ಮುತಾಲಿಕ್ ಜೀ ನೀವು ನೀಡಿದ ಹತ್ತು ದಿನದ ಕಾಲಾವಧಿ ಮುಗಿಯಿತು.! ಪ್ರತಿಭಟನೆ ಯಾವಾಗ ? – ಕೆ.ಎಲ್.ಹರೀಶ್ ಬಸಾಪುರ

ದಾವಣಗೆರೆ :ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ರವರು ಇದೇ ತಿಂಗಳು 4 ನೇ ತಾರೀಖು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದೇವರಮನೆ ಶಿವಕುಮಾರ್ ಅವರು 9 ಮನೆಯನ್ನು ಹೊಂದಿದ್ದರು ಸಹ ತಮ್ಮ ಹಾಗೂ ತಮ್ಮ ಸಹೋದರರ ಹೆಸರಿನಲ್ಲಿ 3 ನಿವೇಶನಗಳನ್ನು ಸರ್ಕಾರದಿಂದ ಪಡೆದಿದ್ದಾರೆ. ದೇವರಮನೆ ಶಿವಕುಮಾರ್ ರವರಿಗೆ ಕಿಂಚಿತ್ತಾದರೂ ಮರ್ಯಾದೆ ಇದ್ದರೆ ಹತ್ತು ದಿನಗಳ ಒಳಗಾಗಿ ದೂಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ದೂಡಾ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದರು.
ಇನ್ನು ಮುಂದುವರಿದು, ದೇವರಮನೆ ಶಿವಕುಮಾರ್ ಅವರನ್ನು ದೂಡಾ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ತಾನು ತಿನ್ನುವುದಿಲ್ಲ , ತಿನ್ನುವವರಿಗೂ ಬಿಡುವುದಿಲ್ಲ ಎಂದು ಹೇಳುವ ಮೋದಿ ಹೆಸರಿಗೆ ಬಿಜೆಪಿ ನಾಯಕರು ಅಪಮಾನ ಮಾಡುತ್ತಿದ್ದಾರೆಂದು ಕಿಡಿಕಾರಿದ್ದರು.
ಈಗ ಮುತಾಲಿಕ್ ರವರು ನೀಡಿದ್ದ 10 ದಿನಗಳು ಮುಗಿದಿವೆ ಪ್ರಮೋದ್ ಮುತಾಲಿಕ್ ಅವರು ದಾಖಲೆ ಸಮೇತ ಆರೋಪ ಮಾಡಿದ್ದರೆ, ತಾವೇ ಹೇಳಿದಂತೆ ಪ್ರತಿಭಟನೆ ನಡೆಸಬೇಕು ಅಥವ ಮಾಹಿತಿ ಕೊರತೆಯಿಂದ ಸುಳ್ಳು ಆರೋಪ ಮಾಡಿದ್ದಾರೆ, ಪ್ರಧಾನಿ ಮೋದಿ ಹೇಳಿದರು ಬಳಸಿದ್ದಕ್ಕಾಗಿ ಮತ್ತು ದೂಡಾ ಅಧ್ಯಕ್ಷರು ವಿರುದ್ಧ ಸುಳ್ಳು ಆಪಾದನೆ ಮಾಡಿದ್ದಕ್ಕಾಗಿ ಕ್ಷಮೆ ಯಾಚಿಸಬೇಕಾಗಿ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ
ಈಗ ತಾವೇ ನೀಡಿದ್ದ ಹತ್ತು ದಿನಗಳ ಕಾಲಮಿತಿ ಮುಗಿದಿದೆ, ಪ್ರಮೋದ್ ಮುತಾಲಿಕ್ ರವರು ಪ್ರತಿಭಟನೆ ನಡೆಸುವರೋ ಅಥವಾ ಕ್ಷಮೆ ಯಾಚಿಸುವರೋ ನೋಡಬೇಕು.
ಮುತಾಲಿಕ್ ರವರ ನಿರ್ಧಾರದ ಮೇಲೆ ಪ್ರತಿಭಟನೆ ನಿಲ್ಲಲು “ಬೇರೆ ರೀತಿಯ ಹೊಂದಾಣಿಕೆ ಆಗಿದೆ” ಎನ್ನುವ ಸಾರ್ವಜನಿಕರ ಅಭಿಪ್ರಾಯಕ್ಕೆ ಉತ್ತರ ದೊರೆಯಲಿದೆ.