ ಮೈ ಮರೆತಿರುತ್ತಾರೆ. ಕೊನೆಗೊಂದು ದಿನ ಅವರಿಗೆ ತಿಳಿಯದಂತೆ ಮದುವೆಯಾಗಿ ಮದುವೆಯ ವಿಚಾರ ತಂದೆ ತಾಯಿಗಳ ಕಿವಿಗೆ ಬಿದ್ದಾಗ ಮನಸ್ಸಿನಲ್ಲಿ ಆಘಾತ ಉಂಟು ಮಾಡಿಕೊಂಡು ಚಿಂತೆಯಲ್ಲಿ ಬೀಳುವವರ ಹೆಚ್ಚು ಇದ ನಿಜವಾದ ಪ್ರೀತಿ ಅಂದ್ರೆ? ಪ್ರೀತಿ ಮಾಡೋಣ ಆದರೆ ತಂದೆ ತಾಯಿಗಳು ಮಕ್ಕಳ ಮೇಲೆ ಅಗಾಧವಾದ ಪ್ರೀತಿಯನ್ನು ಇಟ್ಟಿರುತ್ತಾರೆ ಆ ಪ್ರೀತಿಯ ಮುಂದೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದಾಗ ಆ ಪ್ರೀತಿಗೆ ಒಂದು ಅರ್ಥ ಸಿಗುತ್ತದೆ.
ಪ್ರೀತಿಗೆ ಬೆಲೆ ಇಲ್ಲ:
ಭೂಮಿಯ ಮೇಲೆ ಪ್ರೀತಿ ಮಾಡದೆ ಇರುವವರು ಯಾರು ಇಲ್ಲ ನಿಜ ಆದ್ರೆ ಆ ಪ್ರೀತಿಗೆ ತಕ್ಕ ಬೆಲೆಯನ್ನು ಉಳಿಸಿಕೊಳ್ಳುವುದರಲ್ಲಿ ವಿಫಲವಾಗುತ್ತಿದ್ದಾರೆ.
ಪ್ರೀತಿಯ ವಿಚಾರದಲ್ಲಿ ತಂದೆ-ತಾಯಿಗಳು ಅನುಭವಿಸಿದಷ್ಟು ನೋವು ಬೇರೆ ಯಾರು ಕೂಡ ಅನುಭವಿಸಲಾರರು ಅಷ್ಟು ಒಡಹುಟ್ಟಿದ ಮಕ್ಕಳು ಅವರಿಗೆ ನಂಬಿಕೆಗೆ ದ್ರೋಹವನ್ನು ಮಾಡಿ ಪ್ರೀತಿಯ ಬಲೆಯಲ್ಲಿ ಬಿದ್ದಿರುತ್ತಾರೆ.
ಸುಮಾರು ಇಂದಿನ ಕಾಲಗಳಲ್ಲಿ ಪ್ರೀತಿ ಅಂದರೆ ಸಾಕು ಅದಕ್ಕೆ ತನ್ನದೇ ಆದ ತೂಕವಿತ್ತು ಆದಷ್ಟು ಪ್ರೇಮಿಗಳು ಪ್ರೀತಿಸಿ ಮದುವೆಯಾಗಿ ಜೀವನದಲ್ಲಿ ಉನ್ನತ ಮಟ್ಟಕ್ಕೆ ಬಂದಿರುವವರು ನಾವು ನೋಡಬಹುದು.
ಇವತ್ತಿನ ಕಾಲಘಟ್ಟದಲ್ಲಿ ಪ್ರೀತಿಗೆ ಬೆಲೆ ಇಲ್ಲದಂತಾಗಿದೆ ತಿಳಿಯದ ವಯಸ್ಸಿನಲ್ಲಿ ಪ್ರೀತಿ ಮಾಡಿ ತಮ್ಮ ಜೀವನಗಳನ್ನು ಹಾಳು ಮಾಡಿಕೊಂಡಿದ್ದಾರೆ. ಪ್ರಾಥಮಿಕ ಶಾಲೆಯಲ್ಲಿ, ಪ್ರೌಢಶಾಲೆ ಹಂತಗಳಲ್ಲಿ, ಕಾಲೇಜು ದಿನಗಳಲ್ಲಿ ಪ್ರೀತಿಯ ಬಲೆಗೆ ಬೀಳುವವರೆಗೆ ಹೆಚ್ಚು ಆದರೆ ಒಬ್ಬರಿಗಿಂತ ಒಬ್ಬರು ಹೆಚ್ಚು ಪ್ರೀತಿ ಮಾಡುವುದರಲ್ಲಿ ತಲ್ಲಿನರಾಗಿರುತ್ತಾರೆ. ಆದರೆ ಅಲ್ಲಿನ ಪ್ರೀತಿಯು ಕೊನೆಯವರೆಗೆ ಉಳಿಯುವುದಿಲ್ಲ ಅವರ ಚಂಚಲ ಮನಸ್ಸಿಗೆ ಪ್ರೀತಿಯ ಆಕರ್ಷಣೆ ಉಂಟಾಗಿ ಸುಖಗಳನ್ನೆಲ್ಲ ಪಡೆದುಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಒಬ್ಬ ಹುಡುಗಿ 2 ರಿಂದ 3 ಹುಡುಗರನ್ನು ಪ್ರೀತಿಸುತ್ತಾಳೆ, ಒಬ್ಬ ಹುಡುಗ 4 ರಿಂದ 5 ಹುಡುಗಿಯನ್ನು ಪ್ರೀತಿಸುತ್ತಾನೆ, ಕೊನೆಗೊಂದು ದಿನ ಇವರನ್ನೆಲ್ಲರನ್ನು ಬಿಟ್ಟು ಬೇರೆಯವರನ್ನು ಮದುವೆಯಾಗುತ್ತಾರೆ ಹಾಗಿದ್ದರೆ ಪ್ರೀತಿಗೆಲ್ಲಿದೆ ಬೆಲೆ, ಇದು ಪ್ರೀತಿನ ನೀವೇ ಯೋಚಿಸಿ.
ಪ್ರೀತಿ ಉಳಿವಿಗಾಗಿ ಹೀಗೆ ಮಾಡಿ:
ಪ್ರತಿಯೊಬ್ಬರು ಪ್ರೀತಿ ಮಾಡಬೇಕು ಪ್ರೀತಿ ಮಾಡದಿದ್ದರೆ ಬದುಕುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವ ಮಾತನ್ನು ನಾವು ನಿಜ ಮಾಡಬೇಕಾದರೆ ಈ ಅಂಶಗಳನ್ನು ಪಾಲನೆ ಮಾಡಲೇಬೇಕು ನಮ್ಮ ಆಲೋಚನೆಗಳು ಸ್ಪಷ್ಟವಾಗಿರಬೇಕು, ನಮ್ಮ ಕಣ್ಣುಗಳು ಬೇರೆ ಕಡೆಗೆ ಗಮನ ಸೆಳೆಯದಂತೆ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಬೇರೆಯವರ ಸೌಂದರ್ಯಕ್ಕೆ ಮಾರುವಗಬಾರದು, ಪ್ರೀತಿ ಇರುವ ಕಡೆ ಸುಳ್ಳು ಹೇಳಬಾರದು,ಪ್ರೀತಿಸಿದವರ ಮೇಲೆ ನಂಬಿಕೆ-ವಿಶ್ವಾಸ ಇಡಬೇಕು, ಅನುಮಾನಕ್ಕೆ ಆಸ್ಪದ ನೀಡಬಾರದು, ನೇರ ನಿಖರತೆ ಇರಬೇಕು, ಹೊಂದಾಣಿಕೆ ಅನ್ನೋದು ಪ್ರತಿ ಸಂದರ್ಭದಲ್ಲೂ ಇರುಬೇಕು ಈ ರೀತಿಯ ಅಂಶಗಳನ್ನು ನಾವು ಜೀವನದಲ್ಲಿ ಅಳವಡಿಸಿದ್ದಲ್ಲಿ ಯಾವುದೇ ಪ್ರೀತಿಗಳು ಕೂಡ ಅರ್ಧಕ್ಕೆ ಮುಟ್ಟುಗೊಳ್ಳುವುದಿಲ್ಲ ಹಾಗಾಗಿ ನಾವು ಎಲ್ಲರನ್ನೂ ಪ್ರೀತಿಸೋಣ ಪ್ರೀತಿ ಕೊಟ್ಟವರಿಗೆ ಎರಡರಷ್ಟು ಪ್ರೀತಿಯ ಜೊತೆಗೆ ನಂಬಿಕೆ ವಿಶ್ವಾಸ ನೀಡಿ ಪ್ರೀತಿಗೆ ಬೆಲೆ ತರೋಣ….
ಬರಹಗಾರ,ಆನಂದ್.ಡಿ ಆಲಘಟ್ಟ,9742704237,ಚಿತ್ರದುರ್ಗ.