ಸ್ನೇಹಿತನನ್ನು ಕೊಲೆ ಮಾಡಿದ ಆರೋಪಿತರಿಗೆ ಜೀವಾವಧಿ ಶಿಕ್ಷೆ! ಗೋಲಿ ಆಡೋ ವಿಷಯಕ್ಕೆ ನಡೆದಿತ್ತು ಸ್ನೇಹಿತನ ಕೊಲೆ

ದಾವಣಗೆರೆ: ಹಣ ಆಸ್ತಿ ಅಂತಸ್ತು ವಿಚಾರಗಳಿಗಿಂತ ಇತ್ತೀಚಿಗೆ ಚಿಕ್ಕ ಪುಟ್ಟ ವಿಷಯಗಳಿಗೆ ಕೊಲೆ ನಡೆಯುವ ಪರಿಸ್ಥಿತಿಗೆ ಸಮಾಜ ತಲುಪುತ್ತಿದೆ ಎಂದರೆ ನಂಬಲೇಬೇಕು.
ಹೌದು ದಾವಣಗೆರೆಯಲ್ಲಿ ಗೋಲಿ ಆಡುವ ಕ್ಷುಲ್ಲಕ ವಿಚಾರಕ್ಕೆ ಕೊಲೆ ನಡೆದಿದ್ದು ಎಲ್ಲರು ಆಶ್ಚರ್ಯಪಡುವಂತಾಗಿದೆ.
ದಾವಣಗೆರೆ ಪಿ.ಬಿ ರಸ್ತೆಯಲ್ಲಿರುವ ಮಹೇಂದ್ರ ವೆಂಕಟಾರ್ ಮಹಂತ ಸರ್ವೀಸ್ ಸೆಂಟರ್ ಪಕ್ಕದ ಜಾಗದಲ್ಲಿ ಸ್ನೇಹಿತರಾದ ಅಶೋಕ ಬಸ್ ಪಾಪಣ್ಣ ಮತ್ತು ಶಿಲ್ಪಾಚಾರಿ ಬಿನ್ ಸಣ್ಣವೀರಾಚಾರಿ ಮತ್ತು ಭರತ್ ಹಾಗೂ ಇನ್ನಿತರರು ಆಗಾಗ್ಗೆ ಗೋಲಿ ಆಡುವುದು, ಕುಡಿಯುವುದು ಮಾಡುತ್ತಿದ್ದರು. ಈ ಸಮಯದಲ್ಲಿ ಗೋಲಿ ಆಡುವ ವಿಚಾರಕ್ಕೆ ಒಬ್ಬರನ್ನೊಬ್ಬರು ಬೈದಾಡಿಕೊಂಡು ಆರಂಭವಾದ ಜಗಳ ಭರತ್ ಎಂಬುವನ ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆಯ ಹಿನ್ನಲೆ :ಆರೋಪಿತರಾದ ಅಶೋಕ ಬಸ್ ಪಾಪಣ್ಣ ಮತ್ತು ಶಿಲ್ಪಾಚಾರಿ ಬಿನ್ ಸಣ್ಣವೀರಾಚಾರಿ ಮತ್ತು ಭರತ್ ಹಾಗೂ ಸಾಕ್ಷಿ -6, 7 ರವರು ಸ್ನೇಹಿತರಾಗಿದ್ದು, ಅವರು ಆಗಾಗ್ಗೆ ದಾವಣಗೆರೆ ಪಿ.ಬಿ ರಸ್ತೆಯಲ್ಲಿರುವ ಮಹೇಂದ್ರ ವೆಂಕಟಾರ್ ಮಹಂತ ಸರ್ವೀಸ್ ಸೆಂಟರ್ ಪಕ್ಕದ ಖಾಲಿ ಜಾಗದಲ್ಲಿ ಗೋಲಿ ಆಡುವುದು, ಕುಡಿಯುವುದು ಮಾಡುತ್ತಿದ್ದರು.
ದಿನಾಂಕ :10-07-2018 ರಂದು ಮಧ್ಯಾನ 2 ರಿಂದ 3 ಗಂಟೆಯ ಸಮಯದಲ್ಲಿ ಸಾಕ್ಷಿ-5 ರವರ ಹುಟ್ಟು ಹಬ್ಬ ಮುಗಿಸಿಕೊಂಡು ಮೃತ ಭರತ್ ಮತ್ತು 1 ಮತ್ತು 2ನೇ ಆರೋಪಿತರು ಕುಡಿಯಲೆಂದು ದಾವಣಗೆರೆ ಪಿ.ಬಿ ರಸ್ತೆಯಲ್ಲಿರುವ ಮಹೇಂದ್ರ ಮೋಟಾರ್ಸ್ ಮಹಂತ ಸರ್ವೀಸ್, ಸೆಂಟರ್, ಪಕ್ಕದ ರಾಮಚಂದ್ರಪ್ಪ ಕೋಡಕರ್ & ಕುರ್ಡೇಕರ್ ಎಂಬುವರಿಗೆ ಸೇರಿದ ಖಾಲಿ ಜಾಗದಲ್ಲಿ ಕುಡಿಯುತ್ತಾ ಕುಳಿತಿದ್ದಾಗ ಸಂಜೆ ಸುಮಾರು 6 ಗಂಟೆ ವೇಳೆಗೆ ಮೃತ ಭರತ್‌ನು 1ನೇ ಆರೋಪಿಗೆ ಯಾಕಲೇ ಸೂಳೆಮಗನೆ ಗೋಲಿ ಆಡೋಕೆ ಬರ್ತಾ ಇಲ್ಲ ಬಾರೋ ಮಿಂಡ್ರಿ ಮಗನೇ ಗೋಲಿ ಆಡೋಕೆ ಎಂದು ಅವಾಚ್ಯವಾಗಿ ಬೈದಾಡಿದ್ದಕ್ಕೆ 1ನೇ ಆರೋಪಿಯು ಸರಿಯಾಗಿ ಮಾತಡಲೇ ನಂದು ಕೆಲಸ ಇತ್ತು. ಅದಕ್ಕೆ ಬರಲಿಲ್ಲ ಎಂದು ಮೃತ ಭರತ್‌ಗೆ ಹೇಳಿದ್ದಕ್ಕೆ ಮೃತ ಭರತ್ ನು ಯಾಕಲೇ ನಾನು ಹಿಂಗೇ ಮಾತನಾಡೋದು ಏನೀಗಾ ಅಂತ 1ನೇ ಆರೋಪಿಗೆ ಹೇಳಿದ್ದಾನೆ.
ಆಗ 1ನೇ ಆರೋಪಿಯು ಏನೋ ಸೂಳೆ ಮಗನೇ ಅಂತ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಮೃತ ಭರತ್‌ನ ಕುತ್ತಿಗೆಯನ್ನು ಹಿಡಿದು ಹಿಂದಕ್ಕೆ ತಳ್ಳಿದಾಗ, 2ನೇ ಆರೋಪಿಯು ಸಹ ಸಾಯಿಸಲೇ ಆ ಸೂಳೆ ಮಗನಿಗೆ ಎಂದು ಮೃತ ಭರತ್ ನಿಗೆ ಅವಾಚ್ಯ ಶಬ್ದಗಳಿಂದ ಬೈದು ಜೋರಾಗಿ ದೂಡಿದಾಗ ಮೃತ ಭರತ್‌ನು ಏನೋ ಸೂಳೆ ಮಕ್ಕಳ ಹೊಡಿತಿರೆನ್ರಲೆ ಎಂದು ಸಿಮೆಂಟ್ ಇಟ್ಟಿಗೆಯನ್ನು ತೆಗೆದುಕೊಂಡು 1ನೇ ಆರೋಪಿಯ ಕಡೆ ಎಸೆದಿದ್ದಾನೆ. ಇದರಿಂದ 1ನೇ ಆರೋಪಿ ತಪ್ಪಿಸಿಕೊಂಡಿದ್ದು 2ನೇ ಆರೋಪಿಯ ಬಲಗೈ ಹೆಬ್ಬೆರಳು, ಮಧ್ಯದ ಬೆರಳಿಗೆ ಹೊಡೆತ ಬಿದ್ದು ಗಾಯವಾಗಿದೆ.
ಅದೇ ಸಮಯದಲ್ಲಿ ಮೃತ ಭರತ್ ಏನಲೇ ಸೂಳೆ ಮಕ್ಕಳ ಅಂತ ಬೈದಾಡುತ್ತಾ 1ನೇ ಆರೋಪಿಯ ತಲೆಯ ಕೂದಲನ್ನು ಹಿಡಿದು ಜೋರಾಗಿ ಎಳೆದಾಡುತ್ತಿದ್ದಾಗ 2ನೇ ಆರೋಪಿಯು ಮೃತ ಭರತ್‌ನನ್ನು ಎಳೆದು ನೆಲಕ್ಕೆ ಕೆಡವಿ ಈ ಸೂಳೆ ಮಗನನ್ನು ಸಾಯಿಸಲೇ ಎಂದು 1ನೇ ಆರೋಪಿಯು ಸಿಮೆಂಟ್ ಇಟ್ಟಿಗೆಯಿಂದ ಮತ್ತು 2 ಆರೋಪಿಯು ಸಹ ಇನ್ನೊಂದು ಸಿಮೆಂಟ್ ಇಟ್ಟಿಗೆಯಿಂದ ಮೃತ ಭರತನನ್ನು ಕೊಲೆ ಮಾಡುವ ಉದ್ದೇಶದಿಂದ ಎಡತಲೆಯ ಮೇಲೆ ಎತ್ತಿ ಹಾಕಿ ಎಡಕಿವಿಗೆ, ಗದ್ದ ಹತ್ತಿರ, ಎಡತಲೆಗೆ ಹೊಡೆದು ತೀವ್ರವಾಗಿ ರಕ್ತಗೊಳಿಸಿ ಕೊಲೆ ಮಾಡಿದ್ದಾರೆ.
1ನೇ ಆರೋಪಿಯು ಹಣದ ಆಸೆಯಿಂದ ಮೃತ ಭರತ್ ಪ್ಯಾಂಟಿನ ಜೇಬಿನಲ್ಲಿದ್ದ ಮತ್ತು ಬಲಗೈ ಬೆರಳಿನಲ್ಲಿದ್ದ ಉಂಗುರ, ಹಣ ಮತ್ತು ಇತರೆ ದಾಖಲಾತಿಗಳಿರುವ ಪರ್ಸ್‌ನ್ನು ತೆಗೆದುಕೊಂಡು ಹೋಗಿದ್ದಾರೆ.
ನಂತರ ಕೊಲೆಯಾದ ಮೃತ ಭರತ್‌ನ ಮೈ ಮೇಲೆ ಖಾರದ ಪುಡಿ ಹಾಕಿದರೆ ಹಂದಿಗಳು ಮೃತ ಭರನನ್ನು ತಿಂದು ಹಾಕುತ್ತವೆ. ಆಗ ಕೊಲೆಯಾದವನು ಭರತ್ ಅಂತ ಗೊತ್ತಾಗುವುದಿಲ್ಲ ಎಂದು 1ನೇ ಆರೋಪಿಯು ಸಾಕ್ಷಿ-10 ರವರ ಅಂಗಡಿಯಲ್ಲಿ 1 ಕೆ.ಜಿ ಖಾರದ ಪುಡಿಯನ್ನು ಖರೀದಿ ಮಾಡಿ ಮೃತ ಭರತ್‌ನ ಮೈ ಮೇಲೆ ಮತ್ತು ಸುತ್ತಾ ಖಾರದ ಪುಡಿ ಹಾಕಿ ಸಾಕ್ಷಿ ನಾಶ ಮಾಡಲು ಪ್ರಯತ್ನಿಸಿದ್ದರು.ತನಿಖೆಯಿಂದ ಈ ಎಲ್ಲ ಮಾಹಿತಿ ಬೆಳಕಿಗೆ ಬಂದು ದೃಢಪಟ್ಟಿದ್ದು ಪ್ರಕರಣದ ತನಿಖಾಧಿಕಾರಿ ಹಾಗೂ ಆಗಿನ ಪೊಲೀಸ್ ವೃತ್ತ ನಿರೀಕ್ಷಕರಾದ ಆನಂದ್ ಇ ರವರು ತನಿಖೆ ಮಾಡಿ ಆರೋಪಿತರ ವಿರುದ್ಧ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಾನ್ಯ ಶ್ರೀಪಾದ ಎನ್ ರವರು ಆರೋಪಿತರ ಮೇಲಿನ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 35,000/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರಿ ಆಯೋಜಕರಾದ ಶ್ರೀಯುತ ಜಯಪ್ಪ ಕೆ.ಜಿ ಯವರು ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.
ಸುದ್ದಿಗಾಗಿ ಸಂಪರ್ಕಿಸಿ: 9740365719
garudavoice21@gmail.com

 
                         
                       
                       
                       
                       
                       
                       
                      