ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಮಾತಾಡ್ ಮಾತಾಡ್ ಕನ್ನಡ” ಕನ್ನಡಗೀತ ಗಾಯನ – ಪಾಲಿಕೆ ವತಿಯಿಂದ ಕಾರ್ಯಕ್ರಮ

IMG-20211028-WA0084

ದಾವಣಗೆರೆ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ “ಮಾತಾಡ್ ಮಾತಾಡ್ ಕನ್ನಡ” ಕನ್ನಡ ಗೀತ ಗಾಯನ ಕಾರ‍್ಯಕ್ರಮವನ್ನು ಮಹಾನಗರ ಪಾಲಿಕೆಯ ಚನ್ನಗಿರಿ ವಿರೂಪಾಕ್ಷಪ್ಪ ರಂಗಮಂಟಪದಲ್ಲಿ ಇಂದು ನಡೆಸಲಾಯಿತು. ಸುಮಾರು ಐದು ನೂರಕ್ಕೂ ಹೆಚ್ಚು ಅಧಿಕಾರಿಗಳು, ಪೌರಕಾರ‍್ಮಿಕರು, ಸಿಬ್ಬಂದಿಗಳು ಹಾಗೂ ನೌಕರರಿಂದ ಕನ್ನಡ ಶ್ರೇಷ್ಠತೆಯನ್ನು ಸಾರುವ ಗೀತೆಗಳಾದ ನಾಡಗೀತೆ, ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ, ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಹಾಡುಗಳನ್ನು ಹಾಡಲಾಯಿತು.

ಈ ಸಂದರ್ಭದಲ್ಲಿ ಪೂಜ್ಯ ಮಹಾಪೌರರಾದ ಎಸ್ಟಿ ವೀರೇಶ್, ಉಪ ಮಹಾಪೌರರಾದ ಶಿಲ್ಪ ಜಯಪ್ರಕಾಶ್, ಆಯುಕ್ತರಾದ ವಿಶ್ವನಾಥ್ ಮುದ್ದಜ್ಜಿ, ದಾವಣಗೆರೆ ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಬಾ.ಮ. ಬಸವರಾಜಯ್ಯ, ಮಹಾಲಿಂಗಪ್ಪ, ದಿಳ್ಯಪ್ಪ, ಬಂಕಾಪುರದ ಚನ್ನಬಸಪ್ಪ, ಸಹನಾ ರವಿ ಹಾಗೂ ಪುಷ್ಪಾವತಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷರಾದ ಎ. ಆರ್. ಉಜ್ಜಿನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಮಹಾನಗರ ಪಾಲಿಕೆ ಸದಸ್ಯರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!