Minister: ಕೆಂಡ ತುಳಿದು ಭಕ್ತಿ ಸಮರ್ಪಿಸಿದ ಸಚಿವ ಎಸ್ ಎಸ್ ಮಲ್ಲಿಕಾರ್ಜುನ

ದಾವಣಗೆರೆ: (Minister) ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಪ್ರಯುಕ್ತ ನಡೆದ ಕೆಂಡ ಸೇವೆಯಲ್ಲಿ ಭಾಗಿಯಾಗಿ ಕೆಂಡ ತುಳಿದಿದ್ದಾರೆ.
ನಗರದ ಹಳೇ ಪೇಟೆಯ ವೀರಭದ್ರಸ್ವಾಮಿ ರಥೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಅಗ್ನಿಕುಂಡದಲ್ಲಿ ತೋಟಗಾರಿಕೆ ಮತ್ತು ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಕೆಂಡ ತುಳಿದರು. ತಮ್ಮ ಪತ್ನಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಹಾಗೂ ಮಕ್ಕಳ ಸಮೇತ ಅಗಮಿಸಿದ್ದ ಸಚಿವರು ಕೆಂಡ ಹಾಯ್ದು ವಿಶೇಷ ಪೂಜೆ ಸಲ್ಲಿಸಿದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ ವೀರಭದ್ರೇಶ್ವರ ರಥೋತ್ಸವದಲ್ಲಿ ಪ್ರತಿ ವರ್ಷ ಕೆಂಡ ಹಾಯುವ ಪದ್ಧತಿ ರೂಢಿಸಿಕೊಂಡು ಬಂದಿದ್ದಾರೆ. ಈ ರಥೋತ್ಸವ ಮುನ್ನಾದಿನ ಗುಗ್ಗಳ ಹಾಗೂ ಕೆಂಡೋತ್ಸವ ಆಚರಣೆಯಿರುತ್ತದೆ. ‘ಪ್ರತಿ ವರ್ಷ ಈ ಪದ್ಧತಿ ರೂಢಿಸಿಕೊಂಡು ಬಂದಿದ್ದೇನೆ, ಇದು ನಂಬಿಕೆ, ಭಕ್ತಿ’ ರಾಜ್ಯದಲ್ಲಿ ಉತ್ತಮ ಮಳೆ ಬೆಲಕೆಯಾಗಲಿ ಎಂದು ಬೇಡಿಕೊಳ್ಳುತ್ತೆನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಸಚಿವರ ಸಹೋದರ ಉದ್ಯಮಿ ಎಸ್.ಎಸ್. ಗಣೇಶ್ ಕೂಡ ಕೆಂಡ ತುಳಿದರು.