ಮನೋರಂಜನ್ ಕಲ್ಯಾಣ.!ಪುತ್ರನ ಮದುವೆಯಲ್ಲಿ ರವಿಮಾಮ ಸಖತ್ ಡ್ಯಾನ್ಸ್.!

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡಲ್ಲಿ ಇಂದು ರವಿಚಂದ್ರನ್ ಅವರ ಪುತ್ರ ಮನೋರಂಜನ್ ಕಲ್ಯಾಣ ಅದ್ದೂರಿಯಾಗಿ ನೆರವೇರಿದೆ.
ಇಂದು ಬೆಳಗಿನ 8:30ರ ಶುಭ ಮುಹೂರ್ತದಲ್ಲಿ ಮನೋರಂಜನ್ ಸಂಗೀತ ಅವರಿಗೆ ಮಾಂಗಲ್ಯ ಧಾರಣೆ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮನೋರಂಜನ್ ವೈಟ್ ಪಂಚೆ ಮತ್ತು ವೈಟ್ ಶರ್ಟ್ ಧರಿಸಿದ್ರೆ ಸಂಗೀತ ರೆಡ್ ಸ್ಯಾರಿಯಲ್ಲಿ ಮಿಂಚಿದ್ದಾರೆ. ನಿನ್ನೆ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ರವಿಮಾಮ ಸಕ್ಕತ್ ಡ್ಯಾನ್ಸ್ ಮಾಡಿದ್ದಾರೆ.
ಮದುವೆ ಬಗ್ಗೆ ಮಾತನಾಡಿದ ಮನೋರಂಜನ್ ನಮ್ಮ ತಂದೆ ತಾಯಿ ತೋರಿಸಿದ ಹುಡುಗಿಯನ್ನು ಮದುವೆ ಆಗಿದ್ದೇನೆ. ಸಂಗೀತ ನಮ್ಮ ದೂರದ ಸಂಬಂಧಿ. ನನಗೆ ಈಗ 34 ವರ್ಷ ಆದರೆ ನಮ್ಮ ಕುಟುಂಬದಲ್ಲಿ 27 ವರ್ಷಕ್ಕೆ ಮದುವೆ ಆಗ್ತಾರೆ. ನಾನು ಮಾತ್ರ ಲೇಟಾಗಿ ಮದುವೆ ಆಗಿದ್ದೇನೆ. ಸಂಗೀತ ಚೆನ್ನೈ ಮೂಲದ ದವರಾಗಿದ್ದು ವೃತ್ತಿಯಲ್ಲಿ ಡಾಕ್ಟರ್ ಆಗಿದ್ದಾರೆ.
ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಖುಷ್ಬು ಉಮಶ್ರೀ ಸೇರಿದಂತೆ ಗಣ್ಯಾತಿ ಗಣ್ಯರು ನವ ವಧುವರರಿಗೆ ಶುಭ ಹಾರೈಸಿದ್ದಾರೆ