MES: ಎಂ­.­­ಇ­.­ಎ­ಸ್­. ಮತ್ತು ಶಿವಸೇನೆಯನ್ನು ಕರ್ನಾಟಕದಿಂದ ನಿಷೇಧಿಸಲು ಒತ್ತಾಯಿಸಿ ವಿ.ಕ.ರ.ವೇಯಿಂದ ಪ್ರತಿಭಟನೆ

3

ದಾವಣಗೆರೆ: (MES) ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಅಂಬೇಡ್ಕರ್ ಸರ್ಕಲ್‌ನಿಂದ ಎ.ಸಿ. ಕಚೇರಿವರೆಗೂ ಪ್ರತಿಭಟನೆಯ ಮೂಲಕ ಮನವಿ ಸಲ್ಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆ­ಳ­ಗಾ­ವಿ­ಯ­ಲ್ಲಿ ಇತ್ತೀಚೆಗೆ ಕಂಡಕ್ಟರ್ ಮೇಲೆ ನಡೆಸಿರುವ ಮಾರಣಾಂತಿಕ ಹಲ್ಲೆ ಹಾಗೂ ಸುಳ್ಳು ಫೋಕ್ಸೋ ಕೇಸ್ ದಾಖಲಿಸಿದ್ದು, ಬಲವಂತವಾಗಿ ಹೆಣ್ಣು ಮಗಳಿಂದ ಸುಳ್ಳು ಕೇಸ್ ದಾಖಲಿಸಿ ನಂತರ ವಾಪಾಸ್ ಪಡೆದಿರುತ್ತಾರೆ.

ಕನ್ನಡ ಮಾತಾಡಿ ಎಂದು ಕಂಡಕ್ಟರ್ ಹೇಳಿದ್ದಕ್ಕೆ ತಿರುಗಿ ಕಂಡಕ್ಟರ್‌ನನ್ನೇ ಮರಾಠಿ ಮಾತಾಡುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಲ್ಲದೇ ಕನ್ನಡಿಗರಿಗೆ ಅವಮಾನ ಮಾಡುತ್ತಿದ್ದರು ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಯುವಘಟಕದ ಜಿಲ್ಲಾಧ್ಯಕ್ಷ ಸಿದ್ದೇಶ್ ಎಸ್. ಆಕ್ರೋಶ ವ್ಯಕ್ತಪಡಿಸಿದರು

ಎಂ­.­ಇ­.­ಎ­ಸ್. ಸಂ­ಘ­ಟ­ನೆ­ಯ ಕೆ­ಲ ಮು­ಖ­­ಂಡರುಗಳು ಯಾ­ವು­ದಾ­ದ­ರೊ­ಂ­ದು ರಿ­­ತಿ­ಯ­ಲ್ಲಿ ಪು­ಂ­ಡಾ­ಟಿ­ಕೆ ಮತ್ತು ಉದ್ಧಟತನವನ್ನು ಪ್ರತೀ ಬಾರಿಯೂ ಮಾಡುತ್ತಲೇ ಬಂದಿದ್ದಾರೆ. ಇಂತಹ ಚ­ಟು­ವ­ಟಿ­ಕೆ­ಯ­ನ್ನು ಸತತವಾಗಿ ಮಾ­ಡು­ತ್ತಿ­ರುವ ಇಂತಹ ಪುಂಡರು ಓಟಿಗೋಸ್ಕರ ಯಾವ ರಾಜಕೀಯ ಧುರೀಣರೂ ಕೂಡ ಮಾತನಾಡದೇ ಇರುವುದು ವಿಪರ್ಯಾಸ. ಈ ಬಗ್ಗೆ ನಮಗೆ ತುಂಬಾ ವಿಷಾದವೆನಿಸುತ್ತಿದೆ. ದಶಕಗಳಿಂದಲೂ ಎಂಇಎಸ್ ಮತ್ತು ಶಿವಸೇನೆ ಬೆಳಗಾವಿ ಗಡಿಭಾಗದಲ್ಲಿ ಮರಾಠಿಗರು ಮತ್ತು ಕನ್ನಡಿಗರ ಮಧ್ಯೆ ಭಾಷಾ ಸಾಮರಸ್ಯವನ್ನು ಹದಗೆಡಿಸಿ ದ್ವೇಷದ ವಾತಾವರಣ ಮೂಡಿಸುತ್ತಿದ್ದಾರೆ. ಇದರಿಂದ ತಮ್ಮ ರಾಜಕೀಯ ಲಾಭ ಪಡೆದುಕೊಳ್ಳಲು ಸದಾ ಪ್ರಯತ್ನಿಸುತ್ತಲೇ ಇರುತ್ತಾರೆ.

ಈ ಕೃ­ತ್ಯ­ದಿ­ಂ­ದ ಕ­ರ್ನಾಟಕದ ಎಲ್ಲಾ ಕ­ನ್ನ­ಡಿ­ಗ­ರಿ­ಗೆ ಅವ­ಮಾ­ನ­ವಾ­ಗಿ­ರು­ತ್ತ­ದೆ­. ಅ­ಲ್ಲ­ದೇ ಮ­ಹಾ­ರಾ­ಷ್ಟ­ದ­ ಕೊಲ್ಲಾಪುರದಲ್ಲಿ ಎಂ­.­­ಇ­­.­ಎ­ಸ್­. ಹಾ­ಗೂ ಶಿ­ವ­ಸೇ­ನೆ­ಯ ಸಂ­ಘ­ಟ­ನೆ­ಗ­ಳು ಸಂ­ಗೊ­ಳ್ಳಿ ರಾ­ಯ­ಣ್ಣ ­ಪ್ರ­ತಿ­ಮೆ­ಯ­ನ್ನು ­ಈ ಹಿಂದೆ ವಿ­ಘ್ನ­ಗೊ­ಳಿ­ಸಿ­ರು­ತ್ತಾ­ರೆ. ­ಇವ­ರ ಈ ­ದು­ಷ್ಟ್ಕೃ­ತ್ಯ­ಗ­ಳಿ­ಂ­ದ ಬೇ­ಸ­ತ್ತ ಕನ್ನಡಪರ ಸಂಘಟನೆಗಳು ರೊ­ಚ್ಚಿ­ಗೆ­ದ್ದು ­ಇವ­ರ ವಿ­ರು­ದ್ಧ ­ಸೂ­ಕ್ತ ಕಾ­ನೂ­ನು­ ಕ್ರ­ಮ ಕೈ­ಗೊ­ಂ­ಡು ಇವ­ರ­ನ್ನು ಕ­ರ್ನಾಟಕ­ದಿ­ಂ­ದಲೇ ಗ­ಡಿ­ಪಾ­ರು ಮಾ­ಡ­ಬೇ­­ಕು ಎಂ­ದು ಸ­ರ್ಕಾರವ­ನ್ನು ಈಗಾಗಲೇ ಒ­ತ್ತಾ­­ಯಿ­ಸಿ­ ಮು­ಖ್ಯ­ಮ­ಂ­ತ್ರಿ­ಗ­ಳಿ­ಗೆ ಮನ­ವಿ ಸ­ಲ್ಲಿ­ಸಿ­ದ್ದರು.

ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ನಾಡದ್ರೋಹಿ ಸಂಘಟನೆಗಳಾದ ಎಂ.ಇ.ಎಸ್. ಹಾಗೂ ಶಿವಸೇನೆಯನ್ನು ರಾಜ್ಯದಿಂದ ನಿಷೇಧ ಮಾಡಬೇಕೆಂದು ಆಗ್ರಹಿಸುತ್ತೇವೆ ಎಂದರು.
ಒಂ­ದು­ ವೇ­ಳೆ ಎಂ­.­ಇ­.­ಎ­ಸ್­. ನಾ­ಡ­ದ್ರೋ­ಹಿ ಸಂ­­ಘ­ಟ­ನೆ­ಯನ್ನು ಕೂ­ಡ­ಲೇ ನಿ­ಷೇ­ಧ­ ಮಾಡದೇ ಇ­ದ್ದ­ಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಉ­ಗ್ರ­ ಹೋ­ರಾ­ಟ ಹ­ಮ್ಮಿ­ಕೊ­ಳ್ಳ­ಲಾ­ಗು­ವು­ದು ಎಂ­ದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಎಂ. ರವಿ, ಸಂತೋಷ್ ದೊಡ್ಮನಿ, ದಯಾನಂದ್ ಬಿ.ಇ., ಮಂಜುನಾಥ್ ಟಿ., ಶಹಬಾಜ್, ಜಬೀವು, ನವೀನ್, ಕೆ.ಹೆಚ್. ಮಹಬೂಬ್, ಬಾಬುರಾವ್, ಗಿರೀಶ್ ನವಲೆ, ಫಾರೂಕ್ ಹಟೆಲಿ, ಶಾರೂಖ್ ಅಶ್ಮಿ, ಹನುಮಂತಪ್ಪ, ಗದಿಗೆಪ್ಪ ವಾಸನದ, ಶಾರೂಕ್ ಖಾನ್, ಮಂಜುನಾಥ ಶೆಟ್ಟಿ, ಇಮ್ರಾನ್, ಮಂಜುನಾಥ್ ಬಿ.ವಿ. ಸೇರಿದಂತೆ ಇನ್ನಿತರರು ಒತ್ತಾಯಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!