ದಾವಣಗೆರೆಯಲ್ಲಿ ಮೋದಿ ಪ್ರವಾಸ; ಮಾರ್ಗದಲ್ಲಿ ಭಾರಿ ಬದಲಾವಣೆ; ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಇಲ್ಲಿದೆ ಓದಿ

ದಾವಣಗೆರೆ: ದಿನಾಂಕ:-28-04-2024 ರಂದು ಶ್ರೀ.ನರೇಂದ್ರ ಮೋದಿ, ಸನ್ಮಾನ್ಯ ಪ್ರಧಾನಮಂತ್ರಿಗಳು, ಭಾರತ ಸರ್ಕಾರ (ಎಸ್.ಪಿ.ಜಿ ಕೆಟಗರಿ ಭದ್ರತೆ) ಇವರು ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿ ವತಿಯಿಂದ, ದಾವಣಗೆರೆ ಲೋಕಸಭಾ ಚುನಾವಣೆ-2024 ರ ಸಂಬAಧ ಹಮ್ಮಿಕೊಂಡಿರುವ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಮಾನ್ಯ ಕೇಂದ್ರ ಸಚಿವರುಗಳು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಸಚಿವರುಗಳು ಹಾಗೂ ಮುಖಂಡರುಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು. ಅಭಿಮಾನಿಗಳು ಸಾರ್ವಜನಿಕರು ಆಗಮಿಸಲಿದ್ದಾರೆಂದು ತಿಳಿದು ಬಂದಿರುತ್ತದೆ. ಈ ಹಿನ್ನಲೆಯಲ್ಲಿ ಭದ್ರತಾ ದೃಷ್ಠಿಯಿಂದ ಈ ಕೆಳಕಂಡAತೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ಮಾನ್ಯ ಭದ್ರತಾ ದೃಷ್ಟಿಯಿಂದ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಸಮಾವೇಶಕ್ಕೆ ಅಗಮಿಸುವಂತ  ಸಾರ್ವಜನಿಕರು ಈ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳನ್ನು ಪಾಲಿಸಲು ಕೋರಿದೆ.
                 ಏನು ಮಾಡಬೇಕು?ಏನು ಮಾಡಬಾರದು?
1)  ಸಮಾವೇಶಕ್ಕೆ ಪೊಲೀಸ್ ಪ್ರಿಸ್ಕಿಂಗ್ ದ್ವಾರದ ಮೂಲಕ ಪ್ರವೇಶ ಇರುವ ಪ್ರಯುಕ್ತ ಸಮಾವೇಶದ ಸಾರ್ವಜನಿಕ ಕೂರುವ ಪೆಂಡಾಲ್‌ಗೆ ಮದ್ಯಾಹ್ನ ೦೨-೦೦ ಗಂಟೆಯೊಳಗೆ ಸೇರುವುದು. ಪೊಲೀಸ್ ಪ್ರಿಸ್ಕಿಂಗ್ ಧ್ವಾರ ಬಿಟ್ಟು ಬೇರೆ ಅನ್ಯ ಮಾರ್ಗಗಳಿಂದ  ಪ್ರವೇಶವಿರುವುದಿಲ್ಲ
2) ಆಯೋಜಕರಿಂದ ಸ್ಥಳದಲ್ಲೇ ಕುಡಿಯುವ  ನೀರಿನ ವ್ಯವಸ್ಥೆ ಮಾಡಿದ್ದು ಅಲ್ಲಿಯೇ ನೀರು ಕುಡಿಯಬಹುದು  ಸಮಾವೇಶಕ್ಕೆ ಬರುವಾಗ ಯಾವುದೇ ನೀರಿನ ಬಾಟಲ್‌ಗಳನ್ನು ತೆಗೆದುಕೊಂಡು ಬರಲು ಅವಕಾಶವಿರುವದಿಲ್ಲ
3) ಸಮಾವೇಶದ ಒಳಗೆ ಬಂದ ಮೇಲೆ ಪದೇ ಪದೇ ಓಡಾಡದೇ ಬಾರದು, ಒಂದು ಕಡೆ ಕುಳಿತುಕೊಳ್ಳಬೇಕು. ಸಮಾವೇಶ ಸ್ಥಳಕ್ಕೆ ಆಗಮಿಸುವವರು ಯಾವುದೇ ಪೋಸ್ಟರ್, ಮಾರಕಾಸ್ತçಗಳು, ಬ್ರೀಪ್ ಕೇಸ್‌ಗಳು, ಲಗೇಜ್‌ಬ್ಯಾಗ್‌ಗಳು, ಎಲೆಕ್ಟಾçನಿಕ್ ವಸ್ತುಗಳು, ಪೋಟೋ ಫ್ರೇಮ್ ಗಳು ಹಾಗೂ ಇತರೆ ವಸ್ತುಗಳನ್ನು ತರಬಾರದು.
4) ಮಹಿಳೆಯರಿಗೆ ಪ್ರಿಸ್ಕಿಂಗ್‌ಗೆ ಪ್ರತ್ಯೇಕವಾದ ಸ್ಥಳವಿದ್ದು ಮಹಿಳಾ ಪೊಲೀಸ್ ರವರಿಂದ ಪ್ರಿಸ್ಕಿಂಗ್ ನಂತರ ಸಮಾವೇಶಕ್ಕೆ ತೆರಳುವುದು. ಗಣ್ಯರನ್ನು ನೋಡುವ ಆತುರದಲ್ಲಿ ಬ್ಯಾರಿಕೇಡ್‌ಗಳನ್ನು ಹಾರಿಕೊಂಡು ಹೋಗುವುದು ಮಾಡಬಾರದು
5) ಸಮಾವೇಶಕ್ಕೆ ಹೋಗುವಾಗ ನೂಕಲಾಗದಂತೆ ಮುಂಚಿತವಾಗಿ ಬಂದು ಸಮಾವೇಶ ಪೆಂಡಾಲ್ ಸ್ಥಳಕ್ಕೆ ಸೇರುವುದು. ಎಲ್‌ಇಡಿ ಟಿವಿ ಸ್ಟ್ಯಾಂಡ್‌ ಮೇಲೆ ನಿಂತುಕೊಳ್ಳಬಾರದು. ಮದ್ಯಪಾನ ಮಾಡಿ ಸಮಾವೇಶಗಳಿಗೆ ಬರಬಾರದು
6) ಸಾರ್ವಜನಿಕ ತಾವು ಅಗಮಿಸಿದ ಬಸ್ ಯಾವುದು ಪಾರ್ಕಿಂಗ್ ಸ್ಥಳದ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳುವುದು. ಸಮಾವೇಶ ಸ್ಥಳ ಮತ್ತು ಮಾನ್ಯರು ಸಾಗುವ ಮಾರ್ಗಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು.
7)ಭದ್ರತಾ ದೃಷ್ಠಿಯಿಂದ ಪೊಲೀಸ್ ಇಲಾಖೆ ವತಿಯಿಂದ ಪರಿಶೀಲಿಸುವಾಗ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳೊAದಿಗೆ ಸೌಜನ್ಯಯುತವಾಗಿ ಸಹಕರಿಸಬೇಕು. ದಾವಣಗೆರೆ ನಗರದಲ್ಲಿ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸದೇ ನಿಲುಗಡೆಗೆ ಕಾಯ್ದಿರಿಸಿರುವ ಸ್ಥಳಗಳಲ್ಲಿ ಮತ್ತು ಪೊಲೀಸರು ಸೂಚಿಸುವ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು.
8)ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪ್ರಚೋದನಾತ್ಮಕ, ನಿಂದನಾತ್ಮಕ ಪೋಸ್ಟರ್‌ಗಳನ್ನು ಹಾಕುವುದಾಗಲಿ, ಶೇರ್ ಮಾಡುವುದು ಕಾನೂನು ಬಾಹಿರವಾಗಿರುತ್ತದೆ. ಇಂತಹವುದು ಕಂಡು ಬಂದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು
9)ಮಾನ್ಯರ ಭದ್ರತಾ ದೃಷ್ಟಿಯಿಂದ ನಗರ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ ನಿಷೇಧವಿರುವ ಕಾರಣ ಉಲ್ಲಂಘಿಸಿದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು
  ಮಾನ್ಯರ ಭದ್ರತೆ ದೃಷ್ಠಿಯಿಂದ ದಾವಣಗೆರೆ ನಗರದ ನಾಗರೀಕರಿಗೆ ಪೊಲೀಸ್ ಇಲಾಖೆ ವತಿಯಿಂದ ಕೋರಿಕೊಳ್ಳುವುದೇನೆಂದರೆ,
1) ಸಂಶಯಾಸ್ಪದ ವ್ಯಕ್ತಿಗಳು, ವಸ್ತುಗಳು ಮತ್ತು ಸಂಶಯಾಸ್ಪದ ವಾಹನಗಳು ಕಂಡು ಬಂದಲ್ಲಿ ಸಾರ್ವಜನಿಕರು/ಮಾಧ್ಯಮದವರು ಪೊಲೀಸ್ ಇಲಾಖೆಗೆ ಹಾಗೂ ತುರ್ತು ಸಹಾಯವಾಣಿ ೧೧೨ ನಂಬರ್‌ಗೆ ಮಾಹಿತಿ ನೀಡುವುದು.
2) ಹೊಸಬರಿಗೆ / ಅಪರಿಚಿತರಿಗೆ ಮನೆ ಬಾಡಿಗೆಗೆ ನೀಡಬಾರದು.
3) ಸಂಶಯಾಸ್ಪದವರಿಗೆ/ ಗುರುತು ಪರಿಚಯ ಇಲ್ಲದವರಿಗೆ ಲಾಡ್ಜ್ ಹಾಗೂ ಇತರೆ ತಂಗುದಾಣಗಳಲ್ಲಿ/ ವಸತಿ ಗೃಹಗಳಲ್ಲಿ ರೂಂಗಳನ್ನು ಬಾಡಿಗೆಗೆ ನೀಡಬಾರದು.
4) ಮಾನ್ಯರು ಸಂಚರಿಸುವ ಮಾರ್ಗದಲ್ಲಿ ಯಾವುದೇ ವಾಹನಗಳ ನಿಲುಗಡೆ ಅವಕಾಶವಿರುವುದಿಲ್ಲ
5) ಮಾನ್ಯರು ಸಂಚರಿಸುವ ಮಾರ್ಗದಲ್ಲಿ ಬಂಟಿ0ಗ್ಸ್ / ಬ್ಯಾನರ್‌ ಗಳ ಮತ್ತು ಪ್ಲೇಕ್ಸ್ ಬೋರ್ಡ್‌‌ಗಳನ್ನು, ತಾತ್ಕಲಿಕ ಕಮಾನುಗಳನ್ನು ಮಾಡುವಾಗ ಕಡ್ಡಾಯವಾಗಿ ಚುನಾವಣಾಧಿಕಾರಿಗಳಿಂದ ಮತ್ತು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು.
     ಪೊಲೀಸ್ ಬಂದೋಬಸ್ತ್: ಮಾನ್ಯ ಭಧ್ರತೆ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ನಗರದಾದ್ಯಂತ ಕಟ್ಟೇಚ್ಚರ ವಹಿಸಲಾಗಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿರುತ್ತದೆ. ಮಾನ್ಯರ ಕಾರ್ಯಾಕ್ರಮದ ಸಮಯದಲ್ಲಿ ಪ್ರತಿಭಟನೆ ಮಾಡುವವರ ಮೇಲೆ ಹಾಗೂ ಕಪ್ಪು ಬಟ್ಟೆ ಪ್ರದರ್ಶನ ಮಾಡುವವರ ಮೇಲೆ ನಿಗಾವಹಿಸಲಾಗಿದೆ
ಸಮಾವೇಶಕ್ಕೆ ಬರುವ ವಾಹನಗಳ ಪಾರ್ಕಿಂಗ್‌ಗೆ ನಿಗಧಿಪಡಿಸಿರುವ ಸ್ಥಳಗಳು
1) ಹಾವೇರಿ ಕಡೆಯಿಂದ ಬರುವ ವಾಹನಗಳ ಪಾರ್ಕಿಂಗ್ ವಿವರ
ಮೊತಿವೀರಪ್ಪ ಕಾಲೇಜ್ ಒಳಗೆ ಕಾರ್ ಪಾರ್ಕಿಂಗ್ (ಹುಬ್ಬಳ್ಳಿ-ಹಾವೇರಿ ಕಡೆಯಿಂದ  ಕಾರುಗಳು ನಿಲುಗಡೆ)
ಬಾಪೂಜಿ ಸಮುಧಾಯ ಭವನದಿಂದ ಶಾರದಾ ನಾಖಾ ಬಂಧಿ ಸರ್ಕಲ್ ವರೆಗೆ ಎರಡೂ ಬದಿಯಲ್ಲಿ ಬಸ್ ಪಾರ್ಕಿಂಗ್(  ಹುಬ್ಬಳ್ಳಿ ಹಾವೇರಿ ಕಡೆಯಿಂದಬರುವ ಬಸ್‌ಗಳು ನಿಲುಗಡೆ)
ಎಸ್.ಎಸ್ ಎನ್‌ಕ್ಲೇವ್ ಪಕ್ಕ ಉತ್ತಮ ಲೇ ಔಟ್ ಆವರಣ ಬಸ್ ಪಾರ್ಕಿಂಗ್
2) ಚನ್ನಗಿರಿ, ಶಿವಮೊಗ್ಗ, ಕಡೆಯಿಂದ  ಬರುವ ವಾಹನಗಳ ಪಾರ್ಕಿಂಗ್ ವಿವರ
ಸ್ಟೇಡಿಯಂ ಒಳಭಾಗ ಬಸ್ ಪಾರ್ಕಿಂಗ್ (ಚನ್ನಗಿರಿ, ಶಿವಮೊಗ್ಗ, ಕಡೆಯಿಂದ ಬರುವ ಕಾರು ಮತ್ತು ಬೈಕ್ ಗಳು ನಿಲುಗಡೆ)
ಯು.ಬಿ.ಡಿ.ಟಿ ಕಾಲೇಜ್ ಒಳ ಭಾಗ ಕಾರ್ ಪಾರ್ಕಿಂಗ್ (ಚನ್ನಗಿರಿ, ಶಿವಮೊಗ್ಗ, ಕಡೆಯಿಂದ ಬರುವ ಕಾರುಗಳು ನಿಲುಗಡೆ)
ಕೆ.ಇ.ಬಿ ಸಮುಧಾಯ ಭವನ ಹದಡಿ ರಸ್ತೆ ಒಳಗೆ ಕಾರ್ ಪಾರ್ಕಿಂಗ್ (ಚನ್ನಗಿರಿ, ಶಿವಮೊಗ್ಗ, ಕಡೆಯಿಂದ ಬರುವ   ಕಾರುಗಳು ನಿಲುಗಡೆ)
ಡಿ.ಆರ್.ಆರ್ ಪಾಲಿಟೆಕ್ನಿಕ್ ಒಳಗೆ ಬೈಕ್ ಮತ್ತು ಕಾರು
ಐ.ಟಿ.ಐ ಕಾಲೇಜ್ ಒಳ ಭಾಗ ಬಸ್ ಪಾರ್ಕಿಂಗ್ (ಚನ್ನಗಿರಿ, ಶಿವಮೊಗ್ಗ, ಮಂಗಳೂರು, ಕಡೆಯಿಂದ ಬರುವ ಬಸ್‌ಗಳು ನಿಲುಗಡೆ)
ಮಾಗನೂರ ಬಸಪ್ಪ ಮೈದಾನದ ಒಳಗೆ ಬಸ್ ಪಾರ್ಕಿಂಗ್ (ಚನ್ನಗಿರಿ, ಶಿವಮೊಗ್ಗ, ಕಡೆಯಿಂದ ಬರುವ ಬಸ್‌ಗಳು ನಿಲುಗಡೆ)
3)ಚಿತ್ರದುರ್ಗ ತುಮಕೂರು ಕಡೆಯಿಂದ  ಬರುವ ವಾಹನಗಳ ಪಾರ್ಕಿಂಗ್ ವಿವರ.
ಮುರುಘಾ ರಾಜೇಂದ್ರ ಮಠದ ಒಳಗೆ   ಮತ್ತು ವಿ.ಐ.ಪಿ ಕಾರು ಪಾರ್ಕಿಂಗ್
ತ್ರಿಶೂಲ್ ಕಲಾಭವನ ಒಳಗೆ ಪಾರ್ಕಿಂಗ್ (ಸಾರ್ವಜನಿಕರ ಕಾರ್ ಮತ್ತು ಬೈಕ್ ಪಾರ್ಕಿಂಗ್ )
ಸೆಂಟ್ರಲ್ ವೇರ್ ಹೌಸ್ ಒಳಗೆ ಬಸ್ ಪಾರ್ಕಿಂಗ್  (ಚಿತ್ರದುರ್ಗ, ಕಡೆಯಿಂದ ಬರುವ ಬಸ್‌ಗಳ ನಿಲುಗಡೆ )
ಡಿ.ಆರ್.ಆರ್ ಶಾಲೆ ಒಳಗೆ ಬಸ್ ಪಾರ್ಕಿಂಗ್ (ಚಿತ್ರದುರ್ಗ, ಕಡೆಯಿಂದ ಬರುವ ಕಾರುಗಳ ನಿಲುಗಡೆ )
4) ಹರಪನಹಳ್ಳಿ ಜಗಳೂರು, ಹಡಗಲಿ ಕಡೆಯಿಂದ  ಬರುವ ವಾಹನಗಳ ಪಾರ್ಕಿಂಗ್ ವಿವರ
ಬೇತೂರು ರಸ್ತೆಯ ಚಾನಲ್ ಬಳಿಯ ಪಾರ್ಕಿಂಗ್ (ಜಗಳೂರು ಮಾರ್ಗವಾಗಿ ಬರುವ ಬಸ್ ನಿಲುಗಡ ಮತ್ತು ಚೆಕ್ ಪೋಸ್)
ಎ.ಪಿ.ಎಂ.ಸಿ ಒಳ ಭಾಗ ಬಸ್ ಪಾರ್ಕಿಂಗ್ (ಬಳ್ಳಾರಿ, ಹರಪನಹಳ್ಳಿ, ಹಡಗಲಿ ಜಗಳೂರು ಕಡೆಯಿಂದ ಬರುವ ಬಸ್ ಪಾರ್ಕಿಂಗ್)
ದುರ್ಗಾಂಭಿಕಾ ದೇವಸ್ಥಾನದ ಮೈದಾನ ಬೂದಾಳ್ ರಸ್ತೆ ( ಬೂದಾಳ್ ಹರಪನಹಳ್ಳಿ ಕಡೆಯಿಂದ ಬರುವವು) ಪಾರ್ಕಿಂಗ್
ವಾಹನ ಸಂಚಾರ ಮಾರ್ಗ ಸ್ಥಳಾಂತರ ನಿಷೇದ ಮತ್ತು ಸ್ಥಗಿತ ಮಾರ್ಗಗಳು 
1) ಕೊಂಡಜ್ಜಿ ರಸ್ತೆ ಮತ್ತು ಶಿಬಾರ ರಸ್ತೆಯಲ್ಲಿ ಓಡಾಡುವ ವಾಹನಗಳು ಆರ್‌ಟಿಓ ಸರ್ಕಲ್‌ನಿಂದ ಬ್ರೀಡ್ಜ್ ಮುಖಾಂತರ ಸಂಗೊಳ್ಳಿ ರಾಯಣ್ಣ ಸರ್ಕಲ್‌ಗೆ ಬರದಂತೆ ನಿಷೇಧಿಸಲಾಗಿದೆ.
2) ಹಳೇ ಕೋರ್ಟ್ ರಸ್ತೆಯಲ್ಲಿರುವ ಆಟೋ ನಿಲ್ದಾಣವನ್ನು  ದಿ:-೨೭-೦೪-೨೦೨೪ ಮತ್ತು ದಿ:-೨೮-೦೪-೨೦೨೪ ಎರಡು ದಿನಗಳ ಕಾಲ ಬೇರೆ ಕಡೆ ಸ್ಥಳಾಂತರಿಸಲಾಗಿದೆ ಮತ್ತು ಹಳೇ ಕೋರ್ಟ್ ರಸ್ತೆಯಲ್ಲಿ  ಮತ್ತು ಹಳೇ ಪಿ.ಬಿ ರಸ್ತೆಯಲ್ಲಿ ಬಾತಿ ಕೆg ಕಡೆಯಿಂದ ಎಪಿಎಂಸಿ ಫ್ಲೆöÊ ಓವರ್ ವರೆಗೆ ಮತ್ತು ಎವಿಕೆ ರಸ್ತೆ ಪಿ.ಜೆ ಕ್ರಾಸ್‌ನಿಂದ ವಿಜಯಾ ಹೋಟೆಲ್ ಆಟೋ ಸ್ಟಾö್ಯಂಡ್‌ವರೆಗೆ ಮತ್ತು ಹಳೇ ಕೋರ್ಟ್ ರಸ್ತೆಯ ಎ.ಸಿ.ಸರ್ಕಲ್‌ನಿಂದ  ಅಂಬೇಡ್ಕರ್ ಸರ್ಕಲ್, ವಿದ್ಯಾರ್ಥಿ ಭವನದವರೆಗೆ ಮತ್ತು ಹಳೇ ಐಬಿ ರಸ್ತೆಯ ಅರಸು ಸರ್ಕಲ್, ಜಯದೇವ ಸರ್ಕಲ್‌ವರೆಗೆ  ಮತ್ತು ಅಶೋಕ ರಸ್ತೆಯಲ್ಲಿ ಗಾಂಧಿ ಸರ್ಕಲ್‌ನಿಂದ ಜಯದೇವ ಸರ್ಕಲ್‌ವರೆಗೆ ಮತ್ತು ಎವಿಕೆ ಕಾಲೇಜ್ ರಸ್ತೆಯಲ್ಲಿರುವ ರಾಮ ಮಂದಿರ ಕ್ರಾಸ್‌ನಲ್ಲಿರುವ ಆಟೋ ನಿಲ್ದಾಣವನ್ನು ಮೇಲ್ಕಂಡ ದಿನಾಂಕಗಳAದು ಬೇರೆ ಕಡೆ ಸ್ಥಳಾಂತರಿಸಲು ಹಾಗೂ ಎವಿಕೆ ಕಾಲೇಜ್ ರಸ್ತೆಯಲ್ಲಿ ಮತ್ತು ಎವಿಕೆ ರಸ್ತೆ ಪಿ.ಜೆ ಕ್ರಾಸ್‌ನಿಂದ ವಿಜಯಾ ಹೋಟೆಲ್ ಆಟೋ ಸ್ಟಾö್ಯಂಡ್‌ವರೆಗೆ ಮತ್ತು ಅರುಣ ಸರ್ಕಲ್‌ನಿಂದ ರಾಂ&ಕೋ ಸರ್ಕಲ್- ಸಿಜಿ ಆಸ್ಪತ್ರೆ ರಸ್ತೆ ಸ್ಪಂದನಾ ಜ್ಯೂಸ್ ಸ್ಟಾಲ್-ಸಿಜಿ ಆಸ್ಪತ್ರೆ ರಸ್ತೆ ಬ್ಲಡ್ ಬ್ಯಾಂಕ್ ರಸ್ತೆ(ಪಿ.ಜೆ ಬಡಾವಣೆ ೮ನೇ ಮೇನ್)ವರೆಗೆ ಮತ್ತು ಹಳೆ ಪಿ.ಬಿ ರಸ್ತೆಯ ಬಾತಿ ಕೆರೆಯಿಂದ ಡಿಸಿಎಂ ರೈಲ್ವೆ ಅಂಡರ್ ಬ್ರಿಡ್ಜ್ ವರೆಗೆ ರಸ್ತೆಯಲ್ಲಿ ಓಡಾಡುವ ಆಟೊಗಳನ್ನು ಈ ಮಧ್ಯೆ ಸಂಚಾರ ಮತ್ತು ನಿಲುಗಡೆ ಮಾಡದಂತೆ ನಿಷೇಧಿಸಲಾಗಿದೆ ಈ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಆಟೋ ಚಾಲಕರಯ ಸಂಚಾರ ಪೊಲೀಸರು ಸೂಚಿಸಿದಂತೆ ಮಾರ್ಗ ಬದಲಾವಣೆ ಮಾಡಿಕೊಂಡು ಹೋಗುವುದು.
3) ದಿನಾಂಕ:೨೭-೦೪-೨೦೨೪ ಮತ್ತು ದಿನಾಂಕ;-೨೮-೦೪-೨೦೨೪ ರಂದು ಹಳೇ ಪಿಬಿ ರಸ್ತೆ ಬಾತಿ ಕೆರೆಯಿಂದ ಡಿಸಿಎಂ ರೈಲ್ವೆ ಅಂಡರ್ ಬ್ರಿಡ್ಜ್ ವರೆಗೆ ಲಾರಿ ಸಂಚಾರ ನಿಷೇಧಿಸಲಾಗಿದೆ.
ಸಂಚಾರ ಮಾರ್ಗ ಬದಲಾವಣೆ
1) ದಿನಾಂಕ;-೨೭-೦೪-೨೦೨೪ ಮತ್ತು ದಿ :-೨೮-೦೪-೨೦೨೪ ರಂದು ದಾವಣಗೆರೆ ನಗರದ ಹೈಸ್ಕೂಲ್ ಮೈದಾನದ ಪಕ್ಕದಲ್ಲಿರುವ ತಾತ್ಕಾಲಿಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ಹೊಸದಾಗಿ ನಿರ್ಮಾಣಗೊಂಡಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಎರಡು ದಿನಗಳ ಕಾಲ ತಾತ್ಕಾಲಿಕವಾಗಿ ವರ್ಗಾಹಿಸಲಾಗಿದ್ದು ಸಾರ್ವಜನಿಕರು ಸಹಕರಿಸಲು ಕೋರಿದೆ.
2)ಕೆ.ಎಸ್.ಆರ್.ಟಿ.ಸಿ (ನಗರ ಸಾರಿಗೆ, ಗ್ರಾಮೀಣ ಸಾರಿಗೆ, ಹೊರ ಜಿಲ್ಲೆ) ಬಸ್‌ಗಳನ್ನು ಹರಿಹರ ಕಡೆಯಿಂದ ದಾವಣಗೆರೆ ಹಳೇ ಪಿ.ಬಿ ರಸ್ತೆಯ ಮಾರ್ಗವಾಗಿ ಬರುವ ಬಸ್‌ಗಳನ್ನು ದಾವಣಗೆರೆ ಹಳೇ ಪಿ.ಬಿ ರಸ್ತೆಯ ಕಡೆಗೆ ಬಿಡದೇ, ಹರಿಹರದಿಂದ ಎನ್.ಹೆಚ್-೪೮ ರಸ್ತೆ ಮೂಲಕ ಬಾಡಾ ಕ್ರಾಸ್‌ಗೆ ಬಂದು ನಂತರ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಆದೇ ಮಾರ್ಗದಲ್ಲಿ ವಾಪಸ್ಸು ಹೋಗುವಂತೆ ತಿಳಿಸಿದೆ.
3) ಚಿತ್ರದುರ್ಗ ಮಾರ್ಗವಾಗಿ ಬರುವ ಬಸ್‌ಗಳನ್ನು ಎನ್.ಹೆಚ್-೪೮ ರಸ್ತೆ ಮೂಲಕ ಬಾಡಾ ಕ್ರಾಸ್ ಮಾರ್ಗವಾಗಿ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿ ಜನರನ್ನು ಇಳಿಸಿ ನಂತರ ಆದೇ ಮಾರ್ಗದಲ್ಲಿ ವಾಪಸ್ಸು ಚಿತ್ರದುರ್ಗ ಮತ್ತು ಬೆಳಗಾವಿ ಕಡೆಗೆ ಹೋಗುವಂತೆ ಸೂಚನೆ ನೀಡಲಾಗಿದೆ.
4) ಜಗಳೂರು ಮಾರ್ಗವಾಗಿ ಮತ್ತು ಹರಪನಹಳ್ಳಿ, ಅರಸಿಕೇರೆ,ಕಂಚಿಕೆರೆ ಬೆಂಡಿಗೆರೆ ಮಾರ್ಗವಾಗಿ ಬರುವ ಬಸ್‌ಗಳನ್ನು ಮತ್ತು ಮಾಗಾನಹಳ್ಳಿ ಕಡೆಯಿಂದ ಬರುವ ಬಸ್‌ಗಳು ಬೇತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಜಗಳೂರು ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಆದೇ ಮಾರ್ಗದಲ್ಲಿ ವಾಪಸ್ಸು ಹೋಗುವಂತೆ ಸೂಚನೆ ನೀಡಲಾಗಿದೆ.
5) ಕೊಂಡಜ್ಜಿ ಮಾರ್ಗವಾಗಿ ದಾವಣಗೆರೆ ನಗರದ ಕಡೆ ಬರುವ ಬಸ್‌ಗಳನ್ನು ಹರಿಹರದಿಂದ ಎನ್.ಹೆಚ್-೪೮ ರಸ್ತೆ ಮೂಲಕ ಬಾಡಾ ಕ್ರಾಸ್‌ಗೆ ಬಂದು ನಂತರ ನೂತನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದು ಆದೇ ಮಾರ್ಗದಲ್ಲಿ ವಾಪಸ್ಸು ಹೋಗುವಂತೆ ಸೂಚನೆ ನೀಡಲಾಗಿದೆ.
6) ಶಾಮನೂರು ಕ್ರಾಸ್ ನಿಂದ ಶಾರದಾಂಭ ಸರ್ಕಲ್ ವರೆಗೆ ವಾಹನಗಳು ಬರುವುದು, ನಂತರ ಶಾರದಾಂಭ ಸರ್ಕಲ್‌ನಿಂದ ಸಂಗೊಳ್ಳಿರಾಯಣ್ಣ ಸರ್ಕಲ್‌ಗೆ ಯಾವುದೇ ವಾಹನಗಳು (ಬಸ್ ಮತ್ತು ಲಾರಿ) ಓಡಾಡದಂತೆ ನಿಷೇಧಿಸಲಾಗಿದೆ.
7)ಹದಡಿ ರಸ್ತೆ ಮಾರ್ಗವಾಗಿ ಬರುವಂತಹ ವಾಹನಗಳು ಸ್ಟೇಡಿಯಂ (ಎಆರ್‌ಜಿ ಕಾಲೇಜ್ ಕ್ರಾಸ್) ವರೆಗೆ ಬಂದು ವಾಪಸ್ ಹೋಗಲು ಸೂಚನೆ ನೀಡಲಾಗಿದೆ.
8) ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿರುವ ಖಾಸಗಿ ಬಸ್ ನಿಲ್ದಾಣವನ್ನು ದಿನಾಂಕ;-೨೭-೦೪-೨೦೨೪ ಮತ್ತು ದಿನಾಂಕ;-೨೮-೦೪-೨೦೨೪ ರಂದು ಯಾವುದೇ ಬಸ್‌ಗಳ ಬರದಂತೆ ನಿಷೇಧಿಸಿ ಮತ್ತು ಸದರಿ ಬಸ್‌ಗಳು ಜಗಳೂರು ಕಡೆಯಿಂದ ಬರುವ ಖಾಸಗಿ ಬಸ್‌ಗಳು ಹೊಸದಾಗಿ ನಿರ್ಮಿಸಿರುವ ಜಗಳೂರು ಬಸ್‌ನಿಲ್ದಾಣದಲ್ಲಿ, ಹದಡಿ ರಸ್ತೆಯಿಂದ ಬರುವ ಖಾಸಗಿ ಬಸ್‌ಗಳು ಮಾಗನೂರು ಬಸಪ್ಪ ಮೈದಾನದಲ್ಲಿ ಮತ್ತು ಚಿತ್ರದುರ್ಗ, ಆನಗೋಡು ಮಾರ್ಗವಾಗಿ ಬರುವ ಖಾಸಗಿ ಬಸ್‌ಗಳು ಎಪಿಎಂಸಿ ದನದ ಮಾರ್ಕೇಟ್‌ನಲ್ಲಿ ನಿಲುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ.
9)ಬಾತಿ ಕಡೆಯಿಂದ ಗಾಂಧಿ ಸರ್ಕಲ್ ವರೆಗೆ ಹಾಗೂ ಶಾಮನೂರು, ಲಕ್ಷಿö್ಮÃ ಫ್ಲೋರ್ ಮಿಲ್, ಗುಂಡಿ ಸರ್ಕಲ್, ವಿಧ್ಯಾರ್ಥಿ ಭವನ, ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್, ಗಾಂಧಿ ಸರ್ಕಲ್, ಹಳೇ ಪಿ.ಬಿ ರಸ್ತೆ ಹಳೇ ಕೋರ್ಟ್ ರಸ್ತೆ ಮತ್ತು ಎ.ವಿ.ಕೆ ರಸ್ತೆ ಮಾರ್ಗವಾಗಿ ಬಾರದಂತೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಸೂಚನೆ ನೀಡಲಾಗಿದೆ.
10)ಹಾವೇರಿ ಮತ್ತು ಹರಿಹರ ಕಡೆಯಿಂದ ದಾವಣಗೆರೆ ನಗರಕ್ಕೆ ಬರುವ ಲಾರಿ ಮತ್ತು ಇತರೆ ವಾಹನಗಳನ್ನು ಬಾತಿ ಒಳಗಿನಿಂದ ಎನ್‌ಹೆಚ್-೪೮ ಮುಖಾಂತರ ಹೋಗುವಂತೆ ಸೂಚನೆ ನೀಡಲಾಗಿದೆ.
11) ಚಿತ್ರದುರ್ಗ ಕಡೆಯಿಂದ ಬರುವ ಲಾರಿಗಳು ಡಿಸಿಎಂ ರೈಲ್ವೆ ಅಂಡರ್ ಪಾಸ್ ಬಳಿಯಿರುವ ಎಪಿಎಂಸಿ ರಸ್ತೆ ಕಡೆಗೆ ತೆರಳುವಂತೆ ಸೂಚನೆ ನೀಡಲಾಗಿದೆ.
12) ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ದಿನಾಂಕ;-೨೮-೦೪-೨೦೨೪ ರಂದು ದಾವಣಗೆರೆ ನಗರದ ಕೆ.ಆರ್ ಮಾರ್ಕೇಟ್, ಗಡಿಯಾರಕಂಬ ಸುತ್ತಮುತ್ತ, ಕಾಯಿಪೇಟೆ ಸುತ್ತಮುತ್ತ ಹಾಗೂ ಇತರೆ ಕಡೆಗಳಲ್ಲಿ ನಡೆಯುವ ಭಾನುವಾರದ ಸಂತೆಯನ್ನು ಮುಂದೂಡಲಾಗಿದೆ ಮಾನ್ಯ ಜಿಲ್ಲಾಧಿಕಾರಿಗಳು ದಾವಣಗೆರೆ ಜಿಲ್ಲೆ ಆದೇಶಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!