ನರೇಗಾ ಯೋಜನೆಯಲ್ಲಿ ಹಣ ಕಡಿತ: ನಿರಾಶಾದಾಯಕ ಬಜೆಟ್ – ರಾಘವೇಂದ್ರ ಗೌಡ

ದಾವಣಗೆರೆ: ನಿರ್ಮಲಾ ಸೀತಾರಾಮನ್ ಬಜೆಟ್ ಇದು ನಿರಾಶೆದಾಯಕವಾಗಿದ್ದು, ರಾಷ್ಟ್ರೀಯ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸುಮಾರು 96 ಸಾವಿರ ಕೋಟಿ ಹಣ ಕಡಿತ ಮಾಡಿರುವುದು, ದೂರ ದೃಷ್ಟಿ ಇಲ್ಲದ ಸರ್ಕಾರ ಅನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲಾ, ಕಾರೋನ ಎಂಬ ಮಹಾ ಮಾರಿ ಬಂದಾದ ನಂತರ ದೇಶದ ಎಲ್ಲಾ ಹಳ್ಳಿಗಳಲ್ಲಿ ಜನ ಗುಳೆಹೋಗದಂತೆ ಕೆಲಸ ಮಾಡಿ ಜನರಿಗೆ ಜೀವನ ನಡೆಸುವುದಕ್ಕೆ ಬಹಳ ಉಪಯೋಗವಾಗಿದ್ದ ಮಹತ್ತರ ಯೋಜನೆ ಇದು, ಹಾಗೆ ಹಳ್ಳಿಗಳಲ್ಲಿ ಸಣ್ಣ ಸಣ್ಣ ಕೆರೆಗಳ ಅಭಿರುದ್ದಿ, ಹೊಲಕ್ಕೆ ಹೋಗುವ ರಸ್ತೆಗಳ ಅಭಿರುದ್ದಿ, ಬದು ನಿರ್ಮಾಣ ಇನ್ನೂ ಅನೇಕ ಕೆಲಸಗಳನ್ನು ರೈತರೇ ಮಾಡಿಕೊಂಡು 24 ತಾಸುಗಳಲ್ಲೇ ಅವರ ಖಾತೆಗಳಿಗೆ ಜಮಾ ಹಾಗುವ ವ್ಯವಸ್ಥೆ ಯು ಪಿ ಎ ಸರ್ಕಾರ ಜಾರಿಗೆ ತಂದಿತ್ತು, ಆದರೆ ಬಿ ಜೆ ಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ನಿದಾನ ವಾಗಿ ಡೈಲ್ಯೂಟ್ ಮಾಡುವ ಹಾಗೆ ಕಾಣುತ್ತ ಇದೆ, ನಮ್ಮ ರಾಜ್ಯಕ್ಕೆ ಬರಬೇಕಾದ ಜಿ ಎಸ್ ಟಿ ಹಣವನ್ನು ಸರಿಯಾದ ಕಾಲಕ್ಕೆ ಕೊಡದೆಮಲತಾಯಿ ಧೋರಣೆ ಮಾಡುತ್ತಿರುವುದು ನೋಡಿದರೆ,24 ಜನರನ್ನು ಎಂ ಪಿ ಗಳಾಗಿ ಆಯ್ಕೆ ಮಾಡಿ ಕಳಿಸಿದ್ದ ಕರ್ನಾಟಕದ ಜನತೆಗೆ ನಿರಾಷಾದಾಯಕವಾಗಿದೆ, ರಾಜ್ಯದಲ್ಲೂ ಬಿ ಜೆ ಪಿ ರಾಷ್ಟದಲ್ಲೂ ಬಿಜೆಪಿ ಇದ್ದರೆ ಅಭಿರುದ್ದಿಯ ಮಹಾಪರ್ವವೇ ಹಾಗುತ್ತದೆ ಎಂದು ಹೇಳಿಗೆದ್ದ ಬಿಜೆಪಿಯು ಪ್ರಜೆಗಳಿಗೆ ಮಾಡಿದ ಮೋಸ, ರೈತರಿಗೆ ಮಾಡಿದ ಮೋಸ,

ಜಿ ಆರ್ ರಾಘವೇಂದ್ರ ಗೌಡ
ಸಂಚಾಲಕರು,
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ(ಕೆ ಪಿ ಸಿ ಸಿ )ದಾವಣಗೆರೆ

Leave a Reply

Your email address will not be published. Required fields are marked *

error: Content is protected !!