Mla Grant Work: ಕರೋನಾದಿಂದ ಶಾಸಕರ ಅನುದಾನದ ಕಾಮಗಾರಿ ವಿಳಂಬ: ಕಾಮಗಾರಿ ಗುಣಮಟ್ಟದಲ್ಲಿರಲಿ – ಶಾಮನೂರು ಶಿವಶಂಕರಪ್ಪ

IMG-20211106-WA0111

ದಾವಣಗೆರೆ: ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಮತ್ತು ಲೊಕೋಪಯೋಗಿ ಇಲಾಖೆ ಯೋಜನೆಯಡಿ ೧.೬೦ ಕೋಟಿ ರೂ., ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಶನಿವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಲೊಕೋಪಯೋಗಿ ಇಲಾಖೆಯ ಯೋಜನೆಯಡಿ ೧.೩೬ ಕೋಟಿ ವೆಚ್ಚದಲ್ಲಿ ಪಾಲಿಕೆ ವ್ಯಾಪ್ತಿಯ ಮಾಗಾನಹಳ್ಳಿ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ೧೨ಲಕ್ಷ ರೂ ವೆಚ್ಚದಲ್ಲಿ ವಾರ್ಡ್ ನಂ. ೯ರ ವ್ಯಾಪ್ತಿಯಲ್ಲಿ ಆಜಾದ್ ನಗರ ೬ನೇ ಕ್ರಾಸ್ ನಿಂದ ಬಾಷಾನಗರ ಸರ್ಕಲ್‌ವರೆಗೆ ರಸ್ತೆ ಬದಿ ಚರಂಡಿ ನಿರ್ಮಾಣ ಹಾಗೂ ೧೨.೮೬ಲಕ್ಷ ರೂ ವೆಚ್ಚದಲ್ಲಿ ವಾರ್ಡ್‌ನಂ.೧೨ರ ವ್ಯಾಪ್ತಿಯ ಆಜಾದ್ ನಗರ ೧೧ನೇ ಕ್ರಾಸ್ ನಲ್ಲಿ ರಸ್ತೆ ಬದಿಯಲ್ಲಿ ಸಿ.ಸಿ.ಪೈಪ್ ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕರೋನಾದಿಂದಾಗಿ ಶಾಸಕರ ಅನುದಾನದ ಕಾಮಗಾರಿಗಳನ್ನು ಆರಂಭಿಸಲು ವಿಳಂಬವಾಗಿದ್ದು, ಕಾಮಗಾರಿಗಳನ್ನು ಗುಣಮಟ್ಟದಲ್ಲಿ ನಿರ್ಮಿಸುವಂತೆ ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚಿಸಿದರು.
ಇದೇ ವೇಳೆ ಸ್ಥಳೀಯರು ವಿವಿಧ ಕಾಮಗಾರಿಗಳ ತುರ್ತು ಕೈಗೊಳ್ಳುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವಶ್ಯವಿರುವ ಕಡೆ ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಜಾಕೀರ್, ಶ್ರೀಮತಿ ಹುರ್‌ಬಾನು, ರಹೀಂಸಾಬ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಿವರಾಜ್, ಪ್ರಾಂಶುಪಾಲರುಗಳಾದ ಸುರೇಶ್, ಸೈಯದ್ ಮುಜೀಬುಲ್ಲಾ, ಮುಖಂಡರುಗಳಾದ ಶಫೀಕ್ ಪಂಡಿತ್, ಹೆಚ್.ಜಯಣ್ಣ, ನೂರ್ ಅಹ್ಮದ್, ಮುನೀರ್ ಸಾಬ್, ಷೇಕ್ ಅಹ್ಮದ್, ಲೋಕೋಪಯೋಗಿ ಇಲಾಖೆಯ ಮಹಾದೇವಪ್ಪ, ಮಲ್ಲೇಶಪ್ಪ, ಕೆಐಡಿಬಿಯ ಗಣೇಶಬಾಬು, ಸ್ಮಾರ್ಟ್‌ಸಿಟಿ ನಿರ್ದೇಶಕ ಎಂ.ನಾಗರಾಜ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!