ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಚಾಲನೆ.

IMG-20211119-WA0007

 

ದಾವಣಗೆರೆ: ದಾವಣಗೆರೆ ಉತ್ತರ ಹಾಗೂ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರಗಳ ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ನಾಳೆ ದಿನಾಂಕ ನವೆಂಬರ್ 8 ರ ಸೋಮವಾರದಿಂದ ಬರುವ ಡಿಸೆಂಬರ್ 8 ರವರೆಗೆ ಹಮ್ಮಿಕೊಳ್ಳಲಾಗಿದೆ.

ದಿನಾಂಕ 01.01.2022 ಕ್ಕೆ 18 ವರ್ಷ ಪೂರ್ಣಗೊಳ್ಳುವವರು, ಸಂಬಂಧಿಸಿದ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಲ್ಲದವರು, ಹೆಸರು ಕೈಬಿಟ್ಟು ಹೋಗಿರುವವರು, ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ತಿದ್ದುಪಡಿ ಮಾಡಿಬೇಕಾದಲ್ಲಿ ಮತ್ತು ಒಂದೇ ವಿಧಾನಸಭಾ ಕ್ಷೇತ್ರದ ಮತದಾರರು ಬೇರೆ ಮತಗಟ್ಟೆಗೆ ವರ್ಗಾಯಿಸಬೇಕಾಗಿದ್ದಲ್ಲಿ ನಿಗದಿಪಡಿಸಿರುವ ನಮೂನೆಗಳಲ್ಲಿ ಅರ್ಜಿಯನ್ನು ಭರ್ತಿ ಮಾಡಿ, ತಮ್ಮ ವ್ಯಾಪ್ತಿಯ ಮತದಾನ ಕೇಂದ್ರದ ಮತಗಟ್ಟೆ ಅಧಿಕಾರಿಗಳಲ್ಲಿ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬಹುದು. ಅದಲ್ಲದೇ Www.nvsp.in ಅಂತರ್ಜಾಲದ ( ಇಂಟರ್ ನೆಟ್ ) ತಂತ್ರಾಂಶದಲ್ಲಿ ಹಾಗೂ Voter help line App ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ಈ ವಿಶೇಷ ಪರಿಷ್ಕರಣೆ ಕಾರ್ಯವನ್ನು ಇನ್ನಷ್ಟು ಸಮರ್ಪವಾಗಿ ಕೈಗೊಂಡು ಪ್ರತಿ ಮತದಾರನ ಹೆಸರನ್ನು ಮತ ಪಟ್ಟಿಯಲ್ಲಿ in ಸೇರ್ಪಡೆ ಗೊಳಿಸುವ ಉದ್ದೇಶದಿಂದ ಅರ್ಜಿಗಳನ್ನು ದಿ . 08.11.2021 ರಿಂದ 8.12.2021 ರವರೆಗೆ ಸ್ವೀಕರಿಸಲಾಗುವುದು.

ಅಲ್ಲದೇ ಈ ಅವಧಿಯಲ್ಲಿ ದಿ. 7.11.2021, ದಿ . 14,11,2021, ದಿ.21.11.2021 ಮತ್ತು 28.11.2021 ಭಾನುವಾರಗಳಂದು ಸಹಾ ವಿಶೇಷ ಕಾರ್ಯಾಚರಣೆ ದಿನಗಳಾಗಿರುವುದರಿಂದ ಈ ದಿನಗಳಂದು ಸಹಾ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದೆಂದು ನೋಂದಣಾಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಉಪ ಆಯುಕ್ತರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!