Mobile Tower: ಜಿಯೋ ಮೊಬೈಲ್ ಟವರ್ ಹಾಕ್ತೀವಿ ಅಂತಾ 23 ಲಕ್ಷ ಪಂಗನಾಮ ಹಾಕಿದ ಕಿರಾತಕ: ಸಿ ಇ ಎನ್ ಠಾಣೆಯಲ್ಲಿ ಪ್ರಕರಣ ದಾಖಲು

 

ದಾವಣಗೆರೆ: ಜಿಯೋ ಮೊಬೈಲ್ ಟವರ್ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯಿಂದ ಲಕ್ಷಾಂತರ ರೂಪಾಯಿ  ವಂಚನೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದಾವಣಗೆರೆ ನಗರದ ಸರಸ್ವತಿ ಬಡಾವಣೆ ನಿವಾಸಿ ರಾಜು ಎಚ್ಎಂ ಎಂಬುವರಿಗೆ ಜೂನ್ 30ರಂದು ಕರೆ ಮಾಡಿದ ವ್ಯಕ್ತಿ ರಾಕೇಶ್ ಎಂದು ಪರಿಚಯ ಮಾಡಿಕೊಂಡು ತಾನು ಜಿಯೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ನಿಮ್ಮ ಜಮೀನು ಅಥವಾ ಮನೆಯ ಮಹಡಿಯ ಮೇಲೆ ಹಾಕಿ ಕೊಡುವುದಾಗಿ ಹೇಳಿ ದಾವಣಗೆರೆ ತಾಲೂಕಿನ ಗಾಂಧಿನಗರದ ಜಮೀನಿನ ದಾಖಲಾತಿಗಳನ್ನು ವಾಟ್ಸಪ್ ಮುಖಾಂತರ ತರಿಸಿಕೊಂಡು. ಜಿಯೋ ಇನ್ಸ್ಟಾಲೇಷನ್ ಗಾಗಿ ನೋಂದಣಿ ಶುಲ್ಕ 1100 ರೂ ಆನ್ಲೈನ್ ಮುಖಾಂತರ ಕಳುಹಿಸಿದ ನಂತರ ಜುಲೈ 16 ರಂದು ಪೋಸ್ಟ್ ಮುಖಾಂತರ 100 ರು ಮುಖಬೆಲೆಯ ಬಾಂಡ್ ಪೇಪರ್ ಲಿ 50 ಸಾವಿರ ಬಾಡಿಗೆ ಅಡ್ವಾನ್ಸ್ 60 ಲಕ್ಷ ರೂಪಾಯಿಗಳು ಹತ್ತು ವರ್ಷ ಅಗ್ರೀಮೆಂಟ್ ತೋರಿಸಿ  ಜುಲೈ 17ರಂದು ಕರೆ ಮಾಡಿ ಕೇಳಿದಾಗ ಈಗಾಗಲೇ ಜಿಯೋ ಟವರ್ ಇನ್ಸ್ಟಾಲೇಷನ್ ಒಪ್ಪಂದ ಕಾರಣ ಪತ್ರ ತಲುಪಿದೆ ಅದರಂತೆ ಪ್ರಾರಂಭಿಸಿದ್ದರಿಂದ ನೀವು ಪರವಾನಿಗೆ ಶುಲ್ಕ ಇನ್ಸ್ಟಾಲೇಷನ್ ಶುಲ್ಕ ಪರಿಸರ ಮಾಲಿನ್ಯ ಸರ್ಟಿಫಿಕೇಟ್ ಶುಲ್ಕ ಕಾನೂನು ಸೇವಾ ಶುಲ್ಕ ಜಿಎಸ್ಟಿ ಶುಲ್ಕ ಆರ್ ಟಿ ಓ ಶುಲ್ಕ ಸೇರಿದಂತೆ ಹಲವಾರು ಶುಲ್ಕದ ಹೆಸರಿನಲ್ಲಿ ಹಂತ ಹಂತವಾಗಿ ಸುಮಾರು 23.40.997/ರೂ ಗಳನ್ನೂ ಆನ್ಲೈನ್ ಮುಖಾಂತರ ಮೋಸ ಮಾಡಲಾಗಿದೆ.

ಆರೋಪಿಗಳು ಅಪರಿಚಿತರಾಗಿದ್ದು ಕೇವಲ ಮೊಬೈಲ್ನಲ್ಲಿ ಮಾತನಾಡಿ ವಂಚಿಸಿದ್ದಾರೆ ಎನ್ನಲಾಗಿದೆ .ಈ ಪ್ರಕರಣವ ಸಿ ಇ ಎನ್ ಪೊಲೀಸ್ ಠಾಣೆ ಯಲ್ಲಿ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!