Marijuana Destroyed: 500 ಕೋಟಿ ಬೆಲೆಯ 2 ಲಕ್ಷ ಕೆಜಿ ಗಾಂಜಾ ಸುಟ್ಟ ಅಂಧ್ರಪ್ರದೇಶ ಸರ್ಕಾರ

ಆಂಧ್ರಪ್ರದೇಶ: ಆಂಧ್ರಪ್ರದೇಶದ Andhra pradesh ಕೋಡೂರು ಗ್ರಾಮದ ತೆರೆದ ಮೈದಾನದಲ್ಲಿ ಸುಮಾರು 500 ಕೋಟಿ ರೂ. ಬೆಲೆಯ 2 ಲಕ್ಷ ಕೆಜಿ ಗಾಂಜಾವನ್ನು ಸುಟ್ಟು ಭಸ್ಮ ಮಾಡಲಾಗಿದೆ. 500 crore marijuana burned ಆಪರೇಷನ್ ಪರಿವರ್ತನ್ operation parivarthan ಎಂಬ ಯೋಜನೆಯಡಿಯಲ್ಲಿ, ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಂಗ್ರಹಿಸಿದ್ದ police station ಗಾಂಜಾವನ್ನು ಸುಟ್ಟು ಹಾಕುವ ಮೂಲಕ ಆಂಧ್ರ ಪ್ರದೇಶ ಸರ್ಕಾರ ಗಮನ ಸೆಳೆದಿದೆ.
ರಾಜ್ಯದಲ್ಲಿ ಡ್ರಗ್ಸ್ drugs ಹಾವಳಿಯನ್ನು ನಿರ್ಮೂಲನೆ ಮಾಡುವುದನ್ನು ನಾಶಪಡಿಸಿಲು ಇಷ್ಟು ದೊಡ್ಡ ಪ್ರಮಾಣದ ಡ್ರಗ್ಸ್ ನಾಶಪಡಿಸಿರುವುದು ದೇಶದಲ್ಲೇ ಇದೇ ಮೊದಲು ಎಂದು ಪೊಲೀಸರು ಹೇಳಿದ್ದಾರೆ.
ವಿಶಾಖಪಟ್ಟಣದ Visakhapatnam ಅನಕಪಲ್ಲಿ ಮಂಡಲದಲ್ಲಿರುವ ಕೋಡೂರಿನ ಮೈದಾನದಲ್ಲಿ ಬೃಹತ್ ಮಟ್ಟದ ರಾಶಿಗಳನ್ನು ನಿರ್ಮಿಸಿ ಬೆಂಕಿ ಹಂಚಲಾಯಿತು. ಈ ಘಟನೆಯನ್ನು ಹಲವರು ಕುತೂಹಲ ಹಾಗೂ ಹಲವು ನಿರೀಕ್ಷೆಯಿಂದ ವೀಕ್ಷಿಸಿದರು.
ಸ್ಥಳದಲ್ಲಿದ್ದ ಪೋಲಿಸರು, ಪತ್ರಕರ್ತರು ಹಾಗೂ ಇತರರಿಗೆ ಏನಾದರೂ ಸಮಸ್ಯೆಯಾಗಬಹುದೇ ಎಂದು ಕುತೂಹಲಭರಿತರಾಗಿದ್ದರು. ಬೃಹತ್ ಹೊಗೆಯು ಅನೇಕರಿಗೆ ತಲೆನೋವನ್ನು ತಂದಿತು. ಆದರೆ ಅಂತಹ ಪರಿಣಾಮಗಳೇನೂ ಆಗಿಲ್ಲ ಎಂದು ‘ನ್ಯೂಸ್ ಮಿನಿಟ್’ ವರದಿ ಮಾಡಿದೆ.