ಜಾತಿವಾರು ಶಾಸಕರ ಸಂಖ್ಯೆ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಮಂತ್ರಿ ಸ್ಥಾನ ನೀಡಿ – ಕೆ.ಎಲ್.ಹರೀಶ್ ಬಸಾಪುರ.

ಜಾತಿವಾರು ಶಾಸಕರ ಸಂಖ್ಯೆ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಮಂತ್ರಿ ಸ್ಥಾನ ನೀಡಿ - ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ:  ಜಾತಿವಾರು ಶಾಸಕರ ಸಂಖ್ಯೆ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಮಂತ್ರಿ ಸ್ಥಾನ ನೀಡಿ – ಕೆ.ಎಲ್.ಹರೀಶ್ ಬಸಾಪುರ.

ರಾಜ್ಯದಲ್ಲಿ 24 ವರ್ಷಗಳ ನಂತರ ಸ್ಪಷ್ಟ ಬಹುಮತದ ಸರ್ಕಾರವನ್ನು ರಾಜ್ಯದ ಜನತೆ ನೀಡಿದ್ದು, ಕಾಂಗ್ರೆಸ್ ಪಕ್ಷ 135 ಸ್ಥಾನಗಳ ಪಡೆಯುವ ಮೂಲಕ ಬಹುಮತದೊಂದಿಗೆ ಸರ್ಕಾರ ರಚಿಸಿದ್ದು ಇದರಲ್ಲಿ ಲಿಂಗಾಯತ ಸಮುದಾಯದ 36, ಒಕ್ಕಲಿಗ ಸಮುದಾಯದ 23, ಎಸ್ಸಿ ಸಮುದಾಯದ 21, ಎಸ್ ಟಿ ಸಮುದಾಯದ 15, ಕುರುಬ ಸಮುದಾಯ ಹಾಗೂ ಮುಸ್ಲಿಂ ಸಮುದಾಯದ ತಲಾ 9 ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದು, ಪಕ್ಷದ ನಾಯಕರು ಇದನ್ನು ಪರಿಗಣಿಸಿ ಜಾತಿವಾರು ಶಾಸಕರ ಸಂಖ್ಯೆ ಹಾಗೂ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಶಾಸಕರನ್ನು ಮಂತ್ರಿಗಳನ್ನಾಗಿ ಮಾಡುವ ಮೂಲಕ ಪಕ್ಷವನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿದ ಸಮುದಾಯಗಳಿಗೆ ಅವಕಾಶ ನೀಡಬೇಕು ಎಂದು ಕೆ.ಎಲ್.ಹರೀಶ್ ಬಸಾಪುರ ಪಕ್ಷದ ನಾಯಕರರಲ್ಲಿ ವಿನಂತಿಸಿದ್ದಾರೆ.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿದಂತೆ 34 ಸಚಿವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವ ಅವಕಾಶವಿದ್ದು, ಪಕ್ಷದಿಂದ 135 ಶಾಸಕರು ಆಯ್ಕೆಯಾಗಿದ್ದಾರೆ, ಸರಾಸರಿ ಆಧಾರದ ಮೇಲೆ ನಾಲ್ಕು ಜನ ಶಾಸಕರಿಗೆ ಒಬ್ಬ ಸಚಿವರನ್ನ ಆಯ್ಕೆ ಮಾಡುವ ಮೂಲಕ ಎಲ್ಲಾ ಸಮುದಾಯಗಳಿಗೂ ಶಾಸಕರ ಸಂಖ್ಯೆ ಆಧಾರದ ಮೇಲೆ ಸಚಿವ ಸ್ಥಾನ ನೀಡುವ ಮೂಲಕ ಸೂಕ್ತ ಪ್ರಾತಿನಿತ್ಯ ನೀಡಬೇಕಾಗಿದೆ.

ಲಿಂಗಾಯತ ಸಮುದಾಯದ 36 ಶಾಸಕರ ಪೈಕಿ ಕನಿಷ್ಠ 9 ಶಾಸಕರನ್ನು ಮಂತ್ರಿ ಮಾಡುವ ಮೂಲಕ, ಇನ್ನುಳಿದ ಎಲ್ಲಾ ಸಮುದಾಯಗಳಿಗೂ ಇದೇ ಆಧಾರದ ಮೇಲೆ ಸ್ಥಾನ ನೀಡಿದರೆ ಪಕ್ಷವನ್ನು ಬೆಂಬಲಿಸಿದ ಎಲ್ಲಾ ಸಮುದಾಯವನ್ನು ಗೌರವಿಸಿದಂತಾಗುತ್ತದೆ ಹಾಗೂ ದಾವಣಗೆರೆ ಜಿಲ್ಲೆಯಿಂದ ಏಳು ಸ್ಥಾನಗಳ ಪೈಕಿ ಆರು ಸ್ಥಾನಗಳ ಗೆಲುವಿಗೆ ಕಾರಣರಾದ ಎಸ್.ಎಸ್ ಮಲ್ಲಿಕಾರ್ಜುನ್ ರವರಿಗೆ ಪ್ರಭಾವಿ ಖಾತೆ ನೀಡಲು ಜಿಲ್ಲೆಯ ಎಲ್ಲಾ ಕಾರ್ಯಕರ್ತರ ಪರವಾಗಿ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಹಾಗೂ ಪಕ್ಷದ ರಾಷ್ಟ್ರೀಯ ನಾಯಕರಲ್ಲಿ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!