ಮೇ.21ಕ್ಕೆ ಉಪನಯನ, ಸಾಮೂಹಿಕ ವಿವಾಹ

ದಾವಣಗೆರೆ: ವಿಶ್ವಕರ್ಮ ಸಮಾಜ ಸಂಘ ಹಾಗೂ ಜಿಲ್ಲೆ ವಿಶ್ವಕರ್ಮ ಸಮಾಜದ ಎಲ್ಲಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ 40ನೇ ವರ್ಷದ ಸಾಮೂಹಿಕ ಉಪನಯನ ಮತ್ತು ವಿವಾಹ ಮಹೋತ್ಸವ ಸಮಾರಂಭವು ಮೇ.21 ರಂದು ನಗರದ ಶ್ರೀ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ಬೆಳಿಗ್ಗೆ 4-12 ರಿಂದ ಬ್ರಾಹ್ಮಿ ಮುಹೂರ್ತದಲ್ಲಿ ಬ್ರಹ್ಮಪದೇಶ ಹಾಗೂ ಬೆಳಿಗ್ಗೆ 8-30 ರಿಂದ 9-12 ರವರೆಗೆ ಸಾಮೂಹಿಕ ವಿವಾಹ ನೆರವೇರಿಸಲಾಗುತ್ತದೆ.
ಉಪನಯನದ ವಟುಗಳು ಮತ್ತು ಸಾಮೂಹಿಕ ವಿವಾಹವಾಗುವ ವಧು-ವರರು ಹೆಸರು ನೋಂದಾಯಿಸಲು ಮತ್ತು ಅಗತ್ಯ ದಾಖಲೆಗಳೊಂದಿಗೆ ಅಧ್ಯಕ್ಷ ಬಸಾಪುರದ ನಾಗೇಂದ್ರಾಚಾರ್ ಮೊ: 9448127640, ವಿ.ಎಂ. ಕೊಟ್ರೇಶಾಚಾರ್ ಮೊ: 9731870799 ಸಂಪರ್ಕಿಸುವಂತೆ ತಿಳಿಸಲಾಗಿದೆ.