ಮೇಯರ್ ವೀರೇಶ್ ಗೆ ಸಾರ್ವಜನಿಕರಿಂದ ಸಮಸ್ಯೆಗಳ ಸರಮಾಲೆ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರರಾದ ಎಸ್ ಟಿ.ವೀರೇಶ್ ರವರು ನಗರದ ಹಲವೆಡೆ ಸಿಟಿ ರೌಂಡ್ಸ್ ಹಾಕಿದರು ಸಾರ್ವಜನಿಕರು ಸಮಸ್ಯೆಗಳ ಸರಮಾಲೆಯನ್ನ ಹರಿಸಿದರು,ಚೌಕಿಪೇಟೆ ಪೇಟೆಯಲ್ಲಿ ವರ್ತಕರು ಅಲ್ಲಿ ಹಮಾಲರು ಅಲ್ಲಿನ ಬೋರವಲ್ ಸಮಸ್ಯೆ ಬಗ್ಗೆ ಹೇಳಿದಾಗ ಸ್ಥಳದಲ್ಲಿ ಅಧಿಕಾರಿಗಳಿಗೆ ಕರೆ ಬೇಗ ಬೋರ್ ವೆಲ್ ಕೆಲಸ ಮುಗಿಸಿಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು,
ಎಂ.ಜಿ.ರೋಡ್ ನ ಕಸದ ಸಮಸ್ಯೆ ಬಗ್ಗೆ ಎಲ್ಲಿಂದ ಅಲ್ಲಿ ಕಸ ಹಾಕುವುದನ್ನು ವಿಕ್ಷೀಸಿ ಮತ್ತೆ ಇಲ್ಲಿ ಕಸ ಬೀಳದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎಲ್ ಡಿ.ಗೋಣೇಪ್ಪ,ಪಾಲಿಕೆ ಸದಸ್ಯರಾದ ಆರ್ ಎಲ್.ಶಿವಪ್ರಕಾಶ್, ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್, ಆರೋಗ್ಯ ಅಧಿಕಾರಿಗಳಾದ ಸಂತೋಷ, ಸುದೀರ್, ಸಿನೀಯರ್ ಹೆಲ್ತ್ ಇನ್ಸ್ಪೆಕ್ಟರ್ ಪ್ರಕಾಶ್,ಸ್ಮಾರ್ಟ್ ಇಂಜಿನಿಯರ್ ಪ್ರೀತಂ,ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು