ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಬಸವರಾಜ್ ಅವರ ವಿರುದ್ಧ ಪ್ರಕರಣ
ದಾವಣಗೆರೆ: ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಬಸವರಾಜ್ (ಬಸವಂತಪ್ಪ) ವಿರುದ್ಧ ದಾವಣಗೆರೆ ಜಿಲ್ಲಾ ಅಪರಾಧಿಕ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ ಮಾರ್ಚ್ 27ರಂದು ಕಾರಿಗನೂರು ಗ್ರಾಮದ ನಿತಿನ್ ಸುಪ್ಪಲ್ ಎಂಬುವವರು ಠಾಣೆಗೆ ದೂರು ನೀಡಿದ್ದು,
ನನ್ನ ಪತ್ನಿ ಸವಿತಾಬಾಯಿ ಮಲ್ಲೇಶ್ ನಾಯ್ಕ ಅವರ ಭಾವಚಿತ್ರಗಳನ್ನು ಅಶ್ಲೀಲವಾಗಿ ಜೋಡಿಸಿ ಕೆ.ಎಸ್. ಬಸವರಾಜ್ ಹಾಗೂ ಮತ್ತೊಬ್ಬರು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇದರಿಂದಾಗಿ ನನ್ನ ಪತ್ನಿ ಹಾಗೂ ಸಂಬಂಧಿಕರು ಮಾನಿಸಕವಾಗಿ ಹತಾಷರಾಗಿ ಕುಗ್ಗಿರುತ್ತಾರೆ. ಆದ್ದರಿಂದ ನ್ಯಾಯ ಕೊಡಿಸುವಂತೆ ಅವರು ದೂರು ದಾಖಲಿಸಿದ್ದಾರೆ.
ಇಡಿ ಮಹಿಳಾ ಕುಲಕ್ಕೆ ಅವಮಾನ ಮಾಡಿರುವ ಬಸವಂತಪ್ಪ ಅವರಿಗೆ ಚುನಾವಣೆಯಲ್ಲಿ ಮತ ಚಲಾಯಿಸಬಾರದು. ಮಹಿಳಾ ವಿರೋಧಿ ಬಸವಂತಪ್ಪನವರನ್ನು ತಿರಸ್ಕರಿಸಿ ಮಹಿಳಾ ಮಾನ ಉಳಿಸಿ ಎಂಬ ಘೋಷಣೆಯ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿವೆ.