ಮೇ-31 2021 ವಿಶ್ವ ತಂಬಾಕು ರಹಿತ ದಿನ, COMMIT TO QUIT “ತಂಬಾಕು ತ್ಯಜಿಸಲು ಬದ್ಧರಾಗಿರಿ”

ದಾವಣಗೆರೆ: ಕಳೆದ ಒಂದುವರೇ ವರ್ಷದಿಂದ ಕೋವಿಡ್ ಬಗ್ಗೆ ಪ್ರತಿ ಹಂತದಲ್ಲಿ ಚರ್ಚೆ ಮಾಡಲಾಗುತ್ತಿದೆ. ಆದರೆ ಇದೇ ಸಂದರ್ಭದಲ್ಲಿ ತಂಬಾಕಿನ ಬಗ್ಗೆ ಚರ್ಚೆ ಮಾಡುವುವದು ಸೂಕ್ತ ಎಕೆಂದರೆ ತಂಬಾಕು ಬಳಕೆ ಮಾಡುವುದರಿಂದ ಕರೋನ ಹರಡುವ ಸಂದರ್ಭಗಳೇ ಹೆಚ್ಚು ಹಾಗೂ ತಂಬಾಕು ಬಳಸುವವರಿಗೆ ಕರೋನ ಬರುವ ಅವಕಾಶಗಳೇ ಹೆಚ್ಚಾಗಿರುತ್ತದೆ ಕಾರಣ ಇವರುಗಳ ಶ್ವಾಸಕೋಶ ಹಲವಾರು ದಿನಗಳಿಂದ ತಂಬಾಕು ಬಳಸಿದ್ದರಿಂದ ದುರ್ಬಲವಾಗಿರುತ್ತದೆ ಇದರಿಂದ ಬೇರೆಯವರಿಗಿಂತ ಇವರು ಹೆಚ್ಚು ಅಪಾಯ ಅನುಭವಿಸುತ್ತಾರೆ ಹಾಗೂ ಸಾವು ಸಂಭವಿಸಬಹುದು, ಅದ್ದರಿಂದ ಲಾಕ್ ಡೌನ್ ಅವಧಿಯನ್ನು ತಂಬಾಕು ತ್ಯೆಜಿಸಲು ವೇದಿಕೆಯನ್ನಾಗಿ ಬಳಸಿಕೊಳ್ಳಲು ಪರಿಸರವೇ ನೀಡಿರುವ ವರದಾನವಾಗಿರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯು 1987ರಿಂದ ವಿಶ್ವ ತಂಬಾಕು ರಹಿತ ಮೇ-31 ದಿನವನ್ನಾಗಿ ಪ್ರತಿ ವರ್ಷ ಒಂದೂಂದು ಘೋಷಣೆ ವಾಕ್ಯಗಳ ಮೂಲಕ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸಲಾಗುತ್ತಿದೆ.

2021 ರ ಘೋಷಣಾ ವಾಕ್ಯ ಎಂದರೆ “ತಂಬಾಕು ತ್ಯಜಿಸಲು ಬದ್ಧರಾಗಿರಿ” (COMMIT TO QUIT) ಮನುಷ್ಯನಿಗೆ ಬದ್ಧೆತೆ ಇದ್ದರೆ ಏನು ಬೇಕಾದರೂ ಮಾಡಬಹುದು ಅದರಂತೆ ವಿಶ್ವ ಆರೋಗ್ಯ ಸಂಸ್ಥೆಯು ಮೇ-31 ವಿಶ್ವ ತಂಬಾಕು ರಹಿತ ದಿನದ ಘೋಷಣೆ ವಾಕ್ಯ “ತಂಬಾಕು ತ್ಯಜಿಸಲು ಬದ್ಧರಾಗಿರಿ” ಎಂಬುದಾಗಿರುತ್ತದೆ.

ತಂಬಾಕು ಬಿಡಲು ದೊಡ್ಡ ಸಮೂಹವೇ ಇದೆ ಆದರೆ ಅವರಿಗೆ ಪೂರಕ ವಾತಾವರಣ ಸಿಕ್ಕಿಲ್ಲ ಆದ್ದರಿಂದ ಈ ವರ್ಷದ ಘೋಷಣಾ ವಾಕ್ಯ ಮತ್ತು 20-21 ವರ್ಷದ ಸಂಖ್ಯೆ ಸೂಕ್ತವಾಗಿದೆ ಆದ್ದರಿಂದ ಇಂದೇ ನಿರ್ದರಿಸಿ ತಂಬಾಕು ಬಿಡಲು ಬದ್ಧತೆಯನ್ನು. ಗಿಮಿಕ್, ಕಥೆ, ಉಪನ್ಯಾಸ ಮತ್ತು ನಿರ್ಲಕ್ಷತನವನ್ನು ಬಿಟ್ಟು ತಮ್ಮ ಕುಟುಂಬದ ರಕ್ಷಣೆ, ತಮಗೆ ಬರುವಂತಹ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳು ಮತ್ತು ಸಾವುಗಳನ್ನು ತಡೆಯಲು ತಂಬಾಕು ಬಳಸುವವರು ಬಿಡುವಂತೆ ಪ್ರಮಾಣ ಮಾಡಲು ಈ ವರ್ಷದ ಘೋಷಣಾ ವಾಕ್ಯ ಸೂಕ್ತವಾಗಿದೆ.

ತಂಬಾಕು ತ್ಯಜಿಸುವುದರಿಂದ ಆಗುವ ಲಾಭಗಳು
1) ಧೂಮಪಾನ ಬಿಟ್ಟಾಗ ನಿಮಗೆ ಆರಾಮವೆನಿಸುತ್ತದೆ ಮತ್ತು ಆಹಾರ ರುಚಿಕರವಾಗುತ್ತದೆ.
2) ತಂಬಾಕು ಬಿಟ್ಟ ಎರಡು ಗಂಟೆಗಳ ನಂತರ ದೇಹದಿಂದ ನಿಕೋಟಿನ್ ಮರೆಯಾಗುತ್ತದೆ.
3) ಹನ್ನೆರಡು ಗಂಟೆಗಳ ನಂತರ ಕಾರ್ಬನ್ ಮೊನಾಕ್ಸೈಡ್ ದೇಹದಿಂದ ಮರೆಯಾಗುತ್ತದೆ ಮತ್ತು ಶ್ವಾಸಕೋಶದ ಚಟುವಟಿಕೆ ಉತ್ತಮಗೊಳ್ಳಲು ಪ್ರಾರಂಭಗೊಳ್ಳುತ್ತದೆ.
4) ಎರಡು ದಿನಗಳ ನಂತರ ಗ್ರಹಿಸುವ ಶಕ್ತಿ ಉತ್ತಮವಾಗುತ್ತದೆ. ದೈಹಿಕ ಚಟುವಟಿಕೆ ಸುಲಭವೆನಿಸುತ್ತದೆ ಹಾಗೂ ಶ್ವಾಸಕೋಶಕ್ಕೆ ಹೆಚ್ಚು ಗಾಳಿ(ಆಮ್ಲಜನಕ) ದೊರೆಯುತ್ತದೆ.
5) ಎರಡು ದಿನಗಳ ನಂತರ ಶ್ವಾಸಕೋಶ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಅಂಗಾಂಗಳಿಗೆ ರಕ್ತ ಚಲನೆ ವೃದ್ದಿಯಾಗುತ್ತದೆ.
6) ಹನ್ನೆರಡು ತಿಂಗಳ ನಂತರ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಅರ್ಧದಷ್ಟು ಕಡಿಮೆಯಾಗುತ್ತದೆ.
7) ಹತ್ತು ವರ್ಷಗಳ ನಂತರ ಶ್ವಾಸಕೋಸದ ಕ್ಯಾನ್ಸರ್‍ನ ಅಪಾಯ ಅರ್ಧದಷ್ಟು ಕಡಿಮೆಯಾಗುತ್ತದೆ.

ತಂಬಾಕು ಬಿಡಲು ಸುಲಭ ದಾರಿಗಳು:
1. ದೃಢ ನಿರ್ಧಾರ (ದೃಢ ಸಂಕಲ್ಪ)
2. ತಂಬಾಕು ಸೇವನೆ ಬಿಡಲು ದಿನಾಂಕ, ಸಮಯ ನಿರ್ಧರಿಸಿ ಅದಕ್ಕೆ ಬದ್ಧರಾಗಿರಿ.
3. ತಂಬಾಕಿಗೆ ಸಂಬಂಧಿಸಿದ ಯಾವುದೇ ಬಗೆಯ ಲೈಟರ್ಸ್, ಬೆಂಕಿಪೊಟ್ಟಣ ಹಾಗೂ ಆ್ಯಶ್‍ಟ್ರೇ ಗಳನ್ನು ಬಿಸಾಡಿರಿ ಅದರ ಅವಶ್ಯಕತೆ ನಿಮಗೆ ಇನ್ನು ಮುಂದೆ ಇರುವುದಿಲ್ಲ.
4. ನೀವು ತಂಬಾಕು ಸೇವನೆ ಬಿಡುತ್ತೀರೆಂದು ಕುಟುಂಬದವರಿಗೆ ತಿಳಿಸಿ ಹಾಗೂ ಅವರ ಸಹಾಯವನ್ನು ಪಡೆಯಿರಿ.
5. ನೀವು ತಂಬಾಕು ಬಳಕೆ ಮಾಡುವ ಸ್ಥಳ, ಸಮಯ, ಸಂದರ್ಭಗಳನ್ನು ಗುರುತಿಸಿ ಅದರಿಂದ ದೂರವಿರಿ.
6. ವೈಧ್ಯರು ಹಾಗೂ ಆಪ್ತಸಮಾಲೋಚಕರ ಸಲಹೆ ಪಡೆಯಿರಿ.

ಕೋವಿಡ್-19 ಸಾಂಕ್ರಾಮಿಕ ರೋಗದ ಅವಧಿಯಲ್ಲಿ ತಂಬಾಕು ಮಾನವನ ದೇಹದ ಪ್ರತಿಯೊಂದು ಅಂಗಾಗಕ್ಕೂ ಖಾಯಿಲೆ ತರುವಂತಹ ಪದಾರ್ಥವಾಗಿದೆ. ತಂಬಾಕು ಭಾರತ ದೇಶದಲ್ಲದಿದ್ದರೂ 1600ರಲ್ಲಿ ಪೋರ್ಚಿಗಿಸರಿಂದ ಪರಿಚಯಿಸಲ್ಪಟ್ಟ ಪದಾರ್ಥ. ಕಳೆದ 460 ವರ್ಷಗಳಿಂದ ಭಾರತದಲ್ಲಿ ತನ್ನ ಕದಂಬ ಬಾಹುಗಳನ್ನು ಚಾಚಿರುವುದನ್ನು ಕಾಣುತ್ತೇವೆ. ಕದಂಬ ಬಾಹುಗಳನ್ನು ನಿಯಂತ್ರಿಸಲು ಭಾರತ ಸರ್ಕಾರ ಕಾನೂನುಗಳನ್ನು ಜಾರಿಗೆ ತಂದಿದೆ. ಕೋಟ್ಪಾ-2003ರ ಕಾನೂನು ಇದ್ದರೂ ಕೂಡ ನಮ್ಮ ದೇಶದಲ್ಲಿ ತಂಬಾಕು ಸೇವನೆ ಸಾರ್ವಜನಿಕ ಜೀವನಕ್ಕೆ ಒಂದು ಗಂಭೀರ ಸವಾಲಾಗಿ ಪರಿಗಣಿಸಿದೆ, ಅಪಾರ ಪ್ರಮಾಣದಲ್ಲಿ ರೋಗ-ರುಜಿನ ಹಾಗೂ ಸಾವು ನೋವುಗಳಿಗೆ ಕಾರಣವಾಗಿದೆ.

ತಂಬಾಕು ಬೆಳೆಯುವ ರೈತರು ಹಾಗೂ ಕಾರ್ಮಿಕರಲ್ಲಿ ಜಿ.ಟಿ.ಎಸ್ (Green Tobacco Sickness) ಎಂಬ ಕಾಯಿಲೆ ನಿಕೋಟಿನ್ ಚರ್ಮದಿಂದ ಹೀರಲ್ಪಟ್ಟು ಸಂಭವಿಸುತ್ತದೆ. ತಂಬಾಕು ಬಳಕೆಯಿಂದ ಉಂಟಾಗುವ ಸಾವುಗಳು ತಡೆಗಟ್ಟಬಹುದಾದ ಸಾವುಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ವರ್ಷ ವಿಶ್ವದಾದ್ಯಂತ 70 ಲಕ್ಷ ಜನರು ತಂಬಾಕಿನಿಂದ ಸಾವನ್ನಪ್ಪುತ್ತಿದ್ದಾರೆ ಅದರಲ್ಲಿ 10 ಲಕ್ಷ ಜನ ಪರೋಕ್ಷ (ಸೆಕೆಂಡ್ ಹ್ಯಾಂಡ್ ಸ್ಮೂಕ್) ಧೂಮಪಾನದಿಂದ ಮರಣ ಹೊಂದುತ್ತಿದ್ದಾರೆ. ತಂಬಾಕುರಹಿತ ವಿಶ್ವವನ್ನಾಗಿಸುವುದು ನಮ್ಮೆಲ್ಲರ ಹೊಣೆಯಾಗಿದೆ. ಪ್ರಪಂಚದಲ್ಲಿ 6ನೇ 1ರಷ್ಟು ತಂಬಾಕು ಸಂಬಂಧಿಸಿದ ಸಾವುಗಳು ಭಾರತದಲ್ಲಿ ಸಂಭವಿಸುತ್ತವೆ. ಆದ್ದರಿಂದ ಭಾರತ ಸರ್ಕಾರವು ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ (ಕೋಟ್ಪಾ) ಕಾಯ್ದೆ-2003 ರಲ್ಲಿ ಜಾರಿಗೆ ತಂದಿರುತ್ತದೆ.

ಲೇಖಕರು:- ದೇವರಾಜ್ ಕೆ ಪಿ, ಸಮಾಜಿಕ ಕಾರ್ಯಕರ್ತ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ಜಿಲ್ಲಾಸ್ಪತ್ರೆ ಆವರಣ, ದಾವಣಗೆರೆ.

Leave a Reply

Your email address will not be published. Required fields are marked *

error: Content is protected !!