ವಿಧಾನ ಪರಿಷತ್ ಚುನಾವಣೆ : ಶೇ. 99.82 ಮತದಾನ ದಾಖಲು

MLC

ದಾವಣಗೆರೆ: ಚಿತ್ರದುರ್ಗ ಹಾಗೂ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯ ಸ್ಥಾನಗಳಿಗಾಗಿ ಶುಕ್ರವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ದಾವಣಗೆರೆ ಜಿಲ್ಲೆಯ ಮೂರು ತಾಲ್ಲೂಕುಗಳಿಂದ ಶೇ. 99.80 ರಷ್ಟು ಹಾಗೂ ಶಿವಮೊಗ್ಗ ಕ್ಷೇತ್ರಕ್ಕೆ ಜಿಲ್ಲೆಯ ಮೂರು ತಾಲ್ಲೂಕುಗಳಿಂದ ಶೇ. 99.82 ರಷ್ಟು ಮತದಾನವಾಗಿದೆ.

ಚಿತ್ರದುರ್ಗ ಹಾಗೂ ಶಿವಮೊಗ್ಗ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯ ಸ್ಥಾನಗಳಿಗಾಗಿ ಶುಕ್ರವಾರ ಬೆಳಿಗ್ಗೆ 08 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಉತ್ತಮ ಮತದಾನ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2780 ಮತದಾರರ ಪೈಕಿ 1322 ಪುರುಷ, 1453 ಮಹಿಳೆ ಸೇರಿದಂತೆ ಒಟ್ಟು 2775 ಜನ ಮತದಾನ ಮಾಡಿದ್ದು, ಸರಾಸರಿ ಶೇ. 99.82 ಮತದಾನ ದಾಖಲಾಗಿದೆ.

ಚಿತ್ರದುರ್ಗ ಕ್ಷೇತ್ರ ವ್ಯಾಪ್ತಿಗೆ ಬರುವ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ 386 ಮತದಾರರ ಪೈಕಿ 185 ಪುರುಷ, 201 ಮಹಿಳೆಯರು ಸೇರಿದಂತೆ ಎಲ್ಲ 386 ಮತದಾರರು ಮತ ಚಲಾಯಿಸಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ ಒಟ್ಟು 685 ಮತದಾರರ ಪೈಕಿ 332 ಪುರುಷ, 351 ಮಹಿಳೆ ಸೇರಿದಂತೆ ಒಟ್ಟು 681 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಗಳೂರು ತಾಲ್ಲೂಕಿನಲ್ಲಿ ಒಟ್ಟು 417 ಮತದಾರರ ಪೈಕಿ 195 ಪುರುಷ, 221 ಮಹಿಳೆ ಸೇರಿದಂತೆ ಒಟ್ಟು 416 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಒಟ್ಟಾರೆ 1488 ಮತದಾರರ ಪೈಕಿ 412 ಪುರುಷ, 773 ಮಹಿಳೆ ಸೇರಿದಂತೆ ಒಟು 1485 ಮತಗಳು ಚಲಾವಣೆಗೊಂಡಿವೆ.

ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಗೆ ಬರುವ ಚನ್ನಗಿರಿ ತಾಲ್ಲೂಕಿನಲ್ಲಿ ಒಟ್ಟು 759 ಮತದಾರರ ಪೈಕಿ 362 ಪುರುಷ, 396 ಮಹಿಳೆ ಸೇರಿದಂತೆ ಒಟ್ಟು 758 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಹೊನ್ನಾಳಿ ತಾಲ್ಲೂಕಿನಲ್ಲಿ ಒಟ್ಟು 343 ಮತದಾರರ ಪೈಕಿ 162 ಪುರುಷ, 182 ಮಹಿಳೆ ಸೇರಿದಂತೆ ಒಟ್ಟು 342 ಮತದಾರರು ಮತ ಚಲಾಯಿಸಿದ್ದಾರೆ. ನ್ಯಾಮತಿ ತಾಲ್ಲೂಕಿನಲ್ಲಿ 190 ಮತದಾರರ ಪೈಕಿ 86 ಪುರುಷ, 104 ಮಹಿಳೆಯರು ಸೇರಿದಂತೆ ಎಲ್ಲ 190 ಮತದಾರರು ಮತ ಚಲಾಯಿಸಿದ್ದಾರೆ. ಒಟ್ಟಾರೆ 1292 ಮತದಾರರ ಪೈಕಿ 610 ಪುರುಷ, 680 ಮಹಿಳೆ ಸೇರಿದಂತೆ ಒಟು 1290 ಮತಗಳು ಚಲಾವಣೆಗೊಂಡಿವೆ.

Leave a Reply

Your email address will not be published. Required fields are marked *

error: Content is protected !!