Bsy Talk: ರಾಜ್ಯದಲ್ಲಿ ಮೋದಿ ಅಲೆಯಿಂದ ಗೆಲ್ಲೊದು ಕಷ್ಟ.! ಲೋಕಸಭೆಗೆ ಮಾತ್ರ ಮೋದಿ ಅಲೆಯಿಂದ ಗೆಲುವು ಸಾಧ್ಯ – ಬಿ ಎಸ್ ವೈ

IMG-20210919-WA0013

 

ದಾವಣಗೆರೆ: ವಯಸ್ಸಿನ ಕಾರಣಕ್ಕಾಗಿಯೊ ಅಥವಾ ಸ್ವಪಕ್ಷದವರ ಕೈವಾಡದಿಂದಲೋ ಬಿಜೆಪಿಯ ಮಾಸ್ ಲೀಡರ್ ಎಂದೆ ಹೆಸರಾಗಿದ್ದ ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನ ಪದತ್ಯಾಗ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು.

ಈಗ ಅದೇ ಕಾರಣದಿಂದ ಬಿಜೆಪಿಗೆ ಮುಂದಿನ ಚುನಾವಣೆಗಳಲ್ಲಿ ಗೆಲುವು ಕಾಣಬೇಕಾದರೆ ಪ್ರಯಾಸ ಪಡುವ ಅಗತ್ಯವಿದೆ ಎಂಬುದನ್ನು ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿರುವ ಯಡಿಯೂರಪ್ಪ ಅವರ ಮಾತುಗಳು ಇದಕ್ಕೆ ಪುಷ್ಟಿಕರಿಸುತ್ತವೆ.

ವಿಧಾನಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳಿಂದ ತೀವ್ರ ಪೈಪೋಟಿ ಎದುರಾಗಲಿದೆ ಎಂಬುದಕ್ಕೆ ಸ್ವತಃ ಯಡಿಯೂರಪ್ಪ ಅವರು ನೀಡಿದ ಹೇಳಿಕೆಗಳು ಇಂಬುಕೊಡುತ್ತಲಿವೆ.

ಮೋದಿ ಅಲೆಯಿಂದಲೇ ಚುನಾವಣೆ ಗೆಲ್ಲುತ್ತೇವೆಂಬ ಹುಚ್ಚು ಧೈರ್ಯದಿಂದ ಹೊರಗೆ ಬನ್ನಿ, ಲೋಕಸಭೆಗೆ ಮಾತ್ರ ಮೋದಿ ಅಲೆಯಿಂದ ಗೆಲುವು ಸಾಧ್ಯ. ಆದರೆ, ರಾಜ್ಯದಲ್ಲಿ ಗೆಲ್ಲಬೇಕೆಂದರೆ ರಾಜ್ಯ, ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿದರೆ ಗೆಲುವು ಸಾಧಿಸಲು ದಾರಿ ಸಿಗಲಿದೆ. ಇಲ್ಲವಾದರೆ ಪ್ರತಿಪಕ್ಷಗಳು ಅದನ್ನೆ ದಾಳವಾಗಿ ಮಾಡಿಕೊಂಡು ನಿರಾಯಾಸವಾಗಿ ಗೆಲ್ಲಬಹುದೆಂಬ ಸೂಕ್ಷ್ಮತೆಯನ್ನು ಬಿಟ್ಟುಕೊಟ್ಟಿದ್ದಾರೆ ಬಿಎಸ್ ವೈ.

ಬಿಜೆಪಿಯ ಆಲ್ ಟೈಂ ಪ್ರಶ್ನಾತೀತ ನಾಯಕನೆನಿಸಿಕೊಂಡಿರುವ ಬಿಎಸ್ ವೈ ಸಿಎಂ ಸ್ಥಾನದಿಂದ ಕೆಳಗಿಳಿದಿರುವುದೇ ಪ್ರತಿಪಕ್ಷಗಳಿಗೆ ಪ್ಲಸ್ ಪಾಯಿಂಟ್ ಆಗಿದೆ. ಏಕೆಂದರೆ ಬಿಎಸ್ ವೈ ಹೊರತಾಗಿ ಮತ್ತಿನ್ಯಾವ ಮಾಸ್ ಲೀಡರ್ ಬಿಜೆಪಿಯಲ್ಲಿ ಕಾಣಲು‌ ಸಾಧ್ಯವಿಲ್ಲ. ಇದು ಯಡಿಯೂರಪ್ಪಗೂ ಮನವರಿಕೆಯಾಗಿದೆ ಕೂಡ.

ಆದ್ದರಿಂದ, ಮುಂಬರುವ ವಿಧಾನಸಭೆ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಿಜೆಪಿಗೆ ಅಗ್ನಿಪರೀಕ್ಷೆಯೇ ಸರಿ. ಆದುದರಿಂದಲೇ ಪಕ್ಷ ಗೆಲ್ಲಲು ಕಾರ್ಯಕರ್ತರು, ಶಾಸಕರು, ಸಚಿವರು, ಮುಖಂಡರು ಅವಿರತ ಶ್ರಮಹಾಕುವ ಅಗತ್ಯ ಈಗ ಬಿಜೆಪಿಗಿದೆ ಎಂಬುದನ್ನು ಯಡಿಯೂರಪ್ಪ ಸೂಕ್ಷ್ಮವಾಗಿ ಕಿವಿಹಿಂಡಿ ಹೇಳಿದ್ದಾರೆ.

ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಈಗಾಗಲೇ ಎದ್ದುಕೂತಿದ್ದು, ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ, ಹಾನಗಲ್, ಸಿಂಧಗಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲದಿದ್ದರೆ ಜನರಿಗೆ ಯಾವ ಸಂದೇಶ ರವಾನೆಯಾಗಲಿದೆ ಯೋಚಿಸಿ. ಆದ್ದರಿಂದ, ಯುದ್ಧೋಪಾದಿಯಾಗಿ ಚುನಾವಣೆಗೆ ಸನ್ನದ್ದರಾಗುವಂತೆ ಕಿವಿಮಾತು ಹೇಳಿದ್ದಾರೆ.

ಅಲ್ಲದೇ, ಪದತ್ಯಾಗ ಮಾಡಿದ ಮೇಲೂ ಯಡಿಯೂರಪ್ಪ ಪಕ್ಷಕ್ಕಾಗಿ, ಪಕ್ಷದ ಬಲವರ್ಧನೆಗಾಗಿ ಪ್ರವಾಸ ಕೈಗೊಂಡಿರುವುದು ಕಂಡರೆ ಬಿಜೆಪಿ ಒಂದಂಶದಲ್ಲಿ ಪಕ್ಷ ಬಲಹೀನವಾಗಿದೆಯಾ ? ಪಕ್ಷವನ್ನು ಮತ್ತೆ ಸಂಘಟಿಸಲು ಬಿಎಸ್ವೈ ಭಗಿರಥ ಪ್ರಯತ್ನ ಮಾಡುತ್ತಿದ್ದಾರ ಎಂಬ ಪ್ರಶ್ನೆ ಮೂಡದೇ ಇರದು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!