MSB: ಎಂ ಎಸ್ ಬಿ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಮಟ್ಟದ ಜುಡೊ ಪಂದ್ಯಾವಳಿ
ದಾವಣಗೆರೆ: ನಗರದ ಮಾ.ಸ. ಬ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕ್ರೀಡಾ ವಿಭಾಗ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ 2024-25 ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾಲಯದ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಜೂಡೊ ಪಂದ್ಯಾವಳಿ ಮತ್ತು ವಿವಿ ತಂಡದ ಆಯ್ಕೆ ಪ್ರಕ್ರಿಯೆಯು ಕಾಲೇಜಿನ ಶ್ರೀಮತಿ ಪಾರ್ವತಮ್ಮ ಸಭಾಂಗಣದಲ್ಲಿ ಜರುಗಿತು.
ಉದ್ಘಾಟಕರಾಗಿ ಯುವ ಮುಖಂಡರು ಹಾಗೂ ಉದ್ಯಮಿಗಳಾದ ಶ್ರೀ ಸಮರ್ಥ ಶಾಮನೂರು ಅವರು ಆಗಮಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿ, ಜೂಡೊ ಕ್ರೀಡೆಯ ವಿವಿಧ ಮಾದರಿ ಪಟ್ಟುಗಳನ್ನು ವೀಕ್ಷಿಸಿ ಕ್ರೀಡೆಗೆ ಚಾಲನೆ ನೀಡಿದರು. ಡಾ ಶಂಕರಪ್ಪ ಸಿ. ಅಧ್ಯಕ್ಷರು ದೈಹಿಕ ಶಿಕ್ಷಣ ನಿರ್ದೇಶಕರ ಸಂಘ ದಾವಣಗೆರೆ ವಿ.ವಿ ಅವರು ಮಾತನಾಡಿ ‘ವಿದ್ಯಾರ್ಥಿಗಳು ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಬೇಕು ಎಂದರು.
ಡಾ. ರೇಖಾ ಎಂ. ಆರ್ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಮಹಿಳಾ ಉಪಾಧ್ಯಕ್ಷರು, ದಾವಣಗೆರೆ ವಿ.ವಿ ಅವರು ಮಾತನಾಡುತ್ತಾ, ನಗರದಲ್ಲಿ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ, ಅವರಿಗೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಪ್ರೊ. ನೀಲಾಂಬಿಕ ಜಿ. ಸಿ ಅವರು ಮಾತನಾಡುತ್ತಾ ಕ್ರೀಡೆಯು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ. ಜ್ಞಾನಾರ್ಜನೆ ಜೊತೆಗೆ ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಾವು ದೈಹಿಕ, ಮಾನಸಿಕ ಮತ್ತು ಬೌದ್ಧಿಕವಾಗಿ ವಿಕಸನ ಹೊಂದಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಶ್ರೀ ಇಂದುಧರ ನಿಶಾನಿಮಠ್ ಅಧ್ಯಕ್ಷರು ಹಳೆಯ ವಿದ್ಯಾರ್ಥಿಗಳ ಸಂಘ ಶ್ರೀ ಬಸವರಾಜು ಈ ಕಾರ್ಯದರ್ಶಿ, ಡಾ. ವೀರಪ್ಪ ಬಿ. ಎಚ್ ಕ್ರೀಡಾ ಅಧಿಕಾರಿಗಳು ದಾವಣಗೆರೆ ವಿ.ವಿ ಡಾ. ವಿಜಯಕುಮಾರ್ ಎ. ಬಿ ಕ್ರೀಡಾ ಸಂಚಾಲಕರಾದ ಡಾ. ಪ್ರವೀಣ್ ಕುಮಾರ್ ಓ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಂ. ಮಂಜಪ್ಪ ಕ್ರೀಡಾ ಸದಸ್ಯರು ನಿರೂಪಿಸಿದರು.
ಕುಮಾರಿ ಸುನಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ರಾಘವೇಂದ್ರ ಆರ್. ವಂದಿಸಿದರು. ಈ ಸಂದರ್ಭದಲ್ಲಿ ಪ್ರೊ. ರಂಗಸ್ವಾಮಿ. ಟಿ. ಆರ್ ಪ್ರೊ. ಈಶ್ವರ್ ಕೆ. ವೈ ಹಾಗೂ ಬೋಧಕ, ಬೋಧಕೇತರ ವರ್ಗದವರು, ವಿವಿಧ ಕಾಲೇಜುಗಳಿಂದ ಬಂದ ಕ್ರೀಡಾಪಟುಗಳು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಜರಿದ್ದರು.