ಏಪ್ರಿಲ್ 2 ರಂದು ಚಂದ್ರ ದರ್ಶನ

ಹೊನ್ನಾಳಿ: ಏಪ್ರೀಲ್ 1 ರ ಶುಕ್ರವಾರ ಅಮಾವಾಸ್ಯೆ ಪೂಜೆ ಹಾಗೂ ಏಪ್ರಿಲ್ 2ರಶನಿವಾರದಂದು ಚಂದ್ರ ದರ್ಶನವಾಗಲಿದೆ ಎಂದು ಪುರೋಹಿತರಾದ ಹೊನ್ನಾಳಿಯ ಎಂ.ಎಸ್.ಶಾಸ್ತ್ರಿ ಹೊಳೆಮಠ ತಿಳಿಸಿದ್ದಾರೆ. ಮಾರ್ಚ್ 31 ರ ಗುರುವಾರ ಮಧ್ಯಾಹ್ನ 12.05ಕ್ಕೆ ಅಮಾವಾಸ್ಯೆ ಪ್ರಾರಂಭವಾಗಲಿದ್ದು, ಏಪ್ರಿಲ್ 1 ರ ಶುಕ್ರವಾರ ಮಧ್ಯಾಹ್ನ 12 ಕ್ಕೆ ಮುಗಿಯಲಿದೆ, ಏಪ್ರಿಲ್ 2 ರ ಶನಿವಾರದಂದು ಬೆಳಿಗ್ಗೆ 11. 58ಕ್ಕೆ ಯುಗಾದಿ ಪಾಡ್ಯ ಮುಕ್ತಾಯವಾಗುತ್ತದೆ. ಅಭ್ಯಂಗ ಸ್ನಾನ ಬೇವು, ಬೆಲ್ಲ ಸಿಹಿ ಕಹಿ ಸವಿದು ಆಚರಣೆ ಮಾಡಿ, ಏಪ್ರಿಲ್ 2 ರ ಶನಿವಾರ ನೂತನ ಶುಭಕೃತ ನಾಮ ಸಂವತ್ಸರವು ಆರಂಭಗೊಳ್ಳಲಿದ್ದು, ಏಪ್ರಿಲ್ 2 ರ ಶನಿವಾರ ಸಂಜೆ ಚಂದ್ರದರ್ಶನ ವಾಗಲಿದೆ ಎಂದು ತಿಳಿಸಿದರು.