ಮೇಲ್ಸೇತುವೆಯಿಂದ ನೋಟು ಎಸೆದ ವ್ಯಕ್ತಿ: ಆರಿಸಿಕೊಳ್ಳಲು ಮುಗಿಬಿದ್ದ ಜನ ನೋಟು ಎಸೆದ ಅರುಣ್ ಬಂಧನ

Man who threw notes from flyover: Arun arrested for throwing notes when people ran out of choices

ಬೆಂಗಳೂರು: ಕೆ.ಆರ್. ಮಾರುಕಟ್ಟೆ ಮೇಲ್ಸೇತುವೆಯಿಂದ 10 ನೋಟುಗಳನ್ನು ಕೆಳಗೆ ಎಸೆದಿದ್ದ ಅರುಣ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊರಳಿಗೆ ಗಡಿಯಾರ ಧರಿಸಿದ್ದ ವ್ಯಕ್ತಿ, ದ್ವಿಚಕ್ರ ವಾಹನದಲ್ಲಿ ಮೇಲ್ಸೇತುವೆಗೆ ಬಂದಿದ್ದ. ಬ್ಯಾಗ್‌ನಿಂದ ನೋಟುಗಳನ್ನು ತೆಗೆದು ಎಸೆದಿದ್ದಾನೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ನೋಟು ಎಸೆದ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿಯೂ ಹರಿದಾಡಿತ್ತು.
ಮಂಗಳವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ಮೇಲ್ಸೇತುವೆಗೆ ಬಂದಿದ್ದ ಅರುಣ್, ತಮ್ಮ ಬಳಿಯ ಬ್ಯಾಗ್‌ನಲ್ಲಿದ್ದ ನೋಟುಗಳನ್ನು ಕೆಳ ರಸ್ತೆಗೆ ಎಸೆದಿದ್ದರು. ಇವುಗಳನ್ನು ಆರಿಸಿಕೊಳ್ಳಲು ಮುಗಿಬಿದ್ದಿದ್ದರು.
ಸ್ಥಳೀಯರು ನೀಡಿರುವ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯೂಟ್ಯೂಬ್ ಚಾನೆಲ್‌ವೊಂದರ ಕಚೇರಿಯಲ್ಲಿದ್ದ ಆರೋಪಿ ಅರುಣ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!