ಜಿಎಂಐಟಿಯ ಹಲವು ವಿದ್ಯಾರ್ಥಿಗಳಿಗೆ ಉದ್ಯೋಗ, ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ಸಂಭ್ರಮಾಚರಣೆ.
ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಹಲವು ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿ ಕಾಲೇಜಿಗೆ ಮತ್ತು ಅವರ ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ 7ನೇ ಸೆಮಿಸ್ಟರ್ ಮುಕ್ತಾಯಕ್ಕೆ 457 ವಿದ್ಯಾರ್ಥಿಗಳು ಹಲವು ಪ್ರತಿಷ್ಠಿತ ಕಂಪನಿಗಳಾದ ಟಿಸಿಎಸ್ ವಿಪ್ರೋ ಇವೈ ಗ್ಲೋಬಲ್, ಟಾರ್ಗೆಟ್ ಕಾರ್ಪೋರೇಷನ್, ಎಸ್ ಎಲ್ ಕೆ ಸಾಫ್ಟ್ವೇರ್, ಐಬಿಎಂ, ಮೈಂಡ್ಟ್ರೀ, ರೋಬೋಸಾಫ್ಟ್ ಟೆಕ್ನಾಲಜೀಸ್, ಕ್ಯಾಪ್ಜೆಮಿನಿ, ಟೆಕ್ ಮಹೇಂದ್ರ, ಓಜಿ ಹೆಲ್ತ್ಕೇರ್, ಬೈಜೂಸ್, ಐಸಿಐಸಿಐ ಬ್ಯಾಂಕ್, 6ಡಿ ಟೆಕ್ನೋಲಜಿಸ್, ಹೆಚ್ ಸಿ ಎಲ್ ಟೆಕ್ನಾಲಜೀಸ್, ಎಕ್ಸಾವೇರ್, ಫೋಕಸ್ ಎಜುಮ್ಯಾಟಿಕ್, ಮುಂತಾದ ಹಲವು ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.
ಮುಂದಿನ ದಿನಗಳಲ್ಲಿ ಅಂದರೆ ಎಂಟನೇ ಸಮಿಸ್ಟರ್ ಪ್ರಾರಂಭದಲ್ಲೇ ಹಲವು ಕಂಪನಿಗಳು ಜಿಎಂಐಟಿ ವಿದ್ಯಾರ್ಥಿಗಳಿಗೆ ಸಂದರ್ಶನ ಪ್ರಕ್ರಿಯೆ ನಡೆಸಲು ಅನುಮತಿಯನ್ನು ಕೋರಿವೆ. ಪ್ರತಿಷ್ಠಿತ ಕಂಪನಿಗಳಾದ ಬಾಷ್, ಸಸ್ಕೆನ್ ಕಮ್ಯುನಿಕೇಶನ್, ಕ್ವಾಲಿಟೆಸ್ಟ್, ಶಿಲ್ಪ ಬಯಲಾಜಿಕಲ್, ಎಲ್ ಜಿ ಸಾಫ್ಟ್ ಇಂಡಿಯಾ, ಅರ್ಮಾನ್, ಎಪಿಸೋರ್ಸ್, ಎನ್ ಟಿಟಿ ಡೇಟಾ, ಹೆಚ್ ಡಿ ಎಫ್ ಸಿ, ಡಿ ಮಾರ್ಟ್, ಪೂರ್ವಿ ದೆವಲಪರ್ಸ್, ಬ್ರಿಕ್ ಬಿಲ್ಡ್ ಕನ್ಸ್ಟ್ರಕ್ಟರ್, ಟಾಟಾ ಅಡ್ವಾನ್ಸ್ಡ್, ಮಹಿಂದ್ರ ಸಿ ಐ ಇ ಮುಂತಾದ ಪ್ರತಿಷ್ಠಿತ ಕಂಪನಿಗಳು ಸಂದರ್ಶನ ನಡೆಸಲಿವೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗ ನೀಡುವ ಗುರಿಯನ್ನು ಹೊಂದಿದ್ದು, ಆ ನಿಟ್ಟಿನಲ್ಲಿ ಉದ್ಯೋಗ ವಿಭಾಗ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆಯನ್ನು ಗಮನಿಸಬಹುದಾಗಿದೆ ಎಂದು ಕಾಲೇಜಿನ ಆಡಳಿತಾಧಿಕಾರಿ ಶ್ರೀ ವೈ ಯು ಸುಭಾಶ್ಚಂದ್ರ ತಿಳಿಸಿದರು.
ಈ ಗಮನಾರ್ಹ ಬೆಳವಣಿಗೆಯನ್ನು ಕಾಲೇಜಿನ ಚೇರ್ಮನ್ ಆದ ಶ್ರೀ ಜಿಎಂ ಲಿಂಗರಾಜು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಗಳು ಪ್ರೋತ್ಸಾಹಿಸುತ್ತಿರುವುದಲ್ಲದೆ ಜೊತೆ ನಿಂತು ಯಶಸ್ಸಿಗೆ ಶ್ರಮ ವಹಿಸುತ್ತಿದ್ದಾರೆ ಎಂದು ಪ್ರಾಂಶುಪಾಲರು ಇದೇವೇಳೆ ತಿಳಿಸಿದರು.