ನರೇಗಾ ಯೋಜನೆಯಡಿ ಜಿ ಪಂ ಕಚೇರಿಯಲ್ಲಿ ಒಂಬಡ್ಸ್ಮನ್ ಕಚೇರಿ ಪ್ರಾರಂಭ – ಸಿ ಇ ಒ

ದಾವಣಗೆರೆ: ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ದಾವಣಗೆರೆ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಂಬುಡ್ಸ್ಮನ್ ಕಚೇರಿಯನ್ನು ಪುನರಾರಂಭಿಸಲಾಗಿದ್ದು, ಸಾರ್ವಜನಿಕರಿಗೆ ತಮ್ಮ ದೂರುಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ.
ಈ ಮೊದಲು ಕೋವಿಡ್ ನಿಯಂತ್ರಣಕ್ಕೆ ಜು. 04 ರವರೆಗೆ ಲಾಕ್‌ಡೌನ್ ಜಾರಿಗೊಳಿಸಿದ ಕಾರಣದಿಂದಾಗಿ ಒಂಬುಡ್ಸ್ಮನ್ ಕಚೇರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಕೋವಿಡ್ ಸುರಕ್ಷತಾ ಕ್ರಮಗಳನ್ನು ಪಾಲಿಸುವುದರೊಂದಿಗೆ ಜು. 05 ರಿಂದಲೇ ಒಂಬುಡ್ಸ್ಮನ್ ಕಚೇರಿಯನ್ನು ಪುನರಾರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ತಿಳಿಸಿದ್ದಾರೆ.