ಮಾಜಿ ಸಚಿವ ಎಸ್ ಎಸ್ ಎಂ ಹುಟ್ಟು ಹಬ್ಬ: ಎನ್ ಎಸ್ ಯು.ಐ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ

ದಾವಣಗೆರೆ: ಎನ್.ಎಸ್.ಯು.ಐ ವತಿಯಿಂದ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹುಟ್ಟು ಹಬ್ಬದ ಪ್ರಯುಕ್ತ ರಶ್ಮಿ ಹೆಣ್ಣು ಮಕ್ಕಳ ಉಚಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್ ಮಲ್ಲಿಕಾರ್ಜುನ್ ಅವರಿಗೆ ಪ್ರಾರ್ಥಿಸಿ ಶುಭಕೋರಿದರು.
ಈ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಮಲ್ಲಿಕಾರ್ಜುನ್, ಎನ್.ಎಸ್.ಯು.ಐ ಮುಖಂಡ ಶಶಿಧರ್ ಪಾಟೀಲ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್, ಯುವ ಮುಖಂಡರುಗಳಾದ ಮಹಮ್ಮದ್ ಜಿಕ್ರಿಯ, ಮಹಬೂಬ್ ಬಾಷಾ, ಯುವರಾಜ್ ಟಿ,ಮನೋಜ್ ಕುಮಾರ್ ಎಚ್.ಎಂ,ಅಣ್ಣೇಶ್, ಕಾರ್ತಿಕ್, ಮಹಂತೇಶ್ ಸೇತಿ ಮತ್ತಿತರರು ಭಾಗವಹಿಸಿದ್ದರು.

 
                         
                       
                       
                       
                       
                       
                       
                      