Mines: ಗಣಿ ಇಲಾಖೆಯಲ್ಲಿ ನಿಯಮ ಉಲ್ಲಂಘನೆ, 36 ಅಂಶಗಳ ನ್ಯೂನ್ಯತೆ, 18 ಅಧಿಕಾರಿಗಳ ವಿರುದ್ದ ಉಪ ಲೋಕಾಯುಕ್ತ ರಿಂದ ಸ್ವಯಂ ದೂರು

ದಾವಣಗೆರೆ: (Mines & Geology) ಕರ್ನಾಟಕ ಉಪಲೋಕಾಯುಕ್ತರು ಹಾಗೂ ನ್ಯಾಯಮೂರ್ತಿಗಳಾದ ಬಿ.ವೀರಪ್ಪನವರು ಏಪ್ರಿಲ್ 22 ರಿಂದ 26 ರ ವರೆಗೆ ದಾವಣಗೆರೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ವೇಳೆ ಆಡಳಿತದಲ್ಲಿ ನ್ಯೂನ್ಯತೆ ಕಂಡು ಬಂದು ಪ್ರಕರಣಗಳನ್ನು ಪತ್ತೆಹಚ್ಚಿ 13 ವಿವಿಧ ಇಲಾಖೆ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಅನುಪಾಲನಾ ವರದಿ ನೀಡಲು ಸೂಚನೆ ನೀಡಲಾಗಿದೆ.
ಉಪಲೋಕಾಯುಕ್ತರು ಮತ್ತು ಲೋಕಾಯುಕ್ತ ಅಪರ ನಿಬಂಧಕರು, ಉಪನಿಬಂಧಕರು ಸೇರಿದಂತೆ ಲೋಕಾಯುಕ್ತ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರವಾಸದ ವೇಳೆ ಭಾಗಿಯಾಗಿದ್ದರು. ಕಲ್ಲುಗಣಿಗಾರಿಕೆ ಮಾಡುತ್ತಿರುವ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಲೋಪದೋಷಗಳು ಕಂಡು ಬಂದ ಇಲಾಖೆ ಅಧಿಕಾರಿಗಳ ಮೇಲೆ Compt/Uplok/BD/2817/2025/DRE-1 ರಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ.
ಗಣಿ ಮತ್ತು ಭೂ ವಿಜ್ಞಾನ; ಬುಳ್ಳಾಪುರ, ಪಂಜೇನಹಳ್ಳಿ, ಹೆಬ್ಬಾಳ,ಆಲೂರು ಸರ್ವೆ ನಂಬರ್‍ಗಳಲ್ಲಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದು ಬಫರ್ ಝೋನ್, ಗಡಿನಾಶ, ಮಿನರಲ್ ಸಾಗಣಿ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ 36 ಅಂಶಗಳ ನ್ಯೂನ್ಯತೆಗಳನ್ನು ಉಲ್ಲೇಖಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಬೆಸ್ಕಾಂ, ಸಾರಿಗೆ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ 18 ಅಧಿಕಾರಿಗಳ ಮೇಲೆ ದೂರು ದಾಖಲಿಸಲಾಗಿದೆ.
36 ನ್ಯೂನತೆಗಳ ವಿವರ:
1) ಕುರ್ಕಿ ಬುಳ್ಳಾಪುರ ಗ್ರಾಮದ ಕಲ್ಲು ಕ್ವಾರಿಗಳನ್ನು ಪರಿಶೀಲಿಸಿದಾಗ, ಸರ್ವೆ ನಂ.56 ಪಟ್ಟಾ ಜಮೀನಾಗಿದ್ದು, ಒಟ್ಟು 07 ಎಕರೆ ಪ್ರದೇಶದಲ್ಲಿ ಕಲ್ಲು ಕ್ವಾರಿ ನಡೆಸುತ್ತಿದ್ದು, ಅಂದಾಜು 50-60 ವರ್ಷಗಳಿಂದ ಕಲ್ಲು ಕ್ವಾರಿ ನಡೆಯುತ್ತಿರುವ ಬಗ್ಗೆ ಹಾಗೂ ಸದರಿ ಕಲ್ಲು ಕ್ವಾರಿಯನ್ನು ಹಾಲಿ ಶ್ರೀ ಸಿದ್ದೇಶ, ಹಿರೇತೋಗಲೆರಿ ಗ್ರಾಮದವರು ನಡೆಸುತ್ತಿರುವುದಾಗಿ ತಿಳಿದುಬಂದಿರುತ್ತದೆ.
2) “ವಿಶ್ವಬಂದು ಸ್ಟೋನ್ ಕ್ರಷರ್” ನವರಿಗೆ ಅಕ್ರಮ ಗಣಿಗಾರಿಕೆ ಮಾಡಬಾರದಾಗಿ ನೋಟೀಸ್ ನೀಡಿದ್ದರೂ ಸಹ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವುದು ತಿಳಿದುಬಂದಿರುತ್ತದೆ. ಕ್ರಮ ಕೈಗೊಂಡು ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಶ್ರೀಮತಿ ರಶ್ಮಿ ಸಿ.ಆರ್, ಹಿರಿಯ ಭೂ ವಿಜ್ಞಾನಿ,ದಾವಣಗೆರೆ ಇವರಿಗೆ ಸೂಚಿಸಲಾಯಿತು.
3) ಸದರಿ ಕ್ವಾರಿಯಲ್ಲಿ ನಿಯಮದಂತೆ 7.5 ಮೀಟರ್ ಬಫರ್
ಜೋನ್ ಬಿಟ್ಟಿರುವುದಿಲ್ಲ, ಸದರಿ ಕ್ವಾರಿ ಸ್ಥಳದಲ್ಲಿ ಗುರುತು ಕಲ್ಲು ಮೀರಿ ಹಾಗೂ ಗಣಿಗಾರಿಕೆ ನಿಯಮಗಳನ್ನು ಉಲ್ಲಂಘಿಸಿ ರ್ಯಾಂಪ್ ಮಾಡಿರುವುದು ಕಂಡುಬಂದಿರುತ್ತದೆ.
4) ಸದರಿ ಸ್ಥಳದಲ್ಲಿ ಗಣಿಗಾರಿಕೆ ನಿಯಮಗಳನ್ನು ಮೀರಿ ಷರತ್ತುಗಳಿಗೆ ವಿರುದ್ಧವಾಗಿ 100 ಅಡಿಗೂ ಹೆಚ್ಚು ಆಳಕ್ಕೆ ಕಲ್ಲು ಕ್ವಾರಿಯನ್ನು ಮಾಡಿರುವುದು ಪರಿಶೀಲನೆ ವೇಳೆಗೆ ಕಂಡು ಬಂದಿರುತ್ತದೆ.
5) ಒಂದು ವರ್ಷದಲ್ಲಿ ನಿಗದಿಪಡಿಸಿದಕ್ಕಿಂತ ಹೆಚ್ಚಾಗಿ, ನಿಯಮಮೀರಿ ಕಲ್ಲು ಗಣಿಗಾರಿಕೆ ಮಾಡಿರುವ ಬಗ್ಗೆ ಹಾಗೂ ನಿಯಮ ಮೀರಿದ ವಾಹನಗಳನ್ನು ಸೀಜ್ ಮಾಡಿರುವ ಬಗ್ಗೆ ಮತ್ತು ನೋಟಿಸ್‌ಗಳನ್ನು ನೀಡಿರುವ ಬಗ್ಗೆ ಮಾಹಿತಿಯನ್ನು ಒದಗಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದಾಗ ಸಮರ್ಪಕವಾದ ಹಾಗೂ ಯಾವುದೇ ದಾಖಲಾತಿಗಳನ್ನು ಒದಗಿಸಿರುವುದಿಲ್ಲ.
6 ಕಲ್ಲು ಕ್ವಾರಿಯ ಸುತ್ತಲೂ ಜನ/ಜಾನುವಾರು ಸಂರಕ್ಷಣೆ, ಭದ್ರತೆಗೆ ಸಂಬಂಧಿಸಿದಂತೆ ಫೆನ್ಸಿಂಗ್ ಹಾಗೂ ಗೇಟ್ ಹಾಕದೇ ಭದ್ರತೆ ವಿಚಾರದಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಪರಿಶೀಲನೆ ನಡೆಸದೇ ಇರುವುದು ಕಂಡು ಬಂದಿರುತ್ತದೆ.
8 ಗಣಿಗಾರಿಕೆ ಪ್ರದೇಶದ ಗಡಿ ಗುರುತಿಸಿದ ನಂತರ ವ್ಯಾಪ್ತಿಯನ್ನು ಮೀರಿ ಗಣಿಗಾರಿಕೆ ನಡೆಸುವಂತಿಲ್ಲ. ಆದರೆ, ಅಕ್ರಮವಾಗಿ ನಿಯಮ ಮೀರಿ ಕಲ್ಲು ಕ್ವಾರಿ ಮಾಲೀಕರು ಬಫರ್ ಜೋನ್ ಬಿಡದೇ ಕಲ್ಲು ಕ್ವಾರಿ ನಡೆಸುತ್ತಿದ್ದರೂ ಸಹ, ಕ್ರಮ ವಹಿಸಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಕರ್ತವ್ಯ ಲೋಪ ಎಸಗಿರುವುದು ಕಂಡು ಬರುತ್ತದೆ.
8) ಕಲ್ಲು ಕ್ವಾರಿಗೆ ಸಂಬಂಧಿಸಿದಂತೆ ಬಫರ್‌ಜೋನ್, ಸೈಟ್ ಪ್ಲಾನ್, ನಕ್ಷೆ, ಸರ್ವೇ ನಂಬರ್, ಖಾತೆದಾರರ ಮಾಹಿತಿ ಹಾಗೂ
ಭೋಗ್ಯದ ಷರತ್ತುಗಳ ಬಗ್ಗೆ ಮಾಹಿತಿ ಹಾಗೂ ಪೂರಕ
ದಾಖಲಾತಿಗಳನ್ನು ನೀಡುವಂತೆ ತಿಳಿಸಿದಾಗ, ಶ್ರೀಮತಿ ರಶ್ಮಿ
ಸಿ.ಆರ್, ಹಿರಿಯ ಭೂ ವಿಜ್ಞಾನಿ ರವರು ಯಾವುದೇ ಮಾಹಿತಿ
ಹಾಗೂ ಪೂರಕ ದಾಖಲಾತಿಗಳನ್ನು ಒದಗಿಸಿರುವುದಿಲ್ಲ.
9) ಸದರಿ ಕಲ್ಲು ಗಣಿಗಾರಿಕೆ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ, ಶ್ರೀ ಹಾಲೇಶಪ್ಪ ಬಿನ್ ಷಣ್ಮುಖಪ್ಪ, ಶ್ರೀ ನಂದೆಪ್ಪ ಬಿನ್ ಗುರುಶಾಂತಪ್ಪ ಹಾಗೂ ಶ್ರೀ ಅಜ್ಜಯ್ಯ ಬಿನ್ ರೇವಣಸಿದ್ದಪ್ಪ ರವರು ಕಲ್ಲು ಗಣಿಗಾರಿಕೆ ಬ್ಲಾಸ್ಟ್‌ನಿಂದಾಗಿ ಅತೀ ಶಬ್ದವಾಗುತ್ತಿದೆ ಹಾಗೂ ಕಲ್ಲುಗಳು ಸಿಡಿಯುತ್ತಿರುವ ಬಗ್ಗೆ ಆಪಾದಿಸಿರುತ್ತಾರೆ. ಅದೇರೀತಿ, ಶ್ರೀ ರಾಜಶೇಖರ ಬಿನ್ ರೇವಣಸಿದ್ದಪ್ಪ ಇವರು ತಮ್ಮ ಸುತ್ತಮುತ್ತಲಿನ ಅಡಿಕೆ ತೋಟಗಳಿಗೆ ಕಲ್ಲು ಗಣಿಗಾರಿಕೆಯಿಂದಾಗಿ ತೊಂದರೆ ಆಗುತ್ತಿದ್ದು, ಅಡಿಕೆ ಮರಗಳು ಹಾಳಾಗುತ್ತಿರುವ ಬಗ್ಗೆ
ಅಳಲನ್ನು ತೋಡಿಕೊಂಡಿದ್ದಾರೆ.
10) ಕಲ್ಲು ಕ್ವಾರಿ ನಡೆಯುತ್ತಿರುವ ಎಷ್ಟು ಗ್ರಾಮಗಳಿಗೆ ಭೇಟಿ ನೀಡಿ ಗಣಿಗಾರಿಕೆಯಿಂದ, ಬ್ಲಾಸ್ಟ್‌ನಿಂದ ಸುತ್ತಮುತ್ತಲ ಜನರಿಗೆ ಹಾಗೂ ಮನೆಗಳಿಗೆ ಏನಾದರೂ ತೊಂದರೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗಿದೆಯೇ ಎಂಬ ಬಗ್ಗೆ ಮಾಹಿತಿ ಕೇಳಿದಾಗ, ಸಮರ್ಪಕವಾದ ವಿವರ ಹಾಗೂ ದಾಖಲೆ ನೀಡಿರುವುದಿಲ್ಲ. ಆದ್ದರಿಂದ, ಸದರಿ ವಿಷಯದ ಬಗ್ಗೆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ತಿಳಿದುಕೊಂಡು, ಆ ಬಗ್ಗೆ ಕ್ರಮ ವಹಿಸಿ ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸಲು ಶ್ರೀಮತಿ ರಶ್ಮಿ
ಹಿರಿಯ ಭೂ ವಿಜ್ಞಾನಿ, ದಾವಣಗೆರೆ ಇವರಿಗೆ ಸೂಚಿಸಲಾಯಿತು.
11) ಮೆ: ಶಿವಗಂಗಾ ಸ್ಟೋನ್ ಕ್ರಷರ್ ಪಂಚೇನಹಳ್ಳಿ ಗ್ರಾಮದಲ್ಲಿನ ಖಾಸಗಿ ಜಮೀನಿನ ಸರ್ವೇ ನಂ.19 ರಲ್ಲಿ ಇದ್ದು, ಸರ್ವೇ ನಂ:17 ರಲ್ಲಿನ ಸರ್ಕಾರಿ ಜಮೀನಿನಲ್ಲಿ 2019 ರಿಂದ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡದೇ ನಿಸ್ತೇಜವಾಗಿರುತ್ತದೆ. ಆದರೆ, ಗಣಿಗಾರಿಕೆಯಿಂದ ಆಗಿರುವ ಹಳ್ಳವನ್ನು /ಗುಂಡಿಯನ್ನು ಮುಚ್ಚಿರುವುದಿಲ್ಲ. ಆದ್ದರಿಂದ,
ಕಲ್ಲು ಕ್ವಾರಿ ಮಾಡಿ ಹಳ್ಳವನ್ನು ಮುಚ್ಚದೇ ಬಿಟ್ಟಿರುವವರ ವಿರುದ್ಧ ಕ್ರಮ ಕೈಗೊಂಡು ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಶ್ರೀಮತಿ ರಶ್ಮಿ ಸಿ.ಆರ್, ಹಿರಿಯ ಭೂ ವಿಜ್ಞಾನಿ, ದಾವಣಗೆರೆ ಇವರಿಗೆ ಸೂಚಿಸಲಾಯಿತು.
12) ಹುಲ್ಬನಿ ಖರಾಬು ಜಮೀನಿನಲ್ಲಿರುವ ಹಳ್ಳಗಳನ್ನು ಮುಚ್ಚಲು ಕ್ರಮ ಕೈಗೊಂಡು ಕೈಗೊಂಡ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆ ಹಿರಿಯ ಭೂವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ದಾವಣಗೆರೆ, ಉಪವಿಭಾಗಾಧಿಕಾರಿಗಳು,ದಾವಣಗೆರೆ
ಉಪವಿಭಾಗ, ತಹಸೀಲ್ದಾರ್, ದಾವಣಗೆರೆ ತಾಲ್ಲೂಕು ಹಾಗೂ
ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
13) ಹುಲ್ಬನಿಗೆ ಅನುಕೂಲವಾಗುವ ರೀತಿಯಲ್ಲಿ ಕ್ವಾರಿಯಿಂದಾಗಿರುವ ಹಳ್ಳವನ್ನು ಭರ್ತಿ ಮಾಡಿ, ನಂತರ ಅದರ ಮೇಲೆ ಉತ್ತಮವಾದ ಮಣ್ಣನ್ನು ಹಾಕಿ ಹಸಿರೀಕರಣ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ದಾವಣಗೆರೆ ಇವರಿಗೆ ಸೂಚಿಸಲಾಯಿತು.
14) ನಂತರ ಹುಲ್ಬನಿ ಜಾಗ, ಸುತ್ತಮುತ್ತಲಿನ ಅರಣ್ಯವನ್ನು ಒತ್ತುವರಿ ಮಾಡಿ ಗಣಿಗಾರಿಕೆ ಏನಾದರೂ ನಡೆದಿದೆಯೇ ಎಂಬ ಬಗ್ಗೆ ವಿಚಾರಿಸಿದಾಗ, ಸ್ಥಳದಲ್ಲಿದ್ದ ಕಂದಾಯ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸದರಿ ಸ್ಥಳದಲ್ಲಿ ಯಾವುದೇ ಅರಣ್ಯ ಭೂಮಿ, ಸರ್ಕಾರಿ ಜಮೀನು ಒತ್ತುವರಿ ಆಗಿರುವುದಿಲ್ಲವೆಂದು ಮತ್ತು ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಯುತ್ತಿಲ್ಲವೆಂದು ಹೇಳಿಕೆ ನೀಡಿರುತ್ತಾರೆ.
15) ಹೆಬ್ಬಾಳು ಗ್ರಾಮದ ಸರ್ವೇ ನಂ.144 ರಲ್ಲಿ ಒಟ್ಟು 36 ಎಕರೆ 37 ಗುಂಟೆ ಸೇಂದಿವನ ಜಾಗದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅನುಮತಿ ನೀಡಿದ ವಿಸ್ತೀರ್ಣಕಿಂತಲೂ ಹೆಚ್ಚಿನ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಕಲ್ಲುಗಣಿಗಾರಿಕೆ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಪಾದಿಸಿರುತ್ತಾರೆ. ಅಲ್ಲದೆ, ಗಣಿಗಾರಿಕೆ ಮಾಡುತ್ತಿರುವ ಪ್ರದೇಶದ
ಸುತ್ತಲೂ ಫೆನ್ಸಿಂಗ್ ಹಾಗೂ ಗೇಟನ್ನು ಅಳವಡಿಸದೆ,
ನಿಯಮಾನುಸಾರ ಬಫರ್ ಜೋನ್ ಬಿಡದೆ ಅಕ್ರಮವಾಗಿ
ಗಣಿಗಾರಿಕೆ ಮಾಡುತ್ತಿರುವುದು ಸಾರ್ವಜನಿಕರಿಂದ
ತಿಳಿದುಬಂದಿರುತ್ತದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ,
ಕಾನೂನು ಪ್ರಕಾರ ಕ್ರಮ ಕೈಗೊಂಡು, ಪೂರಕ
ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಶ್ರೀಮತಿ ರಶ್ಮಿ
ಹಿರಿಯ ಭೂ ವಿಜ್ಞಾನಿ, ದಾವಣಗೆರೆ ಇವರಿಗೆ ಸೂಚಿಸಲಾಯಿತು.
16) ಅದೇ ರೀತಿ, ಹೆಬ್ಬಾಳು ಗ್ರಾಮದ ಸರ್ವೇ ನಂ.145 ರಲ್ಲಿ ಒಟ್ಟು 29 ಎಕರೆ 35 ಗುಂಟೆ ಹುಲ್ಬನಿ ಖರಾಬು ಜಾಗದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅನುಮತಿ ನೀಡಿದ ವಿಸ್ತೀರ್ಣಕಿಂತಲೂ ಹೆಚ್ಚಿನ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಕಲ್ಲುಗಣಿಗಾರಿಕೆ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಪಾದಿಸಿರುತ್ತಾರೆ. ಅಲ್ಲದೆ, ಗಣಿಗಾರಿಕೆ ಮಾಡುತ್ತಿರುವ ಪ್ರದೇಶದ ಸುತ್ತಲೂ ಫೆನ್ಸಿಂಗ್ ಹಾಗೂ ಗೇಟನ್ನು ಅಳವಡಿಸದೆ, ನಿಯಮಾನುಸಾರ ಬಫರ್ ಜೋನ್ ಬಿಡದೆ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವುದು ಸಾರ್ವಜನಿಕರಿಂದ ತಿಳಿದುಬಂದಿರುತ್ತದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ, ಕಾನೂನು ಪ್ರಕಾರ ಕ್ರಮ ಕೈಗೊಂಡು, ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಶ್ರೀಮತಿ ರಶ್ಮಿ ಹಿರಿಯ ಭೂ ವಿಜ್ಞಾನಿ, ದಾವಣಗೆರೆ ಇವರಿಗೆ ಸೂಚಿಸಲಾಯಿತು.
17) ಅದೇ ರೀತಿ, ಹೆಬ್ಬಾಳು ಗ್ರಾಮದ ಸರ್ವೇ ನಂ.148 ರಲ್ಲಿ ಒಟ್ಟು 32 ಎಕರೆ ಹುಲ್ಲನಿ ಖರಾಬು ಜಾಗದಲ್ಲಿ ಕೆಲವು ಖಾಸಗಿ
ವ್ಯಕ್ತಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅನುಮತಿ ನೀಡಿದ ವಿಸ್ತೀರ್ಣಕಿಂತಲೂ ಹೆಚ್ಚಿನ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಕಲ್ಲುಗಣಿಗಾರಿಕೆ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಪಾದಿಸಿರುತ್ತಾರೆ. ಅಲ್ಲದೆ, ಗಣಿಗಾರಿಕೆ ಮಾಡುತ್ತಿರುವ ಪ್ರದೇಶದ ಸುತ್ತಲೂ ಫೆನ್ಸಿಂಗ್ ಹಾಗೂ ಗೇಟನ್ನು ಅಳವಡಿಸದೆ, ನಿಯಮಾನುಸಾರ ಬಫರ್ ಜೋನ್ ಬಿಡದೆ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವುದು ಸಾರ್ವಜನಿಕರಿಂದ ತಿಳಿದುಬಂದಿರುತ್ತದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ, ಕಾನೂನು ಪ್ರಕಾರ ಕ್ರಮ ಕೈಗೊಂಡು, ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಶ್ರೀಮತಿ ರಶ್ಮಿ ಸಿ.ಆರ್. ಹಿರಿಯ ಭೂ ವಿಜ್ಞಾನಿ, ದಾವಣಗೆರೆ ಇವರಿಗೆ ಸೂಚಿಸಲಾಯಿತು.
18) ಅದೇ ರೀತಿ, ಪಂಜೇನಹಳ್ಳಿ ಗ್ರಾಮದ ಸರ್ವೇ ನಂ.17 ರಲ್ಲಿ ಒಟ್ಟು 15 ಎಕರೆ 11 ಗುಂಟೆ ಹುಲ್ಲನಿ ಖರಾಬು ಜಾಗದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅನುಮತಿ ನೀಡಿದ ವಿಸ್ತೀರ್ಣಕಿಂತಲೂ ಹೆಚ್ಚಿನ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಕಲ್ಲುಗಣಿಗಾರಿಕೆ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಪಾದಿಸಿರುತ್ತಾರೆ. ಅಲ್ಲದೆ, ಗಣಿಗಾರಿಕೆ ಮಾಡುತ್ತಿರುವ ಪ್ರದೇಶದ ಸುತ್ತಲೂ ಫೆನ್ಸಿಂಗ್ ಹಾಗೂ ಗೇಟನ್ನು ಅಳವಡಿಸದೆ, ನಿಯಮಾನುಸಾರ ಬಫರ್ ಜೋನ್ ಬಿಡದೆ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವುದು ಸಾರ್ವಜನಿಕರಿಂದ
ತಿಳಿದುಬಂದಿರುತ್ತದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ,
ಕಾನೂನು ಪ್ರಕಾರ ಕ್ರಮ ಕೈಗೊಂಡು, ಪೂರಕ
ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಶ್ರೀಮತಿ ರಶ್ಮಿ
ಹಿರಿಯ ಭೂ ವಿಜ್ಞಾನಿ, ದಾವಣಗೆರೆ ಇವರಿಗೆ
ಸೂಚಿಸಲಾಯಿತು.
19) ಅದೇ ರೀತಿ, ಪಂಚೇನಹಳ್ಳಿ ಗ್ರಾಮದ ಸರ್ವೇ ನಂ.18 ರಲ್ಲಿ ಒಟ್ಟು 19 ಎಕರೆ 37 ಗುಂಟೆ ಹುಲ್ಬನಿ ಖರಾಬು ಜಾಗದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅನುಮತಿ ನೀಡಿದ ವಿಸ್ತೀರ್ಣಕಿಂತಲೂ ಹೆಚ್ಚಿನ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಕಲ್ಲುಗಣಿಗಾರಿಕೆ ಮಾಡುತ್ತಿದ್ದಾರೆಂದು
ಸಾರ್ವಜನಿಕರು ಆಪಾದಿಸಿರುತ್ತಾರೆ. ಅಲ್ಲದೆ, ಗಣಿಗಾರಿಕೆ
ಮಾಡುತ್ತಿರುವ ಪ್ರದೇಶದ ಸುತ್ತಲೂ ಫೆನ್ಸಿಂಗ್ ಹಾಗೂ ಗೇಟನ್ನು ಅಳವಡಿಸದೆ, ನಿಯಮಾನುಸಾರ ಬಫರ್ ಜೋನ್ ಬಿಡದೆ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವುದು ಸಾರ್ವಜನಿಕರಿಂದ ತಿಳಿದುಬಂದಿರುತ್ತದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ, ಕಾನೂನು ಪ್ರಕಾರ ಕ್ರಮ ಕೈಗೊಂಡು, ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಶ್ರೀಮತಿ ರಶ್ಮಿ ಹಿರಿಯ ಭೂ ವಿಜ್ಞಾನಿ, ದಾವಣಗೆರೆ ಸೂಚಿಸಲಾಯಿತು.
20) ಅದೇ ರೀತಿ, ಪಂಜೇನಹಳ್ಳಿ ಗ್ರಾಮದ ಸರ್ವೇ ನಂ.16 ರಲ್ಲಿ ಒಟ್ಟು 232 ಎಕರೆ ರಾಜ್ಯ ಅರಣ್ಯ ಪ್ರದೇಶದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅನುಮತಿ ನೀಡಿದ ವಿಸ್ತೀರ್ಣಕಿಂತಲೂ ಹೆಚ್ಚಿನ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಕಲ್ಲುಗಣಿಗಾರಿಕೆ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಪಾದಿಸಿರುತ್ತಾರೆ. ಅಲ್ಲದೆ, ಗಣಿಗಾರಿಕೆ ಮಾಡುತ್ತಿರುವ ಪ್ರದೇಶದ ಸುತ್ತಲೂ ಫೆನ್ಸಿಂಗ್ ಹಾಗೂ ಗೇಟನ್ನು ಅಳವಡಿಸದೆ, ನಿಯಮಾನುಸಾರ ಬಫರ್ ಜೋನ್ ಬಿಡದೆ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವುದು ಸಾರ್ವಜನಿಕರಿಂದ
ತಿಳಿದುಬಂದಿರುತ್ತದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ,
ಕಾನೂನು ಪ್ರಕಾರ ಕ್ರಮ ಕೈಗೊಂಡು, ಪೂರಕ
ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಶ್ರೀಮತಿ ರಶ್ಮಿ
ಸಿ.ಆರ್, ಹಿರಿಯ ಭೂ ವಿಜ್ಞಾನಿ, ದಾವಣಗೆರೆ ಇವರಿಗೆ
ಸೂಚಿಸಲಾಯಿತು.
21) ಅದೇ ರೀತಿ, ಪಂಚೇನಹಳ್ಳಿ ಗ್ರಾಮದ ಸರ್ವೇ ನಂ.120 ರಲ್ಲಿ ಒಟ್ಟು 24 ಎಕರೆ 15 ಗುಂಟೆ ಗೋಮಾಳ ಜಾಗದಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಅನುಮತಿ ನೀಡಿದ ವಿಸ್ತೀರ್ಣಕಿಂತಲೂ ಹೆಚ್ಚಿನ ಸ್ಥಳವನ್ನು ಒತ್ತುವರಿ ಮಾಡಿಕೊಂಡು ಕಲ್ಲುಗಣಿಗಾರಿಕೆ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆಪಾದಿಸಿರುತ್ತಾರೆ. ಅಲ್ಲದೆ, ಗಣಿಗಾರಿಕೆ ಮಾಡುತ್ತಿರುವ ಪ್ರದೇಶದ ಸುತ್ತಲೂ ಫೆನ್ಸಿಂಗ್ ಹಾಗೂ ಗೇಟನ್ನು ಅಳವಡಿಸದೆ, ನಿಯಮಾನುಸಾರ ಬಫರ್ ಜೋನ್ ಬಿಡದೆ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವುದು ಸಾರ್ವಜನಿಕರಿಂದ ತಿಳಿದುಬಂದಿರುತ್ತದೆ. ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ, ಕಾನೂನು ಪ್ರಕಾರ ಕ್ರಮ ಕೈಗೊಂಡು, ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಶ್ರೀಮತಿ ರಶ್ಮಿ ಹಿರಿಯ ಭೂ ವಿಜ್ಞಾನಿ, ದಾವಣಗೆರೆ ಇವರಿಗೆ ಸೂಚಿಸಲಾಯಿತು.
22) ಅದೇ ರೀತಿ, ದಾವಣಗೆರೆ ಜಿಲ್ಲೆಯ ಆಲೂರಿನಲ್ಲಿ ಸರ್ಕಾರಿ, ಅರಣ್ಯ ಮತ್ತು ಪಟ್ಟಾ ಭೂಮಿಯಲ್ಲಿ ಗಣಿಗಾರಿಕೆ
ಮಾಡಲಾಗುತ್ತಿದ್ದು. ಇಲ್ಲಿ ಕೃಷರ್‌ಗೆ ಅನುಮತಿ ಇದ್ದು, ಡಿಗ್ಗಿಂಗ್‌ಗೆ ಅನುಮತಿ ಇರುವುದಿಲ್ಲ ಎಂಬ ಮಾಹಿತಿಯು ಸಾರ್ವಜನಿಕರಿಂದ ತಿಳಿದುಬಂದಿರುತ್ತದೆ. ಅಕ್ರಮವಾಗಿ ಅರಣ್ಯ, ಪಟ್ಟಾ ಭೂಮಿಯಲ್ಲಿ ಕಲ್ಲು ಗಣಿಗಾರಿಕೆ ಮಾಡಲಾಗಿದೆ ಎಂಬ ಬಗ್ಗೆಯೂ ಸಹ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಆದ್ದರಿಂದ, ಈ ಬಗ್ಗೆ ಸ್ಥಳ ಪರಿಶೀಲನೆ ಮಾಡಿ, ಕಾನೂನು ಪ್ರಕಾರ ಕ್ರಮ ಕೈಗೊಂಡು, ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಶ್ರೀಮತಿ
ರಶ್ಮಿ ಸಿ.ಆರ್, ಹಿರಿಯ ಭೂ ವಿಜ್ಞಾನಿ, ದಾವಣಗೆರೆ ಇವರಿಗೆ
ಸೂಚಿಸಲಾಯಿತು.
23) ಸದರಿ ಭೇಟಿಯ ಸಂದರ್ಭದಲ್ಲಿ ಲೋಕಾಯುಕ್ತ ತಂಡದಿಂದ ಕೇಳಿದ ಪ್ರಶ್ನೆಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪರಿಸರ ಇಲಾಖೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸರಿಯಾಗಿ ಮಾಹಿತಿಯನ್ನು ಹಾಗೂ ದಾಖಲಾತಿಗಳನ್ನು ಒದಗಿಸಿರುವುದಿಲ್ಲ.
24) ಸದರಿ ಭೇಟಿಯ ಸಂದರ್ಭದಲ್ಲಿ ಗಣಿಗಾರಿಕೆ ನಡೆಸಲು
ಉಪಯೋಗಿಸುತ್ತಿರುವ ವಾಹನಗಳ ಎಫ್.ಸಿ. ಹಾಗೂ ಇನ್ಸೂರೆನ್ಸ್ ಪರಿಶೀಲಿಸುವಂತೆ ಹಾಗೂ ಗಣಿಗಾರಿಕೆಗೆ ಉಪಯೋಗಿಸುತ್ತಿರುವ ಪ್ರತಿಯೊಂದು ವಾಹನಕ್ಕೂ ಕಡ್ಡಾಯವಾಗಿ ಜಿಪಿಎಸ್, ಎಫ್.ಸಿ ಹಾಗೂ ಇನ್ಸೂರೆನ್ಸ್ ಇರುವಂತೆ ನೋಡಿಕೊಳ್ಳುವಂತೆ ಹಾಗೂ ಆ ಬಗ್ಗೆ ವರದಿ ಸಲ್ಲಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಲಾಯಿತು.
25) ದಾವಣಗೆರೆ ಜಿಲ್ಲೆಯಲ್ಲಿ ಎಷ್ಟು ಖನಿಜ ಸಾಗಾಟ ವಾಹನಗಳು ನೋಂದಣಿಯಾಗಿರುತ್ತವೆ ಮತ್ತು ಸದರಿ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆಯೇ ಎಂಬ ಬಗ್ಗೆ ಪೂರಕ ದಾಖಲಾತಿಗಳೊಂದಿಗೆ ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿ, ದಾವಣಗೆರೆ ಜಿಲ್ಲೆ ಇವರಿಗೆ ಸೂಚಿಸಿದೆ.
26) ಅದೇರೀತಿ, ಖನಿಜ ಸಾಗಾಟಕ್ಕಾಗಿ ನೋಂದಣಿಯಾಗದೇ ಇರುವ ವಾಹನಗಳಲ್ಲಿ ಖನಿಜ ಸಾಗಾಟ ಮಾಡಿದಾಗ ಕಳೆದ 02
ವರ್ಷಗಳಲ್ಲಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಪೂರಕ ದಾಖಲಾತಿಗಳೊಂದಿಗೆ ಒಂದು ತಿಂಗಳ ಒಳಗಾಗಿ ವರದಿ ಸಲ್ಲಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿ, ದಾವಣಗೆರೆ ಜಿಲ್ಲೆ ಇವರಿಗೆ ಸೂಚಿಸಿದೆ.
27) ದಾವಣಗೆರೆ ಜಿಲ್ಲೆಯ ಗಣಿಗಾರಿಕೆ ಪ್ರದೇಶ ವ್ಯಾಪ್ತಿಯಲ್ಲಿ
ಯಾವುದೇ ಜಿಪಿಎಸ್ ನಿರ್ದೇಶಾಂಕಗಳು ಇರುವ ಬಗ್ಗೆ ಗಣಿ
ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಾಹಿತಿ
ನೀಡಿರುವುದಿಲ್ಲ.
28) ದಾವಣಗೆರೆ ಜಿಲ್ಲೆಯಲ್ಲಿ ಸ್ಥಗಿತಗೊಂಡಿರುವ ಕಲ್ಲು ಕ್ವಾರಿ ಹಾಗೂ ಕ್ರಷರ್‌ಗಳ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ
ಅಧಿಕಾರಿಗಳು ಯಾವುದೇ ಮಾಹಿತಿ ನೀಡಿರುವುದಿಲ್ಲ.
29) ದಾವಣಗೆರೆ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸುತ್ತಿರುವವರು ಪ್ರತಿ ವರ್ಷ ನಮೂನೆ-MYRನ್ನು ಸಲ್ಲಿಸಿರುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.
30) ದಾವಣಗೆರೆ ಜಿಲ್ಲೆಯಲ್ಲಿ ಪರವಾನಗಿ ಪಡೆಯದೆ ಗಣಿಗಳಲ್ಲಿ ಖನಿಜ ರವಾನೆ ಪರವಾನಗಿ (mineral dispatch
permit) ನೀಡಿರುವ ಬಗ್ಗೆ ಯಾವುದೇ ಮಾಹಿತಿಯನ್ನು
ನೀಡಿರುವುದಿಲ್ಲ. ಆದ್ದರಿಂದ, ಸದರಿ ಮಾಹಿತಿಯನ್ನು ಒದಗಿಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ.
31) ದಾವಣಗೆರೆ ಜಿಲ್ಲೆಯಲ್ಲಿ ಗಣಿ ವಿನ್ಯಾಸ ನೋಂದಣಿ (mine design registration) ನೀಡಿರುವ ಬಗ್ಗೆ ಯಾವುದೇ
ಮಾಹಿತಿಯನ್ನು ನೀಡಿರುವುದಿಲ್ಲ. ಆದ್ದರಿಂದ, ಸದರಿ
ಮಾಹಿತಿಯನ್ನು ಒದಗಿಸಲು ಗಣಿ ಮತ್ತು ಭೂ ವಿಜ್ಞಾನ
ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ.
32) ನಿಯಮ-42 ರಡಿಯಲ್ಲಿ ಎಲ್ಲಾ ಗಣಿಗಾರಿಕೆ ವಾಹನಗಳು
ಜಿ.ಪಿ.ಎಸ್. ಅಳವಡಿಸಿಕೊಂಡು, ಸದರಿ ನಿಗದಿತ ಮಾರ್ಗಗಳಲ್ಲಿಯೇ ಸಂಚರಿಸುವುದು ಕಡ್ಡಾಯವಾಗಿರುತ್ತದೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಯಾವುದೇ ಮಾಹಿತಿ ನೀಡಿಲ್ಲ.
33) ನಿಯಮ-43ರ ಅಡಿಯಲ್ಲಿ ಖನಿಜಗಳನ್ನು ಸಾಗಿಸುವ ವಾಹನಗಳ ಕಣ್ಣಾವಲಿನ ಬಗ್ಗೆ ಚೆಕ್ ಪೋಸ್ಟ್ ಗಳಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದಾರೆಂಬ ಬಗ್ಗೆ ಮಾಹಿತಿಯನ್ನು ನೀಡಿರುವುದಿಲ್ಲ. ಆದ್ದರಿಂದ, ಸದರಿ ಮಾಹಿತಿಯನ್ನು ನೀಡುವಂತೆ ದಾವಣಗೆರೆ ಜಿಲ್ಲೆಯ ಸಾರಿಗೆ ಅಧಿಕಾರಿಗೆ ಸೂಚಿಸಲಾಗಿದೆ.
34) ದಾವಣಗೆರೆ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸುತ್ತಿರುವವರಿಗೆ ಎಷ್ಟು ಸಂಪರ್ಕಗಳನ್ನು ಬೆಸ್ಕಾಂ ವತಿಯಿಂದ ನೀಡಲಾಗಿದೆ ಎಂಬ ಬಗ್ಗೆ ಮಾಹಿತಿಯನ್ನು ನೀಡುವಂತೆ ದಾವಣಗೆರೆ ಜಿಲ್ಲೆಯ ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದಾಗ, ಮಾಹಿತಿಯನ್ನು ಒಂದು ತಿಂಗಳ ಒಳಗಾಗಿ ನೀಡುತ್ತೇನೆಂದು ಶ್ರೀ ತಿಪ್ಪೇಸ್ವಾಮಿ, ಕಾರ್ಯಪಾಲಕ
ಅಭಿಯಂತರರು, ಬೆಸ್ಕಾಂ, ದಾವಣಗೆರೆ ಇವರು ತಿಳಿಸಿದ್ದಾರೆ
(undertaking).
35) ದಾವಣಗೆರೆ ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸುತ್ತಿರುವವರು
ಅಕ್ರಮವಾಗಿ ಎಷ್ಟು ಸಂಪರ್ಕಗಳನ್ನು ಪಡೆದುಕೊಂಡಿದ್ದಾರೆ,
ಅಕ್ರಮವಾಗಿ ಎಷ್ಟು ವಿದ್ಯುತ್‌ನ್ನು ಉಪಯೋಗಿಸಿಕೊಂಡಿದ್ದಾರೆ
ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಗಣಿಗಳಿಗೆ ಒಟ್ಟಾರೆ ಸರಬರಾಜು ಮಾಡಿರುವ ವಿದ್ಯುತ್ ಮತ್ತು ಅವರುಗಳು ಉಪಯೋಗಿಸಿರುವ ವಿದ್ಯುತ್ ಬಿಲ್‌ಗೂ ತಾಳೆಯಾಗುತ್ತಿದೆಯೇ ಎಂಬ ಬಗ್ಗೆ ಎರಡು ವರ್ಷಗಳ ಮಾಹಿತಿಯನ್ನು ನೀಡುವಂತೆ ದಾವಣಗೆರೆ
ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದೆ.
36) ದಾವಣಗೆರೆ ಜಿಲ್ಲೆಯಲ್ಲಿ ಬೇರೆ ಉದ್ದೇಶಗಳಿಗೆ ವಿದ್ಯುತ್
ಸಂಪರ್ಕವನ್ನು ಪಡೆದುಕೊಂಡು ಗಣಿಗಾರಿಕೆಗೆ ಅಕ್ರಮವಾಗಿ
ವಿದ್ಯುತ್ ಬಳಸುವವರ ಮಾಹಿತಿಯನ್ನು ಮತ್ತು ಕೈಗೊಂಡ
ಕ್ರಮದ ಬಗ್ಗೆ ವರದಿಯನ್ನು ನೀಡುವಂತೆ ಶ್ರೀ ತಿಪ್ಪೇಸ್ವಾಮಿ,
ಕಾರ್ಯಪಾಲಕ ಅಭಿಯಂತರರು, ಬೆಸ್ಕಾಂ, ದಾವಣಗೆರೆ ಇವರಿಗೆ ಸೂಚಿಸಿದೆ.
ದೂರಿನಲ್ಲಿರುವ 18 ಅಧಿಕಾರಿಗಳ ವಿವರ:-
1 ರಶ್ಮಿ ಸಿ.ಆರ್,
ಹಿರಿಯ ಭೂ ವಿಜ್ಞಾನಿ,
ಗಣಿ ಮತ್ತು ಭೂ ವಿಜ್ಞಾನ ಇಲಾಖೆ,
ದಾವಣಗೆರೆ ಜಿಲ್ಲೆ, ದಾವಣಗೆರೆ.
2 ವಿನಯ್ ಬಷ್ಕಾರ್,
ಭೂ ವಿಜ್ಞಾನಿ,
ಗಣಿ ಮತ್ತು ಭೂ ವಿಜ್ಞಾನ ಇಲಾಖೆ,
ದಾವಣಗೆರೆ ಜಿಲ್ಲೆ, ದಾವಣಗೆರೆ.
3 ಡಾ:ಚೈತ್ರ ಆರ್,
ಭೂ ವಿಜ್ಞಾನಿ,
ಗಣಿ ಮತ್ತು ಭೂ ವಿಜ್ಞಾನ ಇಲಾಖೆ,
ದಾವಣಗೆರೆ ಜಿಲ್ಲೆ, ದಾವಣಗೆರೆ.
4 ಡಾ ಶಿವಪ್ರಸಾದ್ ಆರ್
ಭೂ ವಿಜ್ಞಾನಿ,
ಗಣಿ ಮತ್ತು ಭೂ ವಿಜ್ಞಾನ ಇಲಾಖೆ,
ದಾವಣಗೆರೆ ಜಿಲ್ಲೆ, ದಾವಣಗೆರೆ.
5 ಕಾವ್ಯ ಎಸ್.ವಿ,
ಭೂ ವಿಜ್ಞಾನಿ,
ಗಣಿ ಮತ್ತು ಭೂ ವಿಜ್ಞಾನ ಇಲಾಖೆ,
ದಾವಣಗೆರೆ ಜಿಲ್ಲೆ, ದಾವಣಗೆರೆ.
7 ಕವಿತ ಎಸ್,
ಭೂ ವಿಜ್ಞಾನಿ,
ಗಣಿ ಮತ್ತು ಭೂ ವಿಜ್ಞಾನ ಇಲಾಖೆ,
ದಾವಣಗೆರೆ ಜಿಲ್ಲೆ, ದಾವಣಗೆರೆ.
7 ಸೌಂದರ್ಯ,
ಕಿರಿಯ ಅಭಿಯಂತರರು,
ಗಣಿ ಮತ್ತು ಭೂ ವಿಜ್ಞಾನ ಇಲಾಖೆ,
ದಾವಣಗೆರೆ ಜಿಲ್ಲೆ, ದಾವಣಗೆರೆ,
8 ಡಾ: ಅಶ್ವಥ್,
ತಹಸೀಲ್ದಾರ್,
ದಾವಣಗೆರೆ ತಾಲ್ಲೂಕು, ದಾವಣಗೆರೆ ಜಿಲ್ಲೆ.
9 ಕಸ್ತೂರಿ,
ಸಹಾಯಕ ನಿರ್ದೇಶಕರು,
ಭೂ ದಾಖಲೆಗಳ ಇಲಾಖೆ,
ದಾವಣಗೆರೆ ತಾಲ್ಲೂಕು,
ದಾವಣಗೆರೆ ಜಿಲ್ಲೆ.
10 ಹಿರೇಗೌಡರ್,
ಕಂದಾಯ ನಿರೀಕ್ಷಕ,
ತಾಲ್ಲೂಕು ಕಚೇರಿ,
ದಾವಣಗೆರೆ ತಾಲ್ಲೂಕು, ದಾವಣಗೆರೆ ಜಿಲ್ಲೆ.
11 ಅಶೋಕ್,
ಗ್ರಾಮ ಲೆಕ್ಕಾಧಿಕಾರಿ,
ತಾಲ್ಲೂಕು ಕಚೇರಿ,
ದಾವಣಗೆರೆ ತಾಲ್ಲೂಕು, ದಾವಣಗೆರೆ ಜಿಲ್ಲೆ.
12 ತಿರುಕಪ್ಪ,
ಗ್ರಾಮ ಲೆಕ್ಕಾಧಿಕಾರಿ,
ತಾಲ್ಲೂಕು ಕಚೇರಿ,
ದಾವಣಗೆರೆ ತಾಲ್ಲೂಕು, ದಾವಣಗೆರೆ ಜಿಲ್ಲೆ.
13 ಚಂದ್ರಪ್ಪ,
ಕಂದಾಯ ನಿರೀಕ್ಷಕ,
ತಾಲ್ಲೂಕು ಕಚೇರಿ,
ದಾವಣಗೆರೆ ತಾಲ್ಲೂಕು, ದಾವಣಗೆರೆ ಜಿಲ್ಲೆ.
14 ಹರ್ಷದ್ ಆಲಿ,
ಸರ್ವೇಯರ್,
ತಾಲ್ಲೂಕು ಕಚೇರಿ,
ದಾವಣಗೆರೆ ತಾಲ್ಲೂಕು, ದಾವಣಗೆರೆ
15 ಶ್ರೀನಿವಾಸ್,
ತಾಲ್ಲೂಕು ಸರ್ವೇಯರ್,
ತಾಲ್ಲೂಕು ಕಚೇರಿ,
ದಾವಣಗೆರೆ ತಾಲ್ಲೂಕು,
ದಾವಣಗೆರೆ ಜಿಲ್ಲೆ.
16 ರತ್ನಾಕರ್ ಓಬಣ್ಣನವರ,
ವಲಯ ಅರಣ್ಯಾಧಿಕಾರಿ,
ಅರಣ್ಯ ಇಲಾಖೆ,
ದಾವಣಗೆರೆ ತಾಲ್ಲೂಕು, ದಾವಣಗೆರೆ ಜಿಲ್ಲೆ.
17 ಸಿ.ಎಸ್.ಪ್ರಮುತೇಶ್,
ಪ್ರಾದೇಶಿಕ ಸಾರಿಗೆ ಅಧಿಕಾರಿ,
ಸಾರಿಗೆ ಇಲಾಖೆ,
ದಾವಣಗೆರೆ ಜಿಲ್ಲೆ, ದಾವಣಗೆರೆ,
18 ತಿಪ್ಪೇಸ್ವಾಮಿ,
ಕಾರ್ಯಪಾಲಕ ಅಭಿಯಂತರರು,
ಬೆಸ್ಕಾಂ, ದಾವಣಗೆರೆ ವಿಭಾಗ, ದಾವಣಗೆರೆ ಜಿಲ್ಲೆ.