ಮಟ್ಕಾ ಆಡುತ್ತಿದ್ದ ವ್ಯಕ್ತಿಯ ಬಂಧನ: 47,500 ರೂಪಾಯಿ ವಶಕ್ಕೆ ಪಡೆದ ಡಿ ಸಿ ಆರ್ ಬಿ ಪೊಲೀಸ್ ತಂಡ

ದಾವಣಗೆರೆ: ಮಟ್ಕಾ ಜೂಜಾಟ ಆಡುತ್ತಿದ್ದ ಅಡ್ಡೆಯ ಮೇಲೆ ದಾಳಿನಡೆಸಿರುವ ಪೊಲೀಸರು ₹47,500 ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಕಚೇರಿಯ ಡಿಸಿಆರ್‌ಬಿ ಘಟಕದ ಪೊಲೀಸ್ ಉಪಾಧೀಕ್ಷಕ ಬಿ.ಎಸ್. ಬಸವರಾಜ್ ಮತ್ತು ಸಿಬ್ಬಂದಿಗಳು ನಗರದ ಚಿಗಟೇರಿ ಲೇಔಟ್ ನ ಭಂಟರ ಭವನದ ಹತ್ತಿರ ಮಟ್ಕಾ ಜೂಜಾಟ ಆಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಆತನಿಂದ ನಗದನ್ನು ವಶಕ್ಕೆ ಪಡೆದಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.