ಟ್ವಿಟ್ಟರ್ ಮೂಲಕ ಪುನೀತ್ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು: ಹೃದಯಾಘಾತದಿಂದ ನಿಧನರಾದ ನಟ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ವಿಧಿಯ ಕ್ರೂರವಾದ ತಿರುವು ಪುನೀತ್ ರಾಜ್ಕುಮಾರ್ ಎಂಬ ಸಮೃದ್ಧ ಮತ್ತು ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ. ಇದು ಅವರು ಹೋಗುವ ವಯಸ್ಸಲ್ಲ. ಅವರ ವ್ಯಕ್ತಿತ್ವ ಮತ್ತು ಕೆಲಸವನ್ನ ಮುಂದಿನ ಪೀಳಿಗೆ ನೆನಪಿನಲ್ಲಿಡುತ್ತದೆ. ಅವರ ಕುಟುಂಬ ಮತ್ತ ಅಭಿಮಾನಿಗಳಿಗೆ ಸಂತಾಪ” ಎಂದು ಟ್ವೀಟ್ ಮಾಡುವ ಜೊತೆಗೆ, ಪುನೀತ್ ಇರುವ ಪೋಟೊವನ್ನ ಹಂಚಿಕೊಂಡಿದ್ದಾರೆ.

