ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿದ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕ ಗೌತಮ್ ಜೈನ್

ಬೆಂಗಳೂರು: ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರನ್ನು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಶ್ರೀ ಗೌತಮ್ ಜೈನ್ ರಾಜಭವನದಲ್ಲಿ ಭೇಟಿ ಮಾಡಿ,ರಾಜ್ಯಪಾಲರನ್ನು ಸನ್ಮಾನಿಸಿ ಹಾಗೂ ಪರಮ ಪೂಜ್ಯ ಆಚಾರ್ಯ ಶ್ರೀ ಅಭಯ ಶೇಖರ್ ಸುರಿಶ್ವರಜೀ ಮಹಾರಾಜ್ ರವರು ಬರೆದಿರುವ ಜೈಲರ್ ಹಾಗೂ ಚಿಂತಾ-ಚಿಂತನ ಪುಸ್ತಕವನ್ನು ನೀಡಿದರು. ಸುಮಾರು ಅರ್ಧಗಂಟೆ ಕಾಲ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಈ ವೇಳೆ ಜೀವನ್ ಟಿವಿ ಚಾನೆಲ್ ನ ಮುಖ್ಯಸ್ಥರಾದ ಕುಶಾಲ್ ಚೋಪಡಾ ಉಪಸ್ಥಿತರಿದ್ದರು.
