Mayor veeresh: ದಾವಣಗೆರೆ ಮೇಯರ್ ಹಾಗೂ ಆಯುಕ್ತರಿಗೆ ಮೋದಿ ಬುಲಾವ್.! ಯೋಜನೆಗಳ ಚಾಲನೆಗೆ ಸಾಕ್ಷಿಯಾಗಲಿದ್ದಾರೆ ಎಸ್ ಟಿ ವೀರೇಶ್

ದಾವಣಗೆರೆ: ನವದೆಹಲಿಯ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಅ. 1 ರಂದು ನಡೆಯುವ ಸ್ವಚ್ಛ ಭಾರತ್ 2.0 ಹಾಗೂ ಅಮೃತ್ ಯೋಜನೆ 2.0 ಕುರಿತ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ದಾವಣಗೆರೆ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಮತ್ತು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ರಾಜ್ಯದ ಪಾಲಿಕೆ ಮೇಯರ್ ಗಳಿಗೆ ಮತ್ತು ನಗರಸಭಾಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಪ್ರಧಾನಿ ಕಚೇರಿಯಿಂದ ಆಹ್ವಾನ ಬಂದಿದೆ.

ಆದ್ದರಿಂದ, ಪಾಲಿಕೆಯ ಮೇಯರ್ ಎಸ್. ಟಿ. ವೀರೇಶ್ ಅವರು ನವದೆಹಲಿಗೆ ಪ್ರಯಾಣ ಬೆಳೆಸಿದ್ದು, ನಾಳೆಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಪ್ರಧಾನಿಯವರು ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಬುಲಾವ್ ಬಂದಿರುವುದು ಸಹಜವಾಗಿ ಬಿಜೆಪಿ ಮುಖಂಡರಿಗೆ ಮತ್ತು ವೀರೇಶ್ ಅವರ ಅಭಿಮಾನಿಗಳಲ್ಲಿ ಸಂತಸ ಇಮ್ಮಡಿಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ 2.0 ಹಾಗೂ ಅಮೃತ್ ಯೋಜನೆ 2.0 ಕುರಿತ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮೈಸೂರು, ಶಿವಮೊಗ್ಗ ಪಾಲಿಕೆಯ ಮೇಯರ್ ಗಳು ಸೇರಿ ನಗರಸಭೆ, ಸ್ಥಳೀಯ ಸಂಸ್ಥೆಗಳಲ್ಲಿನ ಅಧ್ಯಕ್ಷರು, ಆಯುಕ್ತರು ಸೇರಿದಂತೆ ಒಟ್ಟು ರಾಜ್ಯದ 13 ಜನರಿಗೆ ಆಹ್ವಾನಿಸಲಾಗಿದೆ.
