ಮಾ.13ರಂದು ಜೀ ಕನ್ನಡ ವಾಹಿನಿಯಿಂದ ಮಹಾ ಆಡಿಷನ್

Pn-2

ದಾವಣಗೆರೆ: ಜೀ ಕನ್ನಡ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್ 4ರ ಮಹಾ ಆಡಿಷನ್ಸ್ ಮಾರ್ಚ್ 13ರಂದು ನಗರದ ಎಸ್.ಎಸ್ ಲೇಔಟ್‌ನಲ್ಲಿರುವ ಬಿ.ಎಸ್ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9ರಿಂದ ಆಡಿಷನ್ಸ್ ಆರಂಭವಾಗಲಿದ್ದು, ಆಸಕ್ತ ಡ್ಯಾನ್ಸ್ ಹಾಗು ಕಾಮಿಡಿ ಮಾಡುವ ಕಿಲಾಡಿಗಳು ಪಾಸ್ಪೋರ್ಟ್ ಸೈಜ್ ಭಾವಚಿತ್ರ ಹಾಗು ವಿಳಾಸ ದೃಢೀಕರಣದ ನಕಲು ಪ್ರತಿಯೊಂದಿಗೆ ಆಡಿಷನ್ಸ್ನಲ್ಲಿ ಪಾಲ್ಗೊಳ್ಳಬಹುದು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮಕ್ಕೆ ಆಡಿಷನ್ ನೀಡುವವರ ವಯಸ್ಸು 6 ರಿಂದ 60 ವರ್ಷದೊಳಗಿನ ಹಾಗು ಕಾಮಿಡಿ ಕಿಲಾಡಿಗಳು ಆಡಿಷನ್‌ನಲ್ಲಿ ಭಾಗವಹಿಸುವವರ ವಯಸ್ಸು 16 ರಿಂದ 60 ವರ್ಷದೊಳಗಿರಬೇಕು. ಈ ಆಡಿಷನ್‌ಗಳಲ್ಲಿ ಭಾಗವಹಿಸಲು ಯಾವುದೇ ರೀತಿಯ ಶುಲ್ಕ ಕಟ್ಟುವಂತಿಲ್ಲ. ವಾಹಿನಿಯ ಹೆಸರಿನಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜೀ ಕನ್ನಡ ವಾಹಿನಿ ತಿಳಿಸಿದೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!