ಮೊಜು ಮಾಡುವ ಶಾಸಕ ನಾನಲ್ಲ; ಮಾಜಿ ಶಾಸಕರಿಗೆ ಎದಿರೇಟು ನೀಡಿದ ಹಾಲಿ ಶಾಸಕ ರಾಮಪ್ಪ

IMG-20210706-WA0016

 

ಹರಿಹರ.ಜು.6:  ಬಡವರ ದುಡ್ಡಿನಲ್ಲಿ ಮಜಾಮಾಡುವ ಶಾಸಕ ನಾನಲ್ಲ ಬಡವರ  ಕಷ್ಟ ನೋವುಗಳಿಗೆ ಸ್ಪಂದಿಸುವ ವ್ಯಕ್ತಿ ನಾನು ಎಂದು ಶಾಸಕ ಎಸ್ ರಾಮಪ್ಪ ಹೇಳಿದರು

ರಚನಾ ಕ್ರೀಡಾ  ಟ್ರಸ್ಟಿನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು  ಸೈಟ್ ಕೊಡಿಸುವ ನೆಪದಲ್ಲಿ ಬಡವರ ಹಣವನ್ನು ಪಡೆದುಕೊಂಡು ಸೈಟುಗಳ ನೀಡದೆ ಮಜಾ ಮಾಡುತ್ತಿದ್ದಾರೆ ಎಂದು ವಿನಾಕಾರಣ ಮಾಜಿ ಶಾಸಕ ಬಿ ಪಿ ಹರೀಶ್ ನನ್ನ ಮೇಲೆ  ಆರೋಪ ಮಾಡುತ್ತಿರುವುದು ಶೋಭೆ ತರುವ ವಿಷಯವಲ್ಲ ಅವರಿಗೆ ನಿಜವಾಗಲೂ ಬಡವರ ಮೇಲೆ ಕಾಳಜಿ ಕನಿಕರ ಇದ್ದರೆ   ಬಡ ಮಧ್ಯಮ ವರ್ಗದವರಿಗೆ ನಿವೇಶನ ಖರೀದಿ ಮಾಡಿ ಅವರಿಗೆ ನೀಡಲಿ ಎಂದು ಸವಾಲೆಸೆದರು

ಮಾಜಿ ಶಾಸಕ ಬಿ.ಪಿ ಹರೀಶ್ ಹತ್ತು ವರ್ಷದಿಂದ ಸೋಲನ್ನು ಅನುಭವಿಸಿದ್ದಕ್ಕೆ ಬುದ್ಧಿ ಭ್ರಮಣೆಯಾಗಿದೆ ಬಿಜೆಪಿ ಕಾಂಗ್ರೆಸ್ ಕೆಜೆಪಿ ಬಿಜೆಪಿಗೆ ಪಕ್ಷಾಂತರ ಮಾಡಿ 2008 ರಲ್ಲಿ ವಿಧಾನಸಭೆ ಸದಸ್ಯತ್ವಕ್ಕೆ ಅವಧಿಗಿಂತ ಮುಂಚೆ ರಾಜೀನಾಮೆ ನೀಡಿ ಮತ ನೀಡಿದ ಕ್ಷೇತ್ರದ ಜನರನ್ನು ಅವಮಾನಿಸಿದವರಿಂದ ನೀತಿ ಪಾಠದ ಅಗತ್ಯವಿಲ್ಲ ಎಂದು ಕುಟುಕಿದರು . ಬಡವರ ಹಣವನ್ನು ಕಬಳಿಸುವ ಜಾಯಮಾನ ನನ್ನದಲ್ಲ ಮೊದಲಿನಿಂದಲೂ ಬಡವರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿರುವ ವ್ಯಕ್ತಿ ನಾನು ನಿವೇಶನ ವಿಚಾರದಲ್ಲಿ ಈಗಾಗಲೇ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲು ಜಮೀನನ್ನು ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಿ ಮಂಜೂರಾತಿ ಪ್ರಕ್ರಿಯೆ ಸರ್ಕಾರ ಮಟ್ಟದಲ್ಲಿದೆ ಅತಿ ಶೀಘ್ರದಲ್ಲೇ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗುವುದೆಂದು ಎಂದು ಹೇಳಿದರು

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಅಡ್ಡಗಾಲು ಹಾಕಿಲ್ಲ ಎಂದು ಹೇಳುವ ಮಾಜಿ ಶಾಸಕರು ಕ್ಷೇತ್ರಕ್ಕೆ ಮಂಜೂರಾಗಿರುವ ಭೈರನಪಾದ ಏತ ನೀರಾವರಿ ಯೋಜನೆಯ ಎಕ್ಕೆಗೊಂದಿ ಬಾನುವಳ್ಳಿ ಚಿಕ್ಕಬಿದರಿ ತಡೆ  ಸೇತುವೆ ರಸ್ತೆ ಕುಮಾರಳ್ಳಿ ಕೆರೆ ತುಂಬಿಸುವ ಯೋಜನೆ ನಗರೋತ್ಥಾನ ಯೋಜನೆ ಗ್ರಾಮೀಣಾಭಿವೃದ್ಧಿ ಇಲಾಖೆ ಲೋಕೋಪಯೋಗಿ ಇಲಾಖೆ ಸಮಾಜ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಇಲಾಖೆ ಮೂಲಭೂತ ಸೌಕರ್ಯ ಇನ್ನೂ ಹತ್ತು ಹಲವಾರು ಕಾಮಗಾರಿಗಳ ಟೆಂಡರ್ ಕರೆದಿದ್ದು ಸರ್ಕಾರದ ಹಂತದಲ್ಲಿ ರೂ ಅನುದಾನವನ್ನು ಬಿಡುಗಡೆ ಮಾಡದೇ ಸರ್ಕಾರ ಮತ್ತು ಮಾಜಿ ಶಾಸಕರು ತಾರತಮ್ಮ ನೀತಿ ಧೋರಣೆ ಮಾಡುತ್ತಿರುವುದಕ್ಕೆ ಹಿಡಿದ ಕೈಗನ್ನಡಿ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು

ಕ್ಷೇತ್ರದ ಜನ ಎಂದು ನನಗೆ ಬೆಂಬಲವಾಗಿ ಇರುತ್ತಾರೆ ಎಂಬ ನಂಬಿಕೆ ನನಗಿದೆ ಪಕ್ಷದಲ್ಲೂ ನನ್ನ ನಾಯಕತ್ವಕ್ಕೆ ಯಾವುದೇ ಧಕ್ಕೆಯಿಲ್ಲ ಬಿಜೆಪಿ ಪಕ್ಷದಲ್ಲಿ ಆಕಾಂಕ್ಷಿಗಳು ಹೆಚ್ಚಾಗಿರುವ ಪ್ರಯುಕ್ತ ಅವರಿಗೆ ಮುಂದಿನ ಭವಿಷ್ಯದ ಬಗ್ಗೆ ಆತಂಕ ಉಂಟಾಗಿರಬಹುದು ಎಂದರು.

ನಗರ ಗ್ರಾಮಾಂತರ ಅಧ್ಯಕ್ಷರುಗಳಾದ ಎಂ.ಬಿ ಅಬಿದಲಿ. ಎಲ್ ಬಿ ಹನುಮಂತಪ್ಪ .ನಗರಸಭಾ ಸದಸ್ಯರುಗಳಾದ ಎಂ ಎಸ್ ವಸಂತ್ .ಬಾಬುಲಾಲ್ ಎಂಎಸ್ .ಅಲೀಮ್ .ಹಾಗೂ ಬಾನುವಳ್ಳಿ ದಾದಾಪೀರ್ .ಪಾರ್ವತಮ್ಮ .ಭಾಗ್ಯಾದೇವಿ .ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಪತ್ರಿಕಾಗೋಷ್ಠಿಯಲ್ಲಿ ಇದ್ದರು

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!