ಮೋದಿ ಭಾವಚಿತ್ರ ಹರಿದ ಶಾಸಕನಿಗೆ ದಂಡ

ಗುಜರಾತ್ : ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹರಿದು ಹಾಕಿದ್ದ ಕಾಂಗ್ರೆಸ್ ಶಾಸಕನಿಗೆ ಇಲ್ಲಿನ ನ್ಯಾಯಲ 99 ರೂ.ಗಳ ದಂಡ ವಿಧಿಸಿದೆ.
ಪ್ರತಿಭಟನೆಯೊಂದರ ವೇಳೆವಾಂಡ್ಸಾ ಕ್ಷೇತ್ರದ ಶಾಸಕ ಅನಂತ್ ಪಟೇಲ್ ಎಂಬುವವರು ಪ್ರತಿಭಟನೆಯೊಂದರ ವೇಳೆ ಪ್ರಧಾನಿ ಮೋದಿಯವರ ಭಾವಚಿತ್ರ ಹರಿದು ದಂಡದ ಶಿಕ್ಷೆಗೆ ಒಳಗಾದವರು.
2017ರಲ್ಲಿ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಅನಂತ್ ಪಟೇಲ್ ಅವರು, ಕುಲಪತಿಗಳ ಕೊಠಡಿಗೆ ಪ್ರವೇಶಿಸಿ, ಮೇಜಿನ ಮೇಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಹರಿದು ಹಾಕಿದ್ದರು.
ಘಟನೆ ಸಂಬಂಧ ಪಟೇಲ್ ಹಾಗೂ ಇನ್ನಿತರ 6 ಮಂದಿಯ ವಿರುದ್ಧ ಐಪಿಸಿಯ 143. 353,427, 447 ಹಾಗೂ 447ರಡಿ ಜಾಲಾಪೋರ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದಲ್ಲಿ ಪಟೇಲ್ ಅವರು ಐಪಿಸಿಯ 447ನೇ ವಿಧಿ ಅನ್ವಯ (ಅಕ್ರಮ ಪ್ರವೇಶ) ತಪ್ಪಿತಸ್ಥ ಎಂದು ನ್ಯಾಯಮೂರ್ತಿ ವಿ.ಎ ದದ್ದಲ್ ಅವರು ತೀರ್ಪು ನೀಡಿದ್ದಾರೆ.
ಮೂರು ಮಂದಿ ತಪ್ಪಿತಸ್ಥರು ಎಂದಿರುವ ನ್ಯಾಯಾಲಯವು ತಲಾ 99 ರೂ.ಗಳ ದಂಡ ವಿಧಿಸಿದೆ. ಪಾವತಿಸಲು ವಿಫಲವಾಗಿದ್ದೇ ಆದಲ್ಲಿ 7 ದಿನಗಳ ಸಾಮಾನ್ಯ ಸಜೆ ಅನುಭವಿಸಬೇಕು ಎಂದು ಹೇಳಿದೆ.