ಎಸ್ಸಿ ಮಹಿಳೆಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ, ಸಾಮಾನ್ಯ ಜನರಿಗೆ ಅವಕಾಶ ನೀಡಲು ಸಾಧ್ಯವಿತ್ತೇ.? ಆನಂದ್ ರಾಜ್ ಹೇಳಿಕೆಗೆ ಕೆ.ಎಲ್.ಹರೀಶ್ ಆಶ್ಚರ್ಯ.!
ದಾವಣಗೆರೆ: ಮೇಯರ್ ಸ್ಥಾನವನ್ನು ಶೋಷಿತವರ್ಗದ ಮಹಿಳೆಗೆ ನೀಡಿದ್ದಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕರಾದ ಎಸ್.ಎ. ರವೀಂದ್ರನಾಥ್ ರವರಿಗೆ ಶೋಷಿತ ವರ್ಗಗಳ ಪರವಾಗಿ ಅಭಿನಂದನೆಗಳು ಎಂದು ಹೇಳಿರುವ ಬಾಡದ ಆನಂದ್ ರಾಜ ರವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್. ಹರೀಶ್ ಬಸಪುರ ತಿಳಿಸಿದ್ದಾರೆ.
ಎಸ್ಸಿ ಮಹಿಳೆಗೆ ಮೀಸಲಾಗಿದ್ದ ಮೇಯರ್ ಸ್ಥಾನಕ್ಕೆ ಶ್ರೀಮತಿ ಜಯಮ್ಮ ಗೋಪಿ ನಾಯ್ಕ ಅವರು ಆಯ್ಕೆಯಾಗಿದ್ದು, ಮೀಸಲಾತಿ ಆಧಾರದ ಮೇಲೆ ಆಯ್ಕೆ ಮಾಡಲಾಗಿದ್ದು, ಆನಂದ್ ರಾಜ ರವರ ಹೇಳಿಕೆ ಸಾಮಾನ್ಯ ಮೀಸಲಾತಿ ಇದ್ದಾಗ ಶೋಷಿತ ವರ್ಗದವರಿಗೆ ಅಧಿಕಾರ ನೀಡಿದ್ದಾರೆ ಎನ್ನುವ ರೀತಿ ಬಿಂಬಿಸಲು ಹೊರಟಿರುವುದು ಹಾಸ್ಯಾಸ್ಪದ ಎನ್ನಿಸುತ್ತದೆ, ಇವರ ಹೇಳಿಕೆ ಕೇವಲ ಶಾಸಕ-ಸಂಸದರನ್ನು ಸಂತೋಷಪಡಿಸಲು ನೀಡುವ ಹೇಳಿಕೆಗಳ ರೀತಿ ಇದ್ದು, ಇದರ ಬಗ್ಗೆ ಸ್ವತಹ ಅವರೇ ಒಮ್ಮೆ ಯೋಚಿಸಿದರೆ ಅರ್ಥವಾದೀತು.