ಮಂಗಳೂರು ಮೂಲದ ಸೈನಿಕ ಹೃದಯಾಘಾತದಿಂದ ನಿಧನ

ಭೋಪಾಲ್: ಭಾರತ ಸರ್ಕಾರದ ಗೃಹ ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಸಶಸ್ತ್ರ ಸೀಮಾ ಬಲ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಗಳೂರು ಮೂಲದ ಸೈನಿಕರೋರ್ವರು ನಿಧನರಾದ ಘಟನೆ ನಡೆದಿದೆ.
ಮುರಳೀಧರ ಬಿಎಸ್ ನಿಧನರಾದ ಸೈನಿಕರು. ಇವರು ಮಧ್ಯಪ್ರದೇಶದ ಭೋಪಾಲ್‌ಬಲ್ಲಿ ಹೆಚ್‌ಸಿ/ಜಿಡಿ ರ್‍ಯಾಂಕ್ ಹೊಂದಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ರಾತ್ರಿ ಮಲಗಿದವರು ಮುಂಜಾನೆ ಎದ್ದಿಲ್ಲ. ಪರಿಶೀಲನೆ ಮಾಡಿದ ವೈದ್ಯರು ಹೃದಯಾಘಾತದಿಂದ ಅಸುನೀಗಿದ್ದಾಗಿ ದೃಢೀಕರಿಸಿದ್ದಾರೆ.
ಮೃತರ ಪಾರ್ಥಿವ ಶರೀರ ಇಂದು ಮಂಗಳೂರಿಗೆ ಆಗಮಿಸಲಿದೆ. ಸಾವಿಗೂ ಮುನ್ನ ಮೃತರು ಪತ್ನಿ ಜೊತೆ ವಿಡಿಯೋ ಕಾಲ್ ಮೂಲಕ ಸಂಭಾಷಣೆ ನಡೆಸಿದ್ದರು. ಮೃತರಿಗೆ ಆರು ತಿಂಗಳ ಮಗುವಿದ್ದು, ಮಗು ಜನಿಸಿದ ನಂತರ ಮಗುವನ್ನು ನೋಡಲು ಮೊದಲ ಬಾರಿಗೆ ಊರಿಗೆ ಬರಲು ಸಿದ್ಧತೆ ನಡೆಸಿದ್ದರು. ಮೃತರು ಹೆಂಡತಿ, ಆರು ತಿಂಗಳ ಮಗುವನ್ನು ಅಗಲಿದ್ದಾರೆ.